ನೈಸರ್ಗಿಕ ಸಂಪನ್ಮೂಲಗಳು (Natural Resources), ನೀರಿನ ಸಂರಕ್ಷಣೆ ಸೇರಿದಂತೆ ಉದ್ಯಾನ ನಗರಿಯ ಹಸಿರುಮಯ ಪರಿಕಲ್ಪನೆಯಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟರ್ಮಿನಲ್ 2 ಅನ್ನು ನಿರ್ಮಿಸಲಾಗಿದೆ. ಇನ್ನು ಈ ಅಂಶಗಳಿಗೆ ಪುಷ್ಟಿ ನೀಡುವಂತೆ ಈ ಟರ್ಮಿನಲ್ಗೆ ಮತ್ತೊಂದು ಮನ್ನಣೆ ದೊರೆತಿದೆ. ಬೆಂಗಳೂರು ವಿಮಾನ ನಿಲ್ದಾಣವು ಸುಸ್ಥಿರ ಬದ್ಧತೆ ಹೊಂದಿದೆ. ವ್ಯಾಪಾರದ ವಿಚಾರದಲ್ಲೂ ಮುಂದಿದೆ. ನೂತನ ಟರ್ಮಿನಲ್-2 (Terminal-2) ತನ್ನ ವಿನ್ಯಾಸದ ಮೂಲಕ ಜನರಲ್ಲಿ ಜವಾಬ್ದಾರಿ ಹಾಗೂ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಟರ್ಮಿನಲ್-2ಗೆ 'ಭಾರತೀಯ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ' (IGBC) ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ''ಪ್ಲಾಟಿನಂ ರೇಟಿಂಗ್'' (Platinum Rating) ದೊರೆತಿದೆ.
ಈ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಎಂಡಿ ಹಾಗೂ ಸಿಇಒ ಹರಿ ಮರಾರ್, “ಟರ್ಮಿನಲ್ 2 ಭಾರತೀಯ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ಯಿಂದ ಹೊಸದಾಗಿ ಪ್ರಾರಂಭಿಸಲಾದ ಐಜಿಬಿಸಿ ಗ್ರೀನ್ ನ್ಯೂ ಬಿಲ್ಡಿಂಗ್ಸ್ ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಅಸ್ಕರ್ ಪ್ಲಾಟಿನಂ ರೇಟಿಂಗ್ ಅನ್ನು ಸಾಧಿಸಿದೆ ಎಂದು ಹೇಳಲು ನಾನು ಸಂತೋಷಪಡುತ್ತೇನೆ" ಎಂದಿದ್ದಾರೆ.
ಇದು ನಮಗೆ ಮಹತ್ವದ ಮೈಲಿಗಲ್ಲು ಮತ್ತು ಸುಸ್ಥಿರತೆಗೆ BIAL ನ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನೈಸರ್ಗಿಕ ಸಂಪನ್ಮೂಲಗಳು, ಶಕ್ತಿ ಮತ್ತು ನೀರನ್ನು ಸಂರಕ್ಷಿಸುವ ನಮ್ಮ ಪ್ರಯತ್ನಗಳನ್ನು ಪ್ರದರ್ಶಿಸುವ ಹಸಿರು ಪರಿಕಲ್ಪನೆಗಳು ಮತ್ತು ತಂತ್ರಗಳನ್ನು ಅನುಷ್ಠಾನಗೊಳಿಸುವ ನಮ್ಮ ಸಮರ್ಪಣೆಯನ್ನು T2 ಉದಾಹರಿಸುತ್ತದೆ ಎಂದು ಹರಿ ಮರಾರ್ ಹೇಳಿದರು.
ಇದನ್ನೂ ಓದಿ: ಇಂದು ಆರ್ಸಿಬಿ-ಗುಜರಾತ್ ಪಂದ್ಯ ನಡೆಯೋದೇ ಡೌಟ್? ಫಾಫ್ ಪಡೆಯ ಪ್ಲೇಆಫ್ಗೆ ಅಡ್ಡಿಯಾಗ್ತಾನಾ ಮಳೆರಾಯ?
ಹಲವು ಆಕರ್ಷಣೆಗಳನ್ನು ಹೊಂದಿರುವ ಟಿ2
T2 ನ ವಿನ್ಯಾಸ ಮತ್ತು ನಿರ್ಮಾಣವು IGBC ಗ್ರೀನ್ ನ್ಯೂ ಬಿಲ್ಡಿಂಗ್ಸ್ ರೇಟಿಂಗ್ ಸಿಸ್ಟಮ್‌ನಿಂದ ವಿವರಿಸಲಾದ ಹಲವಾರು ಪ್ರಮುಖ ಪರಿಸರ ವರ್ಗಗಳಿಗೆ ಬದ್ಧವಾಗಿದೆ. ಇದರಲ್ಲಿ ಸುಸ್ಥಿರ ವಾಸ್ತುಶಿಲ್ಪ ಮತ್ತು ವಿನ್ಯಾಸ, ಸೈಟ್ ಆಯ್ಕೆ ಮತ್ತು ಯೋಜನೆ, ನೀರಿನ ಸಂರಕ್ಷಣೆ, ಶಕ್ತಿ ದಕ್ಷತೆ, ಕಟ್ಟಡ ಸಾಮಗ್ರಿಗಳು ಮತ್ತು ಸಂಪನ್ಮೂಲಗಳು, ಒಳಾಂಗಣ ಪರಿಸರ ಗುಣಮಟ್ಟ, ನಾವೀನ್ಯತೆ ಮತ್ತು ಅಭಿವೃದ್ಧಿಯೂ ಪ್ರಮುಖ ಆಕರ್ಷಣೆಯಾಗಿದೆ.
ಭಾರತೀಯ ಕೈಗಾರಿಕಾ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಕೆ ಎಸ್ ವೆಂಕಟಗಿರಿ ಅವರು ಮಾತನಾಡಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ 2 ಒಂದು ಪ್ರವರ್ತಕ ಹೆಗ್ಗುರುತಾಗಿದೆ. ಬಯೋಫಿಲಿಕ್ ವಿನ್ಯಾಸ ತತ್ವಶಾಸ್ತ್ರದಡಿ ತಲೆ ಎತ್ತಿರುವ ಭಾರತದ ಮೊದಲ 'ಟರ್ಮಿನಲ್ ಇನ್ ಎ ಗಾರ್ಡನ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯುತ್ತಮ ದೂರದೃಷ್ಟಿಯ ವಿಧಾನದಡಿ ರೂಪಿಸಲಾಗಿದೆ. ಹಸರೀಕರಣ, ಪರಿಸರ ವ್ಯವಸ್ಥೆಗೆ ಪೂರಕವಾಗಿದೆ ಎಂದು ಅವರು ಹೇಳಿದರು.
KIA ಟರ್ಮಿನಲ್ 2ನ ಅಂಶಗಳು
ಮಂಗಳೂರು ವಿಮಾನ ನಿಲ್ದಾಣಕ್ಕೆ "ಗ್ರೀನ್ ಏರಪೋರ್ಟ್" ಬಿರುದು:
ಈ ಮಧ್ಯೆ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (MIA), ವಾರ್ಷಿಕ 8 ಮಿಲಿಯನ್ಗೂ ಅಧಿಕ ಪ್ರಯಾಣಿಕರ ವಿಭಾಗದಲ್ಲಿ ಹಸಿರು ನೀತಿಗೆ ಅನುಗುಣವಾಗಿ ಗ್ರೀನ್ ಏರ್‌ಪೋರ್ಟ್ಸ್ ರೆಕಗ್ನಿಷನ್ (GAR) ಪ್ರೋಗ್ರಾಂ 2023 ಅಡಿಯಲ್ಲಿ ಪ್ಲಾಟಿನಂ ರೇಟಿಂಗ್ ಅನ್ನು ಪಡೆದುಕೊಂಡಿದೆ. ಏಕ-ಬಳಕೆಯ ಪ್ಲಾಸ್ಟಿಕ್ (SUP) ಬಳಕೆಯನ್ನು ತೊಡೆದುಹಾಕಲು ಮಂಗಳೂರು ವಿಮಾನ ನಿಲ್ದಾಣ (MIA) ತಾನು ತೋರಿರುವ ಪ್ರದರ್ಶನಕ್ಕೆ ಮನ್ನಣೆಯಾಗಿ ಈ ರೇಟಿಂಗ್ ಪ್ರೋತ್ಸಾಹ ನೀಡಿದಂತಾಗಿದೆ.
MIA, FY 22 ರಲ್ಲಿದ್ದ ತಿಂಗಳಿಗೆ ಸರಾಸರಿ 1238kg ಪ್ಲಾಸ್ಟಿಕ್ ತ್ಯಾಜ್ಯವನ್ನು FY 23 ರಲ್ಲಿ ಸರಾಸರಿ 444 kg/ತಿಂಗಳಿಗೆ ಕಡಿಮೆ ಮಾಡಿದೆ, ಇದರ ಪರಿಣಾಮವಾಗಿ 23.8-ಟನ್ ಕಾರ್ಬನ್ ಡೈಆಕ್ಸೈಡ್ ಅನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ