ಬೆಂಗಳೂರು: ಕರ್ನಾಟಕದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಭೋಜನ ಕೂಡ ಇರಲಿದೆ. ಬಿಸಿಯೂಟ ಯೋಜನೆಯಡಿ (Midday Meal Scheme) ಮಕ್ಕಳಿಗೆ ‘ವಿಶೇಷ ಭೋಜನ (Special Meal) ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ (Education Department) ಸುತ್ತೋಲೆ ಹೊರಡಿಸಿದೆ. ಇನ್ಮುಂದೆ ಹಬ್ಬ-ಹರಿದಿನಗಳಲ್ಲಿ ಮಕ್ಕಳಿಗೆ ಸ್ಪೆಷಲ್ ಫುಡ್ಗಳು ಸಹ ಸಿಗಲಿದೆ.
ಸರ್ಕಾರದಿಂದ ವಿಶೇಷ ಭೋಜನ ಕಾರ್ಯಕ್ರಮ ಜಾರಿ
ರಾಜ್ಯದಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವ ಜನರೇ ಹೆಚ್ಚು. ಆದ್ರೆ ಸರ್ಕಾರ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ನಾನಾ ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಅಂದ್ರೆ, ವಿಶೇಷ ಭೋಜನ (Special Meal) ಮತ್ತು ಶಾಲೆಗಾಗಿ ನಾವು ನೀವು ಕಾರ್ಯಕ್ರಮವಾಗಿದೆ.
ಯಾವಾಗ ಸಿಗುತ್ತೆ ವಿಶೇಷ ಭೋಜನ?
ಸರ್ಕಾರಿ ಶಾಲೆಗಳಲ್ಲಿ ಆಯಾ ಗ್ರಾಮಗಳಲ್ಲಿ ಊರಿನ ಹಬ್ಬ, ಜಾತ್ರೆ ಹಾಗೂ ರಾಷ್ಟ್ರೀಯ ಹಬ್ಬಗಳು, ಜನ್ಮದಿನ, ಜಯಂತಿ, ವಾರ್ಷಿಕೋತ್ಸವ ಸೇರಿದಂತೆ ಸ್ಥಳೀಯವಾಗಿ ಸಮುದಾಯದಿಂದ ಸಾಮೂಹಿಕವಾಗಿ ಆಚರಿಸುವ ವಿಶೇಷ ಕಾರ್ಯಕ್ರಮಗಳಿಗೆ ವಿಶೇಷ ಭೋಜನ ನೀಡಬಹುದಾಗಿದೆ.
ಪೌಷ್ಠಿಕ ಆಹಾರ ನೀಡಬೇಕು
ಈ ಕಾರ್ಯಕ್ರಮದಡಿ ಟ್ರಸ್ಟ್, ಸಂಘ ಸಂಸ್ಥೆಗಳು , ಎಸ್‌ಡಿಎಂಸಿಗಳು, ಸಾರ್ವಜನಿಕರೂ ಸೇರಿದಂತೆ ಸಮುದಾಯದವರು ಆರ್ಥಿಕ ನೆರವು, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರವಾಗಿರಬೇಕು ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ಯಾವೆಲ್ಲ ಆಹಾರ ನೀಡಬಹುದು?
ವಿಶೇಷ ಭೋಜನ ನೀಡುವವರು ಪ್ರಸ್ತುತ ಬಿಸಿಯೂಟದೊಂದಿಗೆ ಪೂರಕ ಪೌಷ್ಠಿಕ ಆಹಾರವಾಗಿ ವಿತರಿಸುವ ಆಹಾರ ಪದಾರ್ಥಗಳನ್ನು ಈ ಯೋಜನೆಯಡಿ ನೀಡಬಹುದು. ಮೊಟ್ಟೆ, ಶೇಂಗಾ ಚಿಕ್ಕಿ, ಹಲ್ವಾ, ಬಿಸ್ಕಟ್, ಹಪ್ಪಳ, ಉಪ್ಪಿನಕಾಯಿ, ವಿವಿಧ ಬಗೆಯ ಸಿಹಿ ತಿಂಡಿ, ಸಂಜೆ ವೇಳೆ ಸ್ನ್ಯಾಕ್ಸ್, ಬಾಳೆ ಹಣ್ಣು, ಇತರೆ ಹಣ್ಣು-ಹಂಪಲ, ಮೊಳಕೆ ಕಾಳು, ಬೆಳಗಿನ ಉಪಹಾರ ಇತ್ಯಾದಿ ಆಹಾರ ಪದಾರ್ಥಗಳನ್ನು ನೀಡಬಹುದಾಗಿದೆ.
ಬದಲಾಗಿದೆ ಮಧ್ಯಾಹ್ನದ ಬಿಸಿಯೂಟದ ಸಮಯ
ಶಾಲೆಗಳಲ್ಲಿ ಮಕ್ಕಳಿಗೆ ಸಹಾಯವಾಗಲಿ ಮಕ್ಕಳು ಹಸಿವಿನಿಂದ ಬಳಲದಿರಲಿ ಎಂದು ಬಿಸಿ ಊಟ (Bisi Uta) ಯೋಜನೆ ಸ್ಥಾಪಿಸಿರುವ ಸಂಗತಿ ತಿಳಿದೇ ಇದೆ ಆದರೆ ಈಗ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯವನ್ನು ಬದಲಾವಣೆ ಮಾಡಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಶಾಲೆಗಳಿಗೆ (Schools) ಸೂಚನೆಯೊಂದನ್ನ ನೀಡಿತ್ತು.
ಇದನ್ನೂ ಓದಿ: BMTC ನೌಕರರಿಗೆ ಗುಡ್ ನ್ಯೂಸ್; 5 ಲಕ್ಷ ರೂ. ಆರೋಗ್ಯ ವಿಮೆ ಘೋಷಿಸಿದ ಶ್ರೀರಾಮುಲು
ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಣೆ
ಹಿರಿಯರ ವಿಭಾಗದ ವಿದ್ಯಾರ್ಥಿಗಳು ಹಾಗು ಕಿರಿಯ ವಿದ್ಯಾರ್ಥಿಗಳು ಒಂದೇ ಬಾರಿ ಊಟಕ್ಕೆ ಬರುವುದು. ನೂಕು ನುಗ್ಗಲಾಗುವುದು ಮತ್ತು ಗಲಾಟೆ ಆಗುತ್ತಿರುವ ಕಾರಣ ಅಷ್ಟೇ ಅಲ್ಲ ಶಾಲಾ ಮಕ್ಕಳು ತಮ್ಮ ತಟ್ಟೆಗಳನ್ನು ತೊಳೆಯುವ ಸಂದರ್ಭದಲ್ಲೂ ನೂಕು ನುಗ್ಗಲಾಗುತ್ತಿದೆ. ಈ ಹಿನ್ನಲೆಯಲ್ಲಿ ಒಂದರಿಂದ 5ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 1.45 ರವರೆಗೆ, 6ರಿಂದ ಹತ್ತನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2 ರಿಂದ 2.40 ರವರೆಗೆ ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಿಸಲು ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ