ಕೊಡಗು ಪುನರ್​ ನಿರ್ಮಾಣಕ್ಕೆ ಕೈಜೋಡಿಸಿ: ತಲಾ 25 ಲಕ್ಷ ರೂ ನೀಡುವಂತೆ ಶಾಸಕರಿಗೆ ಸ್ಪೀಕರ್​ ಪತ್ರ

ಕೊಡಗು ಜನರಿಗೆ ಬದುಕು ಕಟ್ಟಿಕೊಡಲು ಶಾಸಕರು 25 ಲಕ್ಷ ರೂ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಮನವಿ ಪತ್ರ.

Ganesh Nachikethu
Updated:September 1, 2018, 10:22 AM IST
ಕೊಡಗು ಪುನರ್​ ನಿರ್ಮಾಣಕ್ಕೆ ಕೈಜೋಡಿಸಿ: ತಲಾ 25 ಲಕ್ಷ ರೂ ನೀಡುವಂತೆ ಶಾಸಕರಿಗೆ ಸ್ಪೀಕರ್​ ಪತ್ರ
ಕೊಡಗು ಜನರಿಗೆ ಬದುಕು ಕಟ್ಟಿಕೊಡಲು ಶಾಸಕರು 25 ಲಕ್ಷ ರೂ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಮನವಿ ಪತ್ರ.
Ganesh Nachikethu
Updated: September 1, 2018, 10:22 AM IST
 ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.01): ಪ್ರವಾಹ ಪೀಡಿತ ಕೊಡಗು ಪುನರ್​​ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ತಲಾ 25 ಲಕ್ಷ ರೂ. ದೇಣಿಗೆ ನೀಡುವಂತೆ ಶಾಸಕರಿಗೆ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಪತ್ರ ಬರೆದಿದ್ಧಾರೆ. ಜಲಪ್ರವಾಹದ ಪಾಕೃತಿಕ ವಿಕೋಪಕ್ಕೆ ಜನರು ಎಲ್ಲವನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಕೊಡಗು ಮತ್ತೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಶಾಸಕರಿಗೆ ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ.

ಸರ್ಕಾರ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಸಂಬಂಧ ನಿಯಮಾವಳಿಯಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು. ಭೂಕುಸಿತದಿಂದ ಹಾನಿಗೊಳಗಾಗಿರುವ ಕೊಡಗು ನಿರ್ಮಾಣಕ್ಕೆ ಕೈಜೋಡಿಸ ಬೇಕಿರುವುದು ನಮ್ಮೆಲ್ಲರ ಹೊಣೆ. ಹೀಗಾಗಿ, ನಿಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಹಣ ನೀಡಿ ಎಂದು ಕೇಳಿಕೊಂಡಿದ್ದಾರೆ.

ಪತ್ರದಲ್ಲಿ ಸ್ಪೀಕರ್ ದೇಶಕ್ಕೆ ಇಬ್ಬರು ಮಹಾದಂಡ ನಾಯಕರನ್ನು ಕೊಡಗು ನೀಡಿದೆ. ಪ್ರಕೃತಿ ವಿಕೋಪದಿಂದ ತತ್ತರಿಸಿಹೋಗಿರುವ ಜಿಲ್ಲೆಯ ಜನರ ನೋವಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ರಾಜ್ಯದ ಅಭಿವೃದ್ದಿ ಹೊಣೆ ನಮ್ಮ ಮೇಲಿದೆ. ಹೀಗಾಗಿ ಕೊಡಗು ಜನರಿಗೆ ಬದುಕು ಕಟ್ಟಿಕೊಡಲು ಶಾಸಕರು 25 ಲಕ್ಷ ರೂ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ತಿಳಿಸಿದರು.

ಕೊಡಗು ಸಂಕಷ್ಟಕ್ಕೆ ಸಿಲುಕಿದ ನಂತರ ವಿರಾಜ್​ಪೇಟೆ ಶಾಸಕ ಕೆ.ಜಿ ಬೋಪಯ್ಯ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್​ ಅವರು ಶಾಸಕರಿಂದ ದೇಣಿಗೆ ಕೊಡಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದರು. ಅಲ್ಲದೇ ಕೋಟ್ಯಾಂತರ ಹಣ ಅಗತ್ಯವಿದ್ದು, ಕನಿಷ್ಟ 50 ಲಕ್ಷ ರೂ ದೇಣಿಗೆ ಕೊಡಿಸುವಂತೆ ಪತ್ರ ಬರೆದಿದ್ದರು.

ಶಾಸಕರ ಪತ್ರ ಆದರಿಸಿ ಸ್ಪೀಕರ್​ ರಮೇಶ್​​ ಕುಮಾರ್​​ ಎಲ್ಲಾ ಶಾಸಕರಿಗೂ ಪತ್ರ ಬರೆದಿದ್ಧಾರೆ. ಜನರ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರೆಯಿರಿ ಎಂದು ಕೇಳಿಕೊಂಡಿದ್ಧಾರೆ. ಸಿಎಂ ಕುಮಾರಸ್ವಾಮಿ ಅವರಿಗೂ ಶಾಸಕರ ಪ್ರದೇಶಾಭಿವೃದ್ದಿ ಸಂಬಂಧಿತ ನಿಯಮಾವಳಿಯಲ್ಲಿ ಅಗತ್ಯ ತಿದ್ದುಪಡಿ ತರಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Loading...

ಕಾಂಗ್ರೆಸ್​ ಶಾಸಕ-ಸಂಸದರು ಈಗಾಗಲೇ ಸಂತ್ರಸ್ತರ ನೆರವಿಗೆ ಧಾವಿಸಿದ್ಧಾರೆ. ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಕೂಡ ತಮ್ಮ ಕೈಯಲ್ಲಾದ ಸಹಾಯ ಮಾಡಿದ್ಧಾರೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಸೇರಿದಂತೆ ಹಲವು ದೇವಲಾಯಗಳಿಂದಲೂ  50 ಲಕ್ಷ ರೂ. ನೆರವು ನೀಡಲು ಸೂಚಿಸಲಾಗಿದೆ.

ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಿಂದ 3 ಕೋಟಿ ರೂ., ಕಟೀಲು ದುರ್ಗಾಪರಮೇಶ್ವರಿ ದೇವಾಲಯದಿಂದ 75 ಲಕ್ಷ ರೂ., ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ 50 ಲಕ್ಷ ನೆರವು, ಘಾಟಿ ಸುಬ್ರಹ್ಮಣ್ಯದಿಂದ 50 ಲಕ್ಷ ರೂ., ಬನಶಂಕರಿ ದೇವಾಲಯದಿಂದ 50 ಲಕ್ಷ ನೆರವು ನೀಡಲು ಸಚಿವರು ಆದೇಶಿಸಿದ್ದಾರೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...