Raichur: ಗುರುರಾಯರ ಪಟ್ಟಾಭಿಷೇಕ; ಅಭಯ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಾಕ್ಷಿಯಾದ ಕೋತಿ

ಮಾರ್ಚ್​ 14 ರಿಂದ ಮಾರ್ಚ್​ 20 ರವರೆಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಸಚಿವರು, ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುತ್ತಾರೆ.

ಅಭಯ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

ಅಭಯ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

  • Share this:
ರಾಯಚೂರು(ಮಾ.12): ಭಕ್ತರ ಕಾಮಧೇನು, ಕಲ್ಪವೃಕ್ಷ ಎಂದು ಕರೆಯುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಅವತರಿಸಿದ 436 ನೆಯ ವರ್ಷಾಚರಣೆ, 400ನೆಯ ವರ್ಷದ ಪಟ್ಟಾಭಿಷೇಕ ಕಾರ್ಯಕ್ರವು ಮಂತ್ರಾಲಯದ ರಾಯರ ಮಠದಲ್ಲಿ ಗುರು ವೈಭೋತ್ಸವ ಹೆಸರಿನಲ್ಲಿ ಸಪ್ತತೋತ್ಸವ ನಡೆಯುತ್ತಿದೆ,  ರಾಯರ ಆರಾಧನೆಯ ಸಂದರ್ಭದಲ್ಲಿ ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ನೇರವಾಗಿ ಆರಾಧನೆಯನ್ನು ನೋಡಲು ಆಗಿರಲಿಲ್ಲ, ಈಗ ನೇರವಾಗಿ ರಾಯರ ಮಠದ ಕಾರ್ಯಕ್ರಮ ನೋಡಲು ಅವಕಾಶವಿದೆ ಹಾಗೂ ನೇರವಾಗಿಯೂ ವಿಶ್ವದಾದ್ಯಂತ ಅಂತರ್ಜಾಲದ ಮೂಲಕ ನೋಡಬಹುದಾಗಿದೆ.

ಮಧ್ವ ಪರಂಪರೆಯಲ್ಲಿ ಸಶರೀರವಾಗಿ ವೃಂದಾವನಸ್ಥರಾಗಿರುವುದು ಪುರಾಣ ಇತಿಹಾಸದಲ್ಲಿ ವಾದಿರಾಜರು ನಂತರ ಶ್ರೀರಾಘವೇಂದ್ರ ಸ್ವಾಮಿಗಳು, ಶ್ರೀರಾಘವೇಂದ್ರ ಸ್ವಾಮೀಗಳು ಮೂಲದ ಪ್ರಕಾರ ಬ್ರಹ್ಮದೇವರ ಶಿಷ್ಯರಾಗಿದ್ದ ಶಂತಕರ್ಣನಾಗಿದ್ದು ನಂತರ ಹಿರಣ್ಯಕಶ್ಯಪನ ಮಗ ಪ್ರಹ್ಲಾದರಾಜ್ ರಾಗಿ ಜನಿಸಿದರು, ನಂತರ ವ್ಯಾಸರಾಜ ರಾಜರಾಗಿ ನಂತರ ತಮಿಳುನಾಡಿನಲ್ಲಿ ವೆಂಕಟನಾಗಿ ಜನಿಸಿದ್ದರು. ವೆಂಕಟನಿಗೆ ಸುಯೀಂದ್ರ ತೀರ್ಥರು ಮಧ್ವ ಮಠದ ಪೀಠ ಅಲಂಕರಿಸಲು ಹೇಳಿದರು ಆದರೆ ಅವರು ಒಪ್ಪಿಕೊಂಡಿರಲಿಲ್ಲ, ನಂತರದಲ್ಲಿ ರಾಯರು ಮಂತ್ರಾಲಯದ ಪೀಠಾಧಿಪತಿಗಳಾದರು, ಅವರು ಸಶರೀರವಾಗಿ ವೃಂದಾವನಸ್ಥರಾಗಿ ೭೦೦ ವರ್ಷಗಳವರೆಗೂ ಮಂತ್ರಾಲಯದಲ್ಲಿರುವಯದಾಗಿ ಹೇಳಿರುವುದು ಪುರಾಣಗಳಲ್ಲಿ ದಾಖಲಾಗಿದೆ.

NIA Raid: ಬೆಂಗಳೂರು ಸೇರಿ 11 ಕಡೆ ಎನ್ಐಎ ದಾಳಿ; ಕೇರಳ ಮೂಲದ ಡಾಕ್ಟರ್ ಸೇರಿ ಮೂವರ ಬಂಧನ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಗಳು ಅವತರಿಸಿ ಇಲ್ಲಿಗೆ ಒಟ್ಟು 426 ನೆಯ ವರ್ಷವಾಗಿದೆ. ಇದೇ ವೇಳೆ ಶ್ರೀ ರಾಘವೇಂದ್ರ ಸ್ವಾಮೀಗಳು ಮಠಕ್ಕೆ ಪೀಠಾರೋಹಣ ಮಾಡಿ ಇಂದಿಗೆ 400 ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಮಠದಲ್ಲಿ ರಾಯರ ವರ್ದಂತೋತ್ಸವ ಹಾಗು ಪಟ್ಟಾಭಿಷೇಕ ಮಹೋತ್ಸವವನ್ನು ಸಪ್ತರಾತ್ರೋತೋತ್ಸವ ವನ್ನು ಗುರು ವೈಭತೋತ್ಸವವಾಗಿ ಆಚರಣೆ ಮಾಡಲಾಗುತ್ತಿದೆ.

ಮಾರ್ಚ್​ 14 ರಿಂದ ಮಾರ್ಚ್​ 20 ರವರೆಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಸಚಿವರು, ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುತ್ತಾರೆ. ನಿತ್ಯ ಮಠದಲ್ಲಿ ಮೂಲ ರಾಮದೇವರ ಪೂಜೆ, ರಾಯರ ವೃಂದಾವನಕ್ಕೆ ಅಭಿಷೇಕ, ಅಲಂಕಾರ ಮಹಾಮಂಗಳಾರತಿ, ಇದೇ ವೇಳೆ ಮಠದ ಆವರಣದಲ್ಲಿ ರಾಯರರನ್ನು ಚಿನ್ನ, ರಜತ ರಥದಲ್ಲಿ ಮೆರವಣಿಗೆ ಮಾಡುವ ರಥೋತ್ಸವ ವು ಸಹ ನಡೆಯುತ್ತಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಮಂತ್ರಾಲಯದ ಹೊರವಲಯಲ್ಲಿ 32 ಅಡಿ ಎತ್ತರದ ಅಭಯ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ, ಬೆಂಗಳೂರು ಮೂಲದ ಕೃಷ್ಣಮೂರ್ತಿ ಎಂಬುವವರು ಅಭಯ ಆಂಜನೇಯ ಮೂರ್ತಿಗೆ ಕಟ್ಟಡ ನಿರ್ಮಿಸಲಾಗಿದೆ, ಇಂದು ಅಭಯ ಆಂಜನೇಯನ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.ಮಂತ್ರಾಲಯದ ಈಗಿನ ಪೀಠಾಧಿಪತಿಗಳಾದ ಶ್ರೀಸುಭುದೇಂದ್ರ ತೀರ್ಥರು ಅಭಯ ಆಂಜನೇಯ ಮೂರ್ತಿ ಪೂಜೆಯ ವೇಳೆಗೆ ಕೋತಿಯೊಂದು ಅಲ್ಲಿಗೆ ಹಾಜರಾಯಿತು.

ಕೋತಿಯನ್ನು ನೋಡಿದವರು ಅದನ್ನು ಓಡಿಸಲು ಸಾಕಷ್ಟು ಪ್ರಯತ್ನ ನಡೆಸಿದರು, ಆದರೆ ಪೂಜೆ ಮುಗಿಯುವವರೆಗೂ ಜೀವಂತ ಆಂಜನೇಯ ಸ್ಥಳ ಬಿಟ್ಟು ಕದಲಿಲ್ಲ, ಓಡಿಸುವ ಯತ್ನ ಮಾಡಿದವರು ನಂತರ ಸುಮ್ಮನಾಗಿದ್ದರು, ಪೂಜೆಯ ನಂತರ ಕೋತಿಯು ಅಲ್ಲಿಂದ ತೆರಳಿದ್ದು ಅಲ್ಲಿದ್ದ ಜನರು ಈ ವಿಸ್ಮಯ ನೋಡಿ ಅಚ್ಚರಿ ಪಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಸುಭುದೇಂದ್ರ ತೀರ್ಥರು ಈಗ ಜನತೆ ವಿಶ್ವದಾದ್ಯಂತ ಅಂತರ್ಜಾಲದ ಮುಖಾಂತರ ಮಠದಲ್ಲಿಯ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ, ದೇಶದಲ್ಲಿರುವ ಕೊರೊನಾದಂಥ ಉಪದ್ರವಗಳು ನಿವಾರಣೆಯಾಗಲಿ ಎಂದು ರಾಯರಲ್ಲಿ ಪ್ರಾರ್ಥಿಸಿದರು.
Published by:Latha CG
First published: