• Home
  • »
  • News
  • »
  • state
  • »
  • Special Train: ನೈರುತ್ಯ ರೈಲ್ವೆಯಿಂದ ಸ್ಪೆಷಲ್ ಟ್ರೈನ್; ಹಬ್ಬಕ್ಕೆ ಹೋಗುವವರು ಫುಲ್ ಖುಷ್

Special Train: ನೈರುತ್ಯ ರೈಲ್ವೆಯಿಂದ ಸ್ಪೆಷಲ್ ಟ್ರೈನ್; ಹಬ್ಬಕ್ಕೆ ಹೋಗುವವರು ಫುಲ್ ಖುಷ್

ನೈರುತ್ಯ ರೈಲ್ವೆಯಿಂದ ಸ್ಪೆಷಲ್ ಟ್ರೈನ್

ನೈರುತ್ಯ ರೈಲ್ವೆಯಿಂದ ಸ್ಪೆಷಲ್ ಟ್ರೈನ್

ನೈರುತ್ಯ ರೈಲ್ವೆ ದೀಪಾವಳಿಗೆ ಬಂಪರ್ ಗಿಫ್ಟ್ ಕೊಟ್ಟಿದೆ. ರಾಜ್ಯ ಸೇರಿ ದೇಶದ ವಿವಿಧೆಡೆ ಸ್ಪೆಷಲ್ ಟ್ರೈನ್ ಚಲಿಸುತ್ತಿದ್ದು, ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ

  • Share this:

ಹುಬ್ಬಳ್ಳಿ : ಹಬ್ಬದ ತಯಾರಿಯಲ್ಲಿರುವವರಿಗೆ ರೈಲ್ವೆ ಇಲಾಖೆಯಿಂದ (Railway Department) ಸಿಹಿ ಸುದ್ದಿ ಸಿಕ್ಕಿದೆ. ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳನ್ನು ಬಿಡಲಾಗಿದೆ. ದೀಪಾವಳಿ ಹಬ್ಬಕ್ಕೆ (Deepavali Festival) 30 ವಿಶೇಷ ರೈಲುನ್ನು ಬಿಡಲಾಗಿದೆ. ನೈರುತ್ಯ ರೈಲ್ವೆಯಿಂದ ದೇಶದ ವಿವಿಧೆಡೆ 117 ಟ್ರಿಪ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇತರೆ ರೈಲ್ವೆ ವಲಯಗಳಿಂದಲೂ ವಿಶೇಷ ರೈಲು (Special Train) ಬಿಡಲಾಗಿದೆ.


ದೀಪಾವಳಿ ಒಟ್ಟು 38 ವಿಶೇಷ ರೈಲುಒಟ್ಟು 133 ಟ್ರಿಪ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಶವಂತಪುರದಿಂದ ಬೀದರ್, ಕಲಬುರಗಿ, ಮುರುಡೇಶ್ವರ, ಹುಬ್ಬಳ್ಳಿ, ಬೆಳಗಾವಿ ಗಳಿಗೆ ವಿಶೇಷ ರೈಲು ಬಿಡಲಾಗಿದೆ. ಶಿವಮೊಗ್ಗ - ಚೆನ್ನೈ, ಬೆಂಗಳೂರು - ದಾನಾಪುರ, ಹುಬ್ಬಳ್ಳಿ - ರಾಮಗುಂಡಮ್ ಮತ್ತಿತರರ ರೂಟ್ ಗಳಲ್ಲಿ ವಿಶೇಷ ರೈಲು ಬಿಡಲಾಗಿದೆ. ಹೈದರಾಬಾದ್ – ಯಶವಂತಪುರ, ಬೆಂಗಳೂರು ಗಳಿಗೂ ವಿಶೇಷ ರೈಲು ಬಿಡಲಾಗಿದೆ.


ಈ ಕುರಿತು ಪ್ರತಿಕ್ರಿಯಿಸಿರೊ ಸಿ.ಪಿ.ಆರ್.ಓ ಅನೀಷ್ ಹೆಗಡೆ, ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗುತ್ತಾರೆ. ಜನತೆಗೆ ಅನುಕೂಲ ಆಗಲಿ ಅಂತ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗಪಡೆದುಕೊಳ್ಳಲು ನೈರುತ್ಯ ರೈಲ್ವೆ ಅನೀಷ್ ಹೆಗಡೆ ಮನವಿ ಮಾಡಿದ್ದಾರೆ.


ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿನ ವಿಶೇಷ ರೈಲುಗಳ ವಿವರ


ಯಶವಂತಪುರ - ಹೈದರಾಬಾದ್, ಯಶವಂತಪುರ - ಮುರುಡೇಶ್ವರ, ಮೈಸೂರು - ಹುಬ್ಬಳ್ಳಿ, ಯಶವಂತಪುರ - ಹುಬ್ಬಳ್ಳಿ, ಬೆಂಗಳೂರು - ಕಲಬುರಗಿ, ಯಶವಂತಪುರ - ಬೀದರ್, ಯಶವಂತಪುರ - ತಿರುವೇಲಿ, ಕಣ್ಣೂರ್ - ಯಶವಂತಪುರ, ಶಿವಮೊಗ್ಗ - ಚೆನ್ನೈ, ಬೆಂಗಳೂರು - ದಾನಾಪುರ, ಯಶವಂತಪುರ - ವಿಜಯಪುರ, ಹುಬ್ಬಳ್ಳಿ - ವಿಜಯಪುರ, ಹುಬ್ಬಳ್ಳಿ - ರಾಮೇಶ್ವರಮ್, ವಿಜಯಪುರ - ಮಂಗಳೂರು, ಬೆಳಗಾವಿ - ಯಶವಂತಪುರ, ಯಶವಂತಪುರ - ಬೀದರ್, ಬೆಂಗಳೂರು - ನಾಗರಕೊಯಿಲ್, ಹೈದರಾಬಾದ್ - ಬೆಂಗಳೂರು, ವಿಶಾಖಪಟ್ಟಣಂ - ಬೆಂಗಳೂರು, ದಿಬ್ರುಗರ್ - ಬೆಂಗಳೂರು ಮೊದಲಾದ ಕಡೆ ವಿಶೇಷ ರೈಲು ಓಡಿಸಲಾಗುತ್ತಿದೆ.


ಇದನ್ನೂ ಓದಿ: Rahul-Ramya: ಭಾರತ್​ ಜೋಡೋ ಯಾತ್ರೆಗೆ ಪದ್ಮಾವತಿ ಎಂಟ್ರಿ; ರಾಹುಲ್ ಗಾಂಧಿ​ಗೆ ರಮ್ಯಾ ಸಾಥ್​


ಉದ್ಯೋಗ ಮೇಳಕ್ಕೆ ಚಾಲನೆ


10 ಲಕ್ಷ ಉದ್ಯೋಗಾರ್ಥಿಗಳಿಗಾಗಿ  ಪ್ರಧಾನಮಂತ್ರಿಗಳು ನಾಳೆ  ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ 75,000 ಹೊಸ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ. ನೈಋತ್ಯ ರೈಲ್ವೆ ವಲಯದಲ್ಲಿ ಮೊದಲನೇ ಹಂತದಲ್ಲಿ 200 ಉದ್ಯೋಗಾರ್ಥಿಗಳಿಗೆ ಹುಬ್ಬಳ್ಳಿಯಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ. ಹೊಸದಾಗಿ ಸೇರ್ಪಡೆಯಾದ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುವುದು. ಆಯ್ಕೆ ಪಕ್ರಿಯೆಯನ್ನು ಸರಳೀಕರಿಸಲಾಗಿದ್ದು ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತಂತ್ರಜ್ಞಾನ ಆಧರಿತ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ.


ಯುವಜನರಿಗಾಗಿ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ನಾಗರಿಕ ಕಲ್ಯಾಣಕ್ಕಾಗಿ ಇರುವ ಸರ್ಕಾರದ ನಿರಂತರ ಬದ್ಧತೆಯನ್ನು ಕಾರ್ಯಕ್ರಮ ಸಾದರ ಪಡಿಸುತ್ತದೆ. ಪ್ರಧಾನ ಮಂತ್ರಿ ಮೋದಿ ಅವರು 10 ಲಕ್ಷ ಉದ್ಯೋಗಾರ್ಥಿಗಳಿಗಾಗಿ   ಅಕ್ಟೋಬರ್ 22 ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಸಮಾವೇಶದ ಮೂಲಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ.


ಇದನ್ನೂ ಓದಿ: JDS Politics: ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್​ ರಣಕಹಳೆ; ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​


75,000 ಉದ್ಯೋಗಿಗಳಿಗೆ ನೇಮಕಾತಿ ಪತ್ರ


ಈ ಸಮಾರಂಭದಲ್ಲಿ ಹೊಸದಾಗಿ ಸೇರ್ಪಡೆಯಾದ 75,000 ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುವುದು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ನೇಮಕಾತಿಗೊಂಡ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹುಬ್ಬಳ್ಳಿಯಲ್ಲಿ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೊಸ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಿದ್ದಾರೆ ಎಂದು ಅನೀಷ್ ಹೆಗಡೆ ಮಾಹಿತಿ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: