ಪುಂಡರೇ ಎಚ್ಚರ.! ಅಬಲೆಯರ ನೆರವಿಗಾಗಿ ಬಂದಿದೆ ಕಲ್ಪತರು ಪಡೆ

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಮಹತ್ವದ ಹೆಜ್ಜೆಯನ್ನ ಇಟ್ಟಿರುವ ಜಿಲ್ಲಾ ಪೊಲೀಸ್‌ ಇಲಾಖೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಹಿಳಾ ಸಿಬ್ಬಂದಿ ಒಳಗೊಂಡ ವಿಶೇಷ ಕಲ್ಪತರು ಪಡೆ ರಚಿಸಿದೆ.

news18-kannada
Updated:December 4, 2019, 2:38 PM IST
ಪುಂಡರೇ ಎಚ್ಚರ.! ಅಬಲೆಯರ ನೆರವಿಗಾಗಿ ಬಂದಿದೆ ಕಲ್ಪತರು ಪಡೆ
ಕಲ್ಪತರು ಪಡೆ
  • Share this:
ತುಮಕೂರು(ಡಿ.04): ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯವನ್ನ ತಡೆಯೋಕೆ ಪೋಲಿಸರು ವಿವಿಧ ರೀತಿಯ ಪ್ಲ್ಯಾನ್ ಗಳನ್ನ ಮಾಡಿರೋದನ್ನ ನಾವು ನೋಡಿದ್ದೇವೆ. ಅಷ್ಟೇ ಏಕೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನ ತಡೆಯಯಲು ಬೆಂಗಳೂರು ಪೋಲಿಸರು ಆ್ಯಪ್ ಕೂಡ ಮಾಡಿದ್ದಾರೆ. ಆದರೆ ತುಮಕೂರು ಪೋಲಿಸರು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣುಮಕ್ಕಳಿಗೆ ಅಂತ ವಿಶೇಷ ಪಡೆಯೊಂದನ್ನು ರಚನೆ ಮಾಡಿಕೊಂಡಿದ್ದಾರೆ. 

ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಇಡೀ ದೇಶವನ್ನ ಬೆಚ್ಚಿಬೀಳಿಸುತ್ತಿದೆ. ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಇಡೀ ದೇಶದ ಹೆಣ್ಣು ಮಕ್ಕಳು ಬೆಚ್ಚಿಬೀಳುವಂತೆ ಮಾಡಿದೆ. ಇಂಥ ಪ್ರಕರಣಗಳು ಮರುಕಳಿಸದಂತೆ ತುಮಕೂರು ಪೋಲಿಸರು ಮಾತ್ರ ಪಕ್ಕಾ ಪ್ಲ್ಯಾನ್​​​ ಮಾಡಿ ಪಡೆಯೊಂದನ್ನ ರಚನೆ ಮಾಡಿದ್ದಾರೆ. ಅದೇ ಈ ಮಹಿಳಾ ಪೋಲಿಸರ ಕಲ್ಪತರು ಪಡೆ.

40 ಮಹಿಳಾ ಪೊಲೀಸರ ಕಲ್ಪತರು ಪಡೆ

ಮಹಿಳೆಯರು ಮತ್ತು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ತುಮಕೂರು ಪೊಲೀಸ್‌ ಇಲಾಖೆಯಿಂದ ತುರ್ತು ಸೇವೆ ಒದಗಿಸುವ ಉದ್ದೇಶದಿಂದ ವಿಶೇಷ ಕಲ್ಪತರು ಪಡೆ ರಚಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜಿಲ್ಲಾ ಪೊಲೀಸ್‌ ಇಲಾಖೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಹಿಳಾ ಸಿಬ್ಬಂದಿ ಒಳಗೊಂಡ ವಿಶೇಷ ಕಲ್ಪತರು ಪಡೆ ರಚಿಸಿದೆ.. ಈಗಾಗಲೇ ವಿಶೇಷ ತರಬೇತಿ ಪಡೆದು ಬಂದಿರುವ ಈ ಕಲ್ಪತರು ಪಡೆ ನಗರದಲ್ಲಿ ಹೆಣ್ಣು ಮಕ್ಕಳಿಗೆ ಏನೂ ಸಮಸ್ಯೆ ಆಗದಂತೆ ಕಟ್ಟೆಚ್ಚರ ವಹಿಸಿದೆ‌.

ಕಾಲೇಜುಗಳಿಗೆ ಭೇಟಿ ನೀಡುವ ಪಡೆ

ನಗರದ ಎಂಪ್ರಸ್‌ ಕಾಲೇಜು, ಸಿದ್ದಗಂಗಾ ಮಹಿಳಾ ಕಾಲೇಜು, ವಿದ್ಯಾನಿಕೇತನ ಕಾಲೇಜು, ಸರ್ವೋದಯ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆ ಹಾಗೂ ಅಪರಾಧಗಳಿಂದ ರಕ್ಷಿಸಿಕೊಳ್ಳುವ ಹಾಗೂ ಕಾನೂನಿನ ಅರಿವು ಮೂಡಿಸುವ ಕಾರ್ಯವನ್ನ ಈ ಪಡೆ ಮಾಡುತ್ತಿದೆ. ಸಧ್ಯಕ್ಕೆ ಮಹಿಳಾ ಸಿಬ್ಬಂದಿಗಳು ಹಾಗೂ ವಾಹನ ವ್ಯವಸ್ಥೆ ಕಡಿಮೆ ಇರುವುದರಿಂದ ಒಂದೇ ವಾಹನ ಮತ್ತು ಆರುಜನ ಸಿಬ್ಬಂದಿಗಳು ಇಡೀ ದಿನ ತುಮಕೂರು ನಗರವನ್ನ ಪ್ರದಕ್ಷಿಣೆ ಹಾಕುತ್ತಿದೆ.

ಇದನ್ನೂ ಓದಿ :  ಅನರ್ಹ ಶಾಸಕರು ರಾಜ್ಯದ ಮತದಾರರನ್ನು ಮುಂಬೈನಲ್ಲಿ ಮಾರಾಟ ಮಾಡಿದ್ದಾರೆ; ಮಾಜಿ ಸಚಿವ ಎಂ ಬಿ ಪಾಟೀಲ್ಇನ್ನು ಪಾರ್ಕ್, ರಸ್ತೆ ಬದಿ ಹಾಗೂ ಒಬ್ಬಂಟಿಯಾಗಿ ಕಾಣೋ ಹೆಣ್ಣುಮಕ್ಕಳನ್ನ ಪೂರ್ವಾಪರ ವಿಚಾರಿಸಿ ಅವರಿಗೆ ಸೂಕ್ತ ಮಾಹಿತಿ ನೀಡಿ ಎಲ್ಲಿಗೆ ಹೋಬೇಕು ಅಲ್ಲಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಇನ್ನೂ ಜಿಲ್ಲಾ ಪೋಲಿಸರ ಈ ಕಾರ್ಯಕ್ಕೆ ಎಲ್ಲಾ ಕಡೆಗಳಿಂದ ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ‌.
First published: December 4, 2019, 2:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading