ಯಾದಗಿರಿಯ ಗಡೇ ದುರ್ಗಾದೇವಿಗೂ ಡಿಕೆಶಿಗೂ ಅವಿನಾಭಾವ ಸಂಬಂಧ; ಕೆಪಿಸಿಸಿ ಪಟ್ಟ ಸಿಗಲೆಂದು ದೇಗುಲದಲ್ಲಿ ವಿಶೇಷ ಪೂಜೆ

ದೇವಸ್ಥಾನದ ಅರ್ಚಕ ಮಹಾದೇವಪ್ಪ ಅವರನ್ನು ಡಿಕೆಶಿ ಬೆಂಗಳೂರು ಗೆ ಕರೆಸಿಕೊಂಡಿದ್ದಾರೆ. ನಾಳೆ ಶಿವಕುಮಾರ್ ಮನೆಯಲ್ಲಿ ವಿಶೇಷ ಪೂಜೆಯನ್ನು ಮಹಾದೇವಪ್ಪ ನೆರವೇರಿಸಲಿದ್ದಾರೆ. ಮಹಾದೇವಪ್ಪ ಅವರು ಡಿಕೆಶಿ ಮನೆಯಲ್ಲಿ ಸಾಕಷ್ಟು ಬಾರಿ ಪೂಜೆ ಮಾಡಿದ್ದಾರೆ.

HR Ramesh | news18-kannada
Updated:January 17, 2020, 3:30 PM IST
ಯಾದಗಿರಿಯ ಗಡೇ ದುರ್ಗಾದೇವಿಗೂ ಡಿಕೆಶಿಗೂ ಅವಿನಾಭಾವ ಸಂಬಂಧ; ಕೆಪಿಸಿಸಿ ಪಟ್ಟ ಸಿಗಲೆಂದು ದೇಗುಲದಲ್ಲಿ ವಿಶೇಷ ಪೂಜೆ
ಗುಡೇ ದುರ್ಗಾದೇವಿ ಮತ್ತು ಡಿಕೆ ಶಿವಕುಮಾರ್.
  • Share this:
ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಿಕೆಶಿ ಹೆಸರು ಬಹುತೇಕ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದ್ದು, ಹೊಸ ಹುದ್ದೆ ಸ್ವೀಕರಿಸುವ ಮುನ್ನ ಡಿಕೆಶಿ ಟೆಂಪಲ್ ರನ್ ನಡೆಸುತ್ತಿದ್ದಾರೆ. ಇತ್ತ ಯಾದಗಿರಿಯಲ್ಲೂ ಡಿಕೆಶಿಗೆ ಸಂಕಷ್ಟ ನಿವಾರಣೆಯಾಗಿ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಲಿ ಎಂದು ಹಾರೈಸಿ ಗಡೇ ದುರ್ಗಾದೇವಿ ದೇಗುಲದಲ್ಲಿ ವಿಶೇಷ ಪೂಜೆ ನಡೆಸಲಾಗಿದೆ...!

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೂ  ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗು ಅವಿನಾಭಾವ ಸಂಬಂಧ. ಆದರೆ, ಗಡೇ ದುರ್ಗಾದೇವಿಯ ಶಾಪದಿಂದಲೇ ಡಿಕೆಶಿ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು ಎನ್ನಲಾಗುತ್ತಿತ್ತು. ಕಳೆದ ವರ್ಷ ಡಿಕೆ ಶಿವಕುಮಾರ್ ಅವರು ಗಡೇ ದುರ್ಗಾದೇವಿ ಜಾತ್ರೆಗೆ ಆಗಮಿಸಿ, ದೇವಿಯ ದರ್ಶನ ಪಡೆಯುತ್ತೆನೆಂದು ಹೇಳಿದರು. ಆದರೆ ಮಾತಿನಂತೆ ನಡೆದುಕೊಳ್ಳಲಿಲ್ಲ. ಇದರಿಂದ ದೇವಿಯ ಶಾಪ ತಟ್ಟಿ, ಅವರು  ಜೈಲು ಸೇರುವಂತಾಯಿತು ಎಂದು ದೇವಸ್ಥಾನದ ಅರ್ಚಕ ಮಹಾದೇವಪ್ಪ ಹೇಳುತ್ತಾರೆ. ನಂತರದಲ್ಲಿ ಖುದ್ದು ಡಿಕೆಶಿ ಅವರು ಸಂಕಷ್ಟ ನಿವಾರಣೆಗಾಗಿ ದೇವಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ದೇವಿಯ ಪಾದಕ್ಕೆ ಇಟ್ಟು ಪೂಜೆ ನಡೆಸಲಾಗಿತ್ತು. ಸಾಕಷ್ಟು ಬಾರಿ ಬೆಂಗಳೂರಿನ ಮನೆಯಲ್ಲಿ ಕೂಡ ಗಡೇ ದುರ್ಗಾದೇವಿ ಪೂಜೆ ಮಾಡಲಾಗಿತ್ತು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆದಿತ್ತು. ಈಗ ಬಹುತೇಕ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ಅಧೃಷ್ಟ ಒಲಿದು ಬರುತ್ತಿದೆ ಎನ್ನಲಾಗುತ್ತಿದೆ. ಡಿಕೆಶಿಗೆ ಕೆಪಿಸಿಸಿ ಪಟ್ಟ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಗಡೇ ದುರ್ಗಾದೇವಿ ದೇಗುಲದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಸಂಕಷ್ಟ ನಿವಾರಣೆಯಾಗಿ ಕೆಪಿಸಿಸಿ ಪಟ್ಟ ಸ್ಥಾನ ಅಲಂಕರಿಸಿ ಒಳಿತಾಗಬೇಕೆಂದು ಪೂಜೆ ಮಾಡಲಾಗಿದೆ. ಅದೇ ರೀತಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಅವರನ್ನು ಡಿಕೆಶಿ ಬೆಂಗಳೂರು ಗೆ ಕರೆಸಿಕೊಂಡಿದ್ದಾರೆ. ನಾಳೆ ಶಿವಕುಮಾರ್ ಮನೆಯಲ್ಲಿ ವಿಶೇಷ ಪೂಜೆಯನ್ನು ಮಹಾದೇವಪ್ಪ ನೆರವೇರಿಸಲಿದ್ದಾರೆ. ಮಹಾದೇವಪ್ಪ ಅವರು ಡಿಕೆಶಿ ಮನೆಯಲ್ಲಿ ಸಾಕಷ್ಟು ಬಾರಿ ಪೂಜೆ ಮಾಡಿದ್ದಾರೆ.

ಇದನ್ನು ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ; ಅಧಿಕೃತ ಘೋಷಣೆಗೂ ಮುನ್ನ ಟೆಂಪಲ್​ ರನ್​ ನಡೆಸಿದ ಡಿಕೆ ಶಿವಕುಮಾರ್​

ಇಂದು ಡಿಕೆಶಿ ಅವರು ಕುಣಿಗಲ್ ದೇವಾಲಯದತ್ತ ತೆರಳಿ ಪೂಜೆ ಮಾಡಿದರೆ, ಇತ್ತ ಯಾದಗಿರಿಯಲ್ಲಿ ಡಿಕೆಶಿ ಒಳಿತಿಗಾಗಿ ವಿಶೇಷ ಪೂಜೆ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿರುವ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ,  ಡಿಕೆಶಿ ಅವರಿಗೆ ಸಂಕಷ್ಟ ಬಂದಾಗ ಅನೇಕ ಬಾರಿ ಬೆಂಗಳೂರು ಮನೆಯಲ್ಲಿ ಪೂಜೆ ಮಾಡಲಾಗಿದೆ. ಈಗ ಸಂಕಷ್ಟ ನಿವಾರಣೆಗಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಲೆಂದು ದುರ್ಗಾದೇವಿಗೆ ಪೂಜೆ ಮಾಡಲಾಗಿದೆ. ಇದೇ ತಿಂಗಳ 28ರಂದು ದೇವಿಯ ಜಾತ್ರೆ ನಡೆಯಲಿದೆ. ಜಾತ್ರೆಗೆ ಡಿಕೆಶಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ತಿಳಿಸಿದರು.

  • ವಿಶೇಷ ವರದಿ: ನಾಗಪ್ಪ ಮಾಲಿಪಾಟೀಲ

First published: January 17, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading