HOME » NEWS » State » SPECIAL PRAYERS AT THIS TEMPLE OF HAVERI AND PEOPLE SOLVE THEIR PROBLEMS BY LOCKING TO GOD LG

ಹರಕೆ ತೀರುವವರೆಗೆ ದೇವರಿಗೆ ಬೀಗ ಹಾಕೋ ಭಕ್ತರು; ಇದು ವಿಚಿತ್ರವಾದ್ರೂ ಸತ್ಯ..!

ಮಾಟ, ಮಂತ್ರ, ಕೋರ್ಟ್ ವ್ಯಾಜ್ಯಗಳು, ಹೆಣ್ಣು ಗಂಡಿನ ವಿಷಯ, ಕೌಟುಂಬಿಕ ಸಮಸ್ಯೆ ಸೇರಿದಂತೆ ಯಾವುದೇ ಇದ್ದರೂ ಇಲ್ಲಿಗೆ ಬಂದು ಬೀಗ ಹಾಕಿ ಹೋದರೆ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ. ಹೀಗೆ ದೇವಸ್ಥಾನದ ಆವರಣದಲ್ಲಿ ಬೀಗ ಹಾಕಿ ಹೋಗುವ ಜನರು ಎಲ್ಲವೂ ಪರಿಹಾರ ಆದ‌ ಮೇಲೆ ಬಂದು ಬೀಗ ತೆರೆಯುತ್ತಾರೆ.

news18-kannada
Updated:March 7, 2021, 3:30 PM IST
ಹರಕೆ ತೀರುವವರೆಗೆ ದೇವರಿಗೆ ಬೀಗ ಹಾಕೋ ಭಕ್ತರು; ಇದು ವಿಚಿತ್ರವಾದ್ರೂ ಸತ್ಯ..!
ಬೀಗ ಹಾಕಿರುವ ಭಕ್ತರು
  • Share this:
ಹಾವೇರಿ(ಮಾ.07): ಜಿಲ್ಲೆಯ ಹಾನಗಲ್ ತಾಲೂಕು ಕೇಂದ್ರದಿಂದ ಎಂಟು ಕಿ.ಮೀ ಹಾಗೂ ಹಾವೇರಿ ಜಿಲ್ಲಾ ಕೇಂದ್ರದಿಂದ ಸುಮಾರು ನಲ್ವತ್ತೈದು ಕಿ.ಮೀ ದೂರದಲ್ಲಿರುವ ಭೂತೇಶ್ವರ ಹಾಗೂ ಚೌಡೇಶ್ವರ ದೇವಸ್ಥಾನದಲ್ಲಿ ಇಂತಹದ್ದೊಂದು ವಿಶೇಷತೆ ಇದೆ. ದೇವಸ್ಥಾನಕ್ಕೆ ಬರುವ ಜನರು ತಮಗೆ ಏನೇ ತೊಂದರೆ ಇದ್ದರೂ ಪರಿಹಾರ ಆಗಲಿ ಎಂದು ಭೂತೇಶ್ವರ ಮತ್ತು ಚೌಡೇಶ್ವರಿ ದೇವಿಯ ಮೊರೆ ಹೋಗುತ್ತಾರೆ. ಇಷ್ಟಾರ್ಥ ಸಿದ್ಧಿಸಲಿ ಎಂದು ದೇವಸ್ಥಾನದ ಆವರಣದಲ್ಲಿ ಹೊಸ ಬೀಗ ಖರೀದಿಸಿ ತಂದು ಹಾಕಿ ಹೋಗುತ್ತಾರೆ. ಬೀಗದ ಕೀ ಹಾಕಿದ ನಂತರ ಐದು ವಾರಗಳ ಕಾಲ ದೇವಸ್ಥಾನಕ್ಕೆ ಬರುತ್ತಾರೆ. ಅಮಾವಾಸ್ಯೆ, ಹುಣ್ಣಿಮೆ ಹೀಗೆ ವಿಶೇಷ ದಿನಗಳಲ್ಲಿ ಹೆಚ್ಚಾಗಿ ಬರುವ ಜನರು ಈ ರೀತಿ ಹರಕೆ ಹೊತ್ತು ಬೀಗ ಹಾಕಿ ಹೋಗುತ್ತಾರೆ.

ಸುಮಾರು ವರ್ಷಗಳ ಕಾಲ ನಡೆಸಿಕೊಂಡು ಬಂದ ಪದ್ಧತಿ..!

ಸುಮಾರು ವರ್ಷಗಳಿಂದ ದೇವಸ್ಥಾನದಲ್ಲಿ ವಿಶಿಷ್ಟವಾಗಿ ಬೇಡಿಕೊಳ್ಳುವ ಪದ್ದತಿ ನಡೆದುಕೊಂಡು ಬಂದಿದೆ. ಒಂದೇ ದೇವಸ್ಥಾನದಲ್ಲಿ ಭೂತೇಶ್ವರ ದೇವರು ಮತ್ತು ಚೌಡೇಶ್ವರ ದೇವಿ ನೆಲೆಸಿದ್ದಾಳೆ. ಹರಕೆ ಹೊತ್ತ ಜನರು ದೇವಸ್ಥಾನದ ಆವರಣದಲ್ಲಿ ಬೀಗಗಳನ್ನು ಹಾಕಿ ಹೋದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇಲ್ಲಿಗೆ ಬರುವ ಜನರಲ್ಲಿ ಮನೆ ಮಾಡಿದೆ. ವಾರದ ಪ್ರತಿದಿನವೂ ಭಕ್ತರು ಇಲ್ಲಿಗೆ ಬರುತ್ತಾರೆ. ಅಮಾವಾಸ್ಯೆ, ಹುಣ್ಣಿಮೆ ಹೀಗೆ ವಿಶೇಷ ದಿನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಾರೆ. ರಾಜ್ಯದ ಬಹುತೇಕ ಕಡೆಗಳಿಂದ ಜನರು ಇಲ್ಲಿಗೆ ಬರುತ್ತಾರೆ.

ಗ್ರಾಫಿಕ್ಸ್​​ಗೆ ಬಲಿಪಶು ಆಗುವ ಭಯ ಇದೆ; ಹೀಗಾಗಿ ಮಾನ ಮರ್ಯಾದೆಗೆ ಅಂಜಿ ಕೋರ್ಟ್‌ ಮೊರೆ ಹೋಗಿದ್ದಾರೆ: ಸಚಿವ ಸಿ.ಪಿ.ಯೋಗೇಶ್ವರ್‌

ಮಾಟ, ಮಂತ್ರ, ಕೋರ್ಟ್ ವ್ಯಾಜ್ಯಗಳು, ಹೆಣ್ಣು ಗಂಡಿನ ವಿಷಯ, ಕೌಟುಂಬಿಕ ಸಮಸ್ಯೆ ಸೇರಿದಂತೆ ಯಾವುದೇ ಇದ್ದರೂ ಇಲ್ಲಿಗೆ ಬಂದು ಬೀಗ ಹಾಕಿ ಹೋದರೆ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ. ಹೀಗೆ ದೇವಸ್ಥಾನದ ಆವರಣದಲ್ಲಿ ಬೀಗ ಹಾಕಿ ಹೋಗುವ ಜನರು ಎಲ್ಲವೂ ಪರಿಹಾರ ಆದ‌ ಮೇಲೆ ಬಂದು ಬೀಗ ತೆರೆಯುತ್ತಾರೆ. ಸಮಸ್ಯೆ ಪರಿಹಾರದ ನಂತರ ಭಕ್ತರ ಮನಸ್ಸಿಗೆ ನೆಮ್ಮದಿ ಆಗುತ್ತದೆಯಂತೆ. ಇಷ್ಟಾರ್ಥ ಸಿದ್ಧಿಸಿದ ಮೇಲೆ ಭಕ್ತರು ತಮ್ಮದೇಯಾದ ರೀತಿಯಲ್ಲಿ ದೇವರಿಗೆ ಹರಕೆಗಳನ್ನು ತೀರಿಸುತ್ತಾರೆ.

ದೇವಸ್ಥಾನದ ಆವರಣದಲ್ಲಿದೆ ವಿಶಿಷ್ಟವಾದ ಕಲ್ಲು..!

ದೇವಸ್ಥಾನದ ಮುಂದೆ ಒಂದು ಕರಿಯದಾದ ಗುಂಡನೆಯ ಕಲ್ಲು ಇದೆ. ಹರಕೆ ಹೊತ್ತ ಜನರು ಬೀಗವನ್ನು ದೇವಸ್ಥಾನದ ಆವರಣದಲ್ಲಿ ಹಾಕಿದ ಮೇಲೆ ದೇವಸ್ಥಾನದ ಮುಂಭಾಗದಲ್ಲಿ‌ ಇರುವ ಈ ಕಲ್ಲನ್ನು ಎತ್ತುತ್ತಾರೆ. ಕಲ್ಲು ಕೂಡ ಕೆಲಸ ಆಗುತ್ತದೆ ಅಂದರೆ ಮಾತ್ರ ಬೇಗ ಮೇಲೇಳುತ್ತದೆಯಂತೆ. ಇಲ್ಲದಿದ್ದರೆ ಕಲ್ಲು ಬೇಗನೆ ಮೇಲೇಳುವುದಿಲ್ಲವಂತೆ. ಇಂತಹ ನಂಬಿಕೆ ಸುಮಾರು ವರ್ಷಗಳಿಂದಲೂ ಇಲ್ಲಿ ನಡೆದುಕೊಂಡು ಬಂದಿದೆ. ಕಾರವಾರ, ಶಿವಮೊಗ್ಗ, ಪೂನಾ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದ ಅನೇಕ ಕಡೆಗಳಿಂದ ಜನರು ದೇವಸ್ಥಾನಕ್ಕೆ  ಬರುತ್ತಾರೆ. ತಮ್ಮ ಸಮಸ್ಯೆಗಳು ಪರಿಹಾರ ಆಗಲಿ ಎಂದು ದೇವಸ್ಥಾನದ ಆವರಣದಲ್ಲಿ ಬೀಗ ಹಾಕುವ ಮೂಲಕ ಇಷ್ಟಾರ್ಥ ಸಿದ್ದಿಸಲೆಂದು ಬೇಡಿಕೊಳ್ಳುತ್ತಾರೆ.‌

ಈಗಾಗಲೆ ಅನೇಕರಿಗೆ ಭೂತೇಶ್ವರ ಮತ್ತು ಚೌಡೇಶ್ವರಿದೇವಿ ಬೇಡಿದ ವರಗಳನ್ನು ನೀಡಿದ್ದಾರಂತೆ. ಇಷ್ಟಾರ್ಥಗಳು ಸಿದ್ಧಿಸಿದ‌‌‌ ಮೇಲೆ ಜನರು ತಮ್ಮ ಮನಸ್ಸಿಗೆ ಅನುಸಾರ ದೇವಸ್ಥಾನಕ್ಕೆ ತಮ್ಮದೆಯಾದ ಕೊಡುಗೆ ನೀಡಿ ಹರಕೆ ತೀರಿಸುತ್ತಾರೆ. ಒಟ್ಟಿನಲ್ಲಿ ಜಗತ್ತು ವೈಜಾನಿಕವಾಗಿ ಸಾಕಷ್ಟು ಬದಲಾದರೂ ಸಹ ಜನರಲ್ಲಿನ ನಂಬಿಕೆಗಳು ಮಾತ್ರ ಇನ್ನೂ ಬದಲಾಗಿಲ್ಲ. ಜನರು ತಮ್ಮ ತಮ್ಮ ಇಷ್ಟಾರ್ಥ ಸಿದ್ದಿಗಾಗಿ  ದೇವಸ್ಥಾನಕ್ಕೆ ಬಂದು ಬೀಗ ಹಾಕಿ ಹೋಗುತ್ತಿದ್ದಾರೆ.

(ವರದಿ: ಮಂಜುನಾಥ್ ತಳವಾರ)
Published by: Latha CG
First published: March 7, 2021, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories