ಆಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ; ಸಂಕಷ್ಟಕ್ಕೆ ಸಿಲುಕುತ್ತಾರ ಬಿಎಸ್​ವೈ?

ಆಡಿಯೋದಲ್ಲಿ ಯಾರು ಹೇಳಿದ್ದಾರೆ? ಯಾಕೆ ಹೇಳಿದ್ದಾರೆ?ಇದೆಲ್ಲಾ ನಿಜವಾಗಿ ನಡೆದಿದೆಯಾ? ಎಲ್ಲವೂ ಗೊತ್ತಾಗಬೇಕು. ಇದನ್ನು ತಿಳಿಯಲು ವಿಶೇಷ ತನಿಖೆ ನಡೆಯಲೇ ಬೇಕು ಎಂದು ಸ್ಪೀಕರ್​ ಕೂಡ ಸಹಮತ ಸೂಚಿಸಿದರು.

Seema.R | news18
Updated:February 11, 2019, 3:30 PM IST
ಆಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ; ಸಂಕಷ್ಟಕ್ಕೆ ಸಿಲುಕುತ್ತಾರ ಬಿಎಸ್​ವೈ?
ಕುಮಾರಸ್ವಾಮಿ-ಮಾಧುಸ್ವಾಮಿ
Seema.R | news18
Updated: February 11, 2019, 3:30 PM IST
ಬೆಂಗಳೂರು (ಫೆ.11): ಸದನದ ಕಲಾಪದಲ್ಲಿ ಬೆಳಗ್ಗೆಯಿಂದಲೂ ಸದ್ದು ಮಾಡಿದ ಕುದುರೆ ವ್ಯಾಪಾರದ ಆಡಿಯೋ ಪ್ರಹಸನಕ್ಕೆ ತನಿಖೆಯ ತಿರುವು ಸಿಕ್ಕಿದೆ. ಸದನದಲ್ಲಿ ಚರ್ಚೆಯ ನಂಗತರ ಸ್ಪೀಕರ್​ ಘನತೆಗೆ ಚ್ಯುತಿ ತರುವಂತೆ ಮಾತನಾಡಿರುವ ಆಡಿಯೋ ಕುರಿತು ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡ ರಚನೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಆಡಿಯೋ ಕುರಿತು  ಸದನದಲ್ಲಿ ಪ್ರಸ್ತಾಪಿಸಿದ ಸ್ಪೀಕರ್​ ರಮೇಶ್​ ಕುಮಾರ್​, ತಮ್ಮ ಮೇಲೆ ಮಾಡಿರುವ ಆಪಾದನೆ ಕುರಿತು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ನಡೆ ಬಗ್ಗೆ ಸದನಕ್ಕೆ ಶಾಸಕರಲ್ಲಿಯೇ ಪ್ರಶ್ನಿಸಿದರು. ಇನ್ನು ಈ ಕುರಿತು ಸಮಗ್ರ ತನಿಖೆಯಾಗಬೇಕು. ಸ್ಪೀಕರ್​ ಕುರಿತು ಹಗುರವಾಗಿ ಮಾತನಾಡಿರುವರಿಗೆ ಒಂದು ಪಾಠವಾಗಬೇಕು ಎಂದು ಶಾಸಕರು ಆಗ್ರಹಿಸಿದರು.

ಶಾಸಕರ ಒತ್ತಾಯದ ಹಿನ್ನಲೆ ಹಾಗೂ ತಮ್ಮ ಬಗ್ಗೆ ಈ ರೀತಿ ಮಾತನಾಡಿದವರು ಯಾರು ಎಂಬುದು ತಿಳಿಯಲು ತನಿಖೆ ನಡೆಯಲೇ ಬೇಕು ಎಂದು ಸ್ಪೀಕರ್​ ಕೂಡ ಸಹಮತ ಸೂಚಿಸಿದರು. ಆಡಿಯೋದಲ್ಲಿ ಯಾರು ಹೇಳಿದ್ದಾರೆ? ಯಾಕೆ ಹೇಳಿದ್ದಾರೆ? ಇದೆಲ್ಲಾ ನಿಜವಾಗಿ ನಡೆದಿದೆಯಾ? ಎಲ್ಲವೂ ಗೊತ್ತಾಗಬೇಕು. ಇದಕ್ಕಾಗಿ  ತನಿಖೆಗೆ ವಿಶೇಷ ತಂಡ ರಚಿಸುವಂತೆ ಮುಖ್ಯಮಂತ್ರಿಗೆ ಕೇಳಿಕೊಂಡರು.

ಈ ಕುರಿತು ಮಾತನಾಡಿದ ಸಿಎಂ ಕುಮಾರಸ್ವಾಮಿ,  ಆಡಿಯೋ ಬಗ್ಗೆ  ಆಡಳಿತ-ವಿಪಕ್ಷ
ಸದಸ್ಯರ ಭಾವನೆಗಳಿಗೆ ಸ್ಪಂದಿಸಿದ್ದೀರಿ. ನ್ಯಾಯಸಮ್ಮತವಾಗಿ ನೀವು ಕಾರ್ಯ ಮಾಡುತ್ತಿದ್ದೀರಿ. ಸದನದ ಸದಸ್ಯರು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಭಾವನೆಗಳನ್ನು ಎಲ್ಲಾ ಸದಸ್ಯರೂ ಅರ್ಥ ಮಾಡಿಕೊಂಡಿದ್ದೀರಿ. ನೀವೊಬ್ಬ ಭಾವನಾತ್ಮಕ ಜೀವಿ. ಎಲ್ಲವನ್ನೂ ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೀರಿ. ಸಂಪೂರ್ಣ ಸತ್ಯ ಹೊರಬರೋವರೆಗೂ ಹೊರಗಿರುತ್ತೇನೆ. ವಿಶೇಷ ತನಿಖೆ ಆಗಬೇಕು ಎಂಬ ಮಾತಿಗೆ ನಾನು ಬದ್ಧ, ಈ ಕುರಿತು ತನಿಖೆ ಮಾಡಲು ತಂಡ ರಚಿಸುತ್ತೇವೆ. 15 ದಿನದೊಳಗೆ ಈ ಕುರಿತು ವಿಚಾರಣೆ ನಡೆಸುತ್ತೇವೆ ಎಂದರು.

ಇದನ್ನು ಓದಿ: ಆಡಿಯೋ ಸಂಭಾಷಣೆ ಕುರಿತು ತನಿಖೆಗೆ ಆಗ್ರಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಎಸ್​ಐಟಿ ತನಿಖೆಗೆ ಮುಂದಾಗುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಂತೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ, ನಿಮ್ಮ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ.  ನಮ್ಮ ಬಳಿಯೂ ಸಿಕ್ಕಾಪಟ್ಟೆ  ಆಡಿಯೋ ಇದೆ. ಎಲ್ಲದರ ಬಗ್ಗೆ ಚರ್ಚೆಯಾಗಲಿ. ಎಲ್ಲವೂ ಬಹಿರಂಗವಾಗಲಿ ಎಂದರು.

ವಿಪಕ್ಷಗಳ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಿಎಂ ,  ಈ ಕುರಿತು ನೀವೆ ನಿರ್ಧಾರ ಮಾಡುವಂತೆ ಸ್ಪೀಕರ್​ಗೆ ತಿಳಿಸಿದರು. ನಿಮ್ಮ ನೇತೃತ್ವದಲ್ಲೇ ಬೇರೇ ತನಿಖೆಯಾಗಲಿ. ಅದಕ್ಕೆ ನಾವು ಬದ್ಧ ಎಂದು ಮನವಿ ಮಾಡಿದರು.

ಇದಕ್ಕೆ ಅಡ್ಡಿ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ ತನಿಖೆಯ ಬಗ್ಗೆ ನಮಗೆ ನಂಬಿಕೆಯಿಲ್ಲ. ತನಿಖೆ ನಡೆಸಬಾರದು ಎಂದು ಮನವಿ ಮಾಡಿದರು. ಉತ್ತರಿಸಿದ ಸ್ಪೀಕರ್​ ರಮೇಶ್​ ಕುಮಾರ್​, ಆದೇಶಿಸುವ ಹಕ್ಕು ನನಗಿಲ್ಲ ಆದರೆ ಸಲಹೆ ನೀಡಬಹುದು. ಸಲಹೆ ನೀಡಿದ್ದೇನೆ ಅದರ ಮುಂದಿನ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದಿದ್ದಾರೆ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...