ಅದು ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಏಕೈಕ ಶನಿ ದೇವಾಲಯ (Shani Temple). ಆ ದೇವಾಲಯಕ್ಕೆ ಭೇಟಿ ಕೊಟ್ಟರೆ ಕಷ್ಟ ಕಾರ್ಪಣ್ಯ ದೂರವಾಗುತ್ತೆ ಅನ್ನೋ ನಂಬಿಕೆ. ಅದರಲ್ಲೂ ಶ್ರಾವಣ ಶನಿವಾರ (Shravana Shanivara) ಆ ಮಹಾತ್ಮನ ದರ್ಶನ ಪಡೆದ್ರೆ ತಮ್ಮ ಸಂಕಷ್ಟ ದೂರವಾಗುತ್ತೆ ಅನ್ನೋದು ಭಕ್ತರ ಅಚಲ ವಿಶ್ವಾಸ. ಹೀಗಾಗಿ ಶನಿವಾರವಾದ ಇಂದು ಅಮಾವಾಸ್ಯೆ ದಿನದಂದು ಸಾವಿರಾರು ಭಕ್ತರು (Devotees) ಸರತಿ ಸಾಲಲ್ಲಿ ನಿಂತು ಶನಿ (Shani God) ಮಹಾತ್ಮನ ದರ್ಶನ ಪಡೆದು ಕೃತಾರ್ಥರಾದರು. ಬೀದರ್ (Bidar) ಜಿಲ್ಲೆಯ ಬಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಹೊರವಲಯದಲ್ಲಿರುವ ಶ್ರೀ ಕ್ಷೇತ್ರ ಶನೀಶ್ವರ ದೇವಾಲಯ ಇತಿಹಾಸ ಪ್ರಸಿದ್ಧ ದೇವಾಲಯವೂ ಹೌದು.
ಈ ದೇವಾಲಯ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಏಕೈಕ ಶನಿ ದೇವಾಲಯ. ಹಚ್ಚ ಹಸುರಿನ ಕಾನನದ ಮಧ್ಯ ಶನಿ ಮಹಾತ್ಮನ ದೇಗುಲವಿದೆ. ವರ್ಷಕ್ಕೆ ಒಂದು ದಿನ ಶನಿವಾರದಂದು ಬರುವ ಅಮಾವಾಸ್ಯೆಯನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಶನಿ ಮಹಾತ್ಮನ ಅದ್ದೂರಿ ಜಾತ್ರೆಯನ್ನು ನಡೆಸಲಾಗುತ್ತದೆ.
ಬೇಡಿಕೊಂಡ ಹರಕೆ ಪೂರೈಸೋ ಶನಿದೇವ
ಈ ಪುಣ್ಯ ದಿನ ಪುರಾತನ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬೇಡಿಕೊಂಡ ಹರಕೆಯನ್ನು ಸಲ್ಲಿಸಿ ಭಕ್ತರು ಪುನೀತರಾಗುತ್ತಾರೆ. ಇದು ಆಲದಮರದ ಕೆಳಗೆ ಉದ್ಭವಿಸಿರುವ ಶನಿ ಮಹಾತ್ಮನ ದೇಗುಲ. ಶನಿ ದೇವನು ಜ್ಯೇಷ್ಠ ಅಮಾವಾಸ್ಯೆಯ ದಿನದಂದು ಹುಟ್ಟಿದನು. ಹಾಗಾಗಿ ಈ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಕಾಫಿನಾಡ ಪ್ರವಾಸಿಗರಿಗೆ ಗುಡ್ನ್ಯೂಸ್, ದತ್ತಪೀಠ ಮಾರ್ಗದಲ್ಲಿ ತಲೆಎತ್ತಲಿದೆ 21 ಅಡಿ ಎತ್ತರದ ಆಂಜನೇಯನ ಮೂರ್ತಿ!
ಸಾವಿರಾರು ಜನರಿಂದ ಶನಿದೇವನ ದರ್ಶನ
ಅಮಾವಾಸ್ಯೆಯ ದಿನದಂದು ಪವಿತ್ರವಾದ ಶುದ್ಧ ಜಲದಲ್ಲಿ ಸ್ನಾನ ಮಾಡಿ ಶನಿ ದೇವನ ಮೊರೆ ಹೋಗುವ ಪದ್ಧತಿ ಸಾಂಪ್ರದಾಯಿಕವಾಗಿ ಬಂದಿದೆ. ನಾವು ಗೊತ್ತಿದ್ದು ಮಾಡಿರುವ ಹಾಗೂ ಕೆಲವು ಅಚಾತುರ್ಯದಿಂದ ನಡೆದ ಹೋದ ತಪ್ಪುಗಳಿಗೆಲ್ಲಾ ಶನಿ ದೇವನು ಫಲ ನೀಡುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಇಂದು ಶನಿ ದೇವರ ಮಂತ್ರ ಪಠಿಸುತ್ತಾ ಶನಿ ಮಹಾತ್ಮನನ್ನು ಜಪಿಸುತ್ತಾ ಜನ್ರು ಸರತಿ ಸಾಲಿನಲ್ಲಿ ನಿಂತು ಈ ದಿನ ಭಕ್ತರು ದರ್ಶನ ಪಡೆದ್ರು.
ಶ್ರಾವಣ ಶನಿವಾರದ ಏಕೈಕ ಅಮಾವಾಸ್ಯೆ
ಶನಿ ಅಮಾವಾಸ್ಯೆಯ ದಿನದಂದು ಭಕ್ತರು ಸಾಸಿವೆ ಎಣ್ಣೆಯನ್ನು ಶನಿ ಮಹಾತ್ಮನಿಗೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಶನಿದೇವನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಹೀಗಾಗಿ ಶನಿವಾರದಂದು ಬರುವ ಅಮಾವಾಸ್ಯೆಯು ಮತ್ತಷ್ಟು ಮಹತ್ವದ್ದಾಗಿರುತ್ತದೆ.
ಶನಿವಾರದ ಅಮಾವಾಸ್ಯೆ ಪೂಜೆಯಿಂದ ಪುಣ್ಯ ಪ್ರಾಪ್ತಿ
ಹೀಗಾಗಿ ಜನರಲ್ಲಿ ಇನ್ನಷ್ಟು ಭಕ್ತಿ ಹೆಚ್ಚಾಗುತ್ತದೆ. ಶನಿವಾರದಂದು ಬರುವ ಅಮಾವಾಸ್ಯೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದ್ದರಿಂದ ಈ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆಯೆಂದು ಕರೆಯಲಾಗುತ್ತದೆ. ಈ ದಿನ ಸ್ನಾನ, ದಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನದಂದು ದಾನ ಮತ್ತು ಪೂಜೆಯು ಅನೇಕ ಪಟ್ಟು ಹೆಚ್ಚಿನ ಪುಣ್ಯವನ್ನು ನೀಡುತ್ತದೆ. ಮತ್ತು ಸಾವಿನ ನಂತರ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಬೇಗ ಮದುವೆಯಾಗಲು ಇಲ್ಲಿದೆ ಜ್ಯೋತಿಷ್ಯ ಸಲಹೆ
ಜಾತಕದಲ್ಲಿರುವ ದೋಷವೂ ದೂರ
ಶನಿವಾರವನ್ನು ನ್ಯಾಯ ದೇವನಾದ ಶನಿ ದೇವನಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಇರುವ ಶನಿ ದೋಷವನ್ನು ಸರಿಪಡಿಸಲು ಶನಿವಾರದಂದು ವಿವಿಧ ಕ್ರಮಗಳನ್ನು ತೆಗೆದುಕೊಳ್ಳ ಬಹುದು. ಈ ದಿನ ಈ ಪರಿಹಾರವನ್ನು ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಸಿಗುತ್ತದೆ.
ಈ ದಿನ ಶನಿದೇವನ ಕೃಪೆಯಿಂದ ಶನಿಯ ನೋವಿನಿಂದ ಮುಕ್ತಿ ಸಿಗುತ್ತದೆ. ಅಲ್ಲದೆ, ಭಕ್ತರ ಆಸೆಗಳೆಲ್ಲವೂ ಪೂರ್ಣಗೊಳ್ಳುವುದು. ಶನಿದೇವನ ದೃಷ್ಟಿಯಿಂದ ದೇವರುಗಳು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೇವಲ ಮನುಷ್ಯರಾದ ನಮ್ಮ ಸ್ಥಿತಿ ಹೇಗಿರಬಹುದಲ್ಲವೇ..? ಶನೇಶ್ವರ ಅಮಾವಾಸ್ಯೆಯ ದಿನದಂದು ಶನಿ ದೋಷದಿಂದ ಪರಿಹಾರ ಪಡೆಯಲು ಶನಿ ದೇವನ ಮೊರೆ ಹೋಗುತ್ತಾರೆ.
ವರದಿ: ಚಮನ್ ಹೊಸಮನಿ ನ್ಯೂಸ್18 ಕನ್ನಡ ಬೀದರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ