ಆಡಿಯೋ ಪ್ರಕರಣ: ಎಸ್ಐಟಿ ತನಿಖೆಗೆ ಒಪ್ಪಿಸಲೇಬೇಕು ಇದೇ ನನ್ನ ಇಂಗಿತ; ರಮೇಶ್ ಕುಮಾರ್
ಸದನ ಸಮಿತಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ನ್ಯಾಯಾಂಗ ತನಿಖೆಯೂ ಸರಿಯಾಗಲ್ಲ. ಎಸ್ಐಟಿ ತನಿಖೆಯೇ ಆಗಬೇಕು. ನನ್ನ ಮೇಲಿನ ತಪ್ಪು ಆಪಾದನೆಯನ್ನು ಹೊತ್ತುಕೊಂಡು ತಿರುಗಲು ಸಾಧ್ಯವಿಲ್ಲ ಯಾರಿಂದ ತನಿಖೆ ಅನ್ನುವುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ
ಬೆಂಗಳೂರು (ಫೆ.12): ಸ್ಪೀಕರ್ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಸಂಭಾಷಣೆ ನಡೆಸಿರುವ ಆಡಿಯೋ ಕುರಿತು ಎಸ್ಐಟಿ ತನಿಖೆ ನಡೆಯಬೇಕು. ಈಗಾಗಲೇ ಈ ಬಗ್ಗೆ ಸೂಚನೆ ನೀಡಿದ್ದೇನೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೇ ನನ್ನ ಇಂಗಿತ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಆಡಿಯೋ ಪ್ರಕರಣ ಎಸ್ಐಟಿ ತನಿಖೆಗೆ ಒಪ್ಪಿಸಿದರೆ, ಸಂಕಷ್ಟಕ್ಕೆ ಸಿಲುಕುವ ಭಯದಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಸ್ಐಟಿಗೆ ಬೇಡ ಎಂದು ಬಿಜೆಪಿ ಮನವಿ ಮಾಡಿದೆ. ಎಸ್ಐಟಿ ರಚನೆಗೆ ಸದನದಲ್ಲಿ ಕೂಡ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಸ್ಪೀಕರ್ ಈ ಬಗ್ಗೆ ನಾನು ಯಾವುದೇ ನಿರ್ದೇಶನ ಕೊಡಲು ಸಾಧ್ಯವಿಲ್ಲ. ಸಲಹೆಯನ್ನು ಅಷ್ಟೇ ನೀಡಬಹುದು ಎಂದು ಸ್ಪಷ್ಟಪಡಿಸಿದ್ದರು.
ಈ ಪ್ರಕರಣವನ್ನು ಮುಖ್ಯಮಂತ್ರಿಗಳು ಆರೋಪಿಸಿರುವ ಹಿನ್ನೆಲೆ ಈ ತನಿಖೆಯಲ್ಲಿ ತಮಗೆ ವಿಶ್ವಾಸವಿಲ್ಲ. ಮುಖ್ಯಮಂತ್ರಿ ನೇತೃತ್ವದಲ್ಲಿ ಎಸ್ಐಟಿ ತನಿಖೆಗೆ ನಮಗೆ ವಿರೋಧವಿದೆ ಎಂದು ಬಿಜೆಪಿ ನಾಯಕರು ವಾದಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್, ಈ ಬಗ್ಗೆ ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ. ಎಲ್ಲಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿಯೇ ಇರುತ್ತವೆ. ಹಾಗಂತ ಎಲ್ಲಾ ಅಧಿಕಾರಿಗಳು ಸರ್ಕಾರದ ಆಳುಗಳಲ್ಲ ಎಂದು ತಿರುಗೇಟು ನೀಡಿದರು."ಸದನ ಸಮಿತಿ ತನಿಖೆ ಮಾಡಲು ಸಾಧ್ಯವಿಲ್ಲ. ಅಲ್ಲದೇ ನ್ಯಾಯಾಂಗ ತನಿಖೆಯೂ ಸರಿಯಾಗಲ್ಲ. ಎಸ್ಐಟಿ ತನಿಖೆಯೇ ಆಗಬೇಕು. ನನ್ನ ಮೇಲಿನ ತಪ್ಪು ಆಪಾದನೆಯನ್ನು ಹೊತ್ತುಕೊಂಡು ತಿರುಗಲು ಸಾಧ್ಯವಿಲ್ಲ ಯಾರಿಂದ ತನಿಖೆ ಅನ್ನುವುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ" ಎಂದರು
ಇದನ್ನು ಓದಿ: ಆಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ; ಸಂಕಷ್ಟಕ್ಕೆ ಸಿಲುಕುತ್ತಾರ ಬಿಎಸ್ವೈ?
ಇದೇ ವೇಳೆ ಅತೃಪ್ತ ಶಾಸಕರ ಅನರ್ಹ ವಿಚಾರ ಕಾಂಗ್ರೆಸ್ ದೂರಿನ ಕುರಿತು ಮಾತನಾಡಿದ ಅವರು, ಅದರ ಬಗ್ಗೆ ನಾನು ಅಧ್ಯಯನ ಮಾಡಬೇಕು. ನಂತರ ಉಳಿದ ವಿಚಾರ ಚರ್ಚೆ ಮಾಡುತ್ತೇನೆ. ಅತೃಪ್ತ ಶಾಸಕರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುತ್ತೇನೆ. ಕಂಪ್ಲಿ ಗಣೇಶ್ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಪೊಲೀಸರು ಸ್ವತಂತ್ರರು. ಗಣೇಶ್ನನ್ನು ಬಂಧಿಸಿದರೆ ನಮಗೆ ಮಾಹಿತಿ ನೀಡುತ್ತಾರೆ ಎಂದರು. ಸ್ಪೀಕರ್ಗೆ ಮನವಿ ಮಾಡಲಿರುವ ಬಿಜೆಪಿ
ಎಸ್ಐಟಿ ತನಿಖೆ ಆದರೆ ತಮಗೆ ಪ್ರಕರಣ ಉರುಳಾಗಲಿದೆ ಎಂದು ಅರಿತಿರುವ ಬಿಜೆಪಿ ನಾಯಕರು, ಈ ಪ್ರಕರಣವನ್ನು ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ತನಿಖೆಗೆ ಆಗ್ರಹಿಸಿರುವಂತೆ ಸ್ಪೀಕರ್ಗೆ ಮನವಿ ಮಾಡಲಿದೆ. ಅಲ್ಲದೆ ಇಂದಿನ ಕಲಾಪದಲ್ಲಿ ಕೂಡ ಈ ವಿಚಾರ ಪ್ರಸ್ತಾಪಿಸಲಿರುವ ಬಿಜೆಪಿ ಶಾಸಕರು ಈ ವಿಷಯದ ಕುರಿತು ಚರ್ಚೆ ನಡೆಸಲಿದ್ದು, ಕಲಾಪಕ್ಕೆ ಅಡ್ಡಿಯುಂಟು ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ತನಿಖೆ ಬಗ್ಗೆ ತಿಳಿಸಲಿರುವ ಸಿಎಂ
ಪ್ರಕರಣದ ಕುರಿತು ಎಸ್ಐಟಿ ರಚನೆ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸುವುದಾ ಎಂಬ ಬಗ್ಗೆ ಇಂದು ಸಿಎಂ ಸ್ಪಷ್ಟಪಡಿಸಲಿದ್ದಾರೆ. ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿಸು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮುಂದಾಗುತ್ತಾರಾ ಎಂಬುದು ಕಾದು ನೋಡಬೇಕಿದೆ.
ಆಡಿಯೋ ಪ್ರಕರಣ ಎಸ್ಐಟಿ ತನಿಖೆಗೆ ಒಪ್ಪಿಸಿದರೆ, ಸಂಕಷ್ಟಕ್ಕೆ ಸಿಲುಕುವ ಭಯದಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಸ್ಐಟಿಗೆ ಬೇಡ ಎಂದು ಬಿಜೆಪಿ ಮನವಿ ಮಾಡಿದೆ. ಎಸ್ಐಟಿ ರಚನೆಗೆ ಸದನದಲ್ಲಿ ಕೂಡ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಸ್ಪೀಕರ್ ಈ ಬಗ್ಗೆ ನಾನು ಯಾವುದೇ ನಿರ್ದೇಶನ ಕೊಡಲು ಸಾಧ್ಯವಿಲ್ಲ. ಸಲಹೆಯನ್ನು ಅಷ್ಟೇ ನೀಡಬಹುದು ಎಂದು ಸ್ಪಷ್ಟಪಡಿಸಿದ್ದರು.
ಈ ಪ್ರಕರಣವನ್ನು ಮುಖ್ಯಮಂತ್ರಿಗಳು ಆರೋಪಿಸಿರುವ ಹಿನ್ನೆಲೆ ಈ ತನಿಖೆಯಲ್ಲಿ ತಮಗೆ ವಿಶ್ವಾಸವಿಲ್ಲ. ಮುಖ್ಯಮಂತ್ರಿ ನೇತೃತ್ವದಲ್ಲಿ ಎಸ್ಐಟಿ ತನಿಖೆಗೆ ನಮಗೆ ವಿರೋಧವಿದೆ ಎಂದು ಬಿಜೆಪಿ ನಾಯಕರು ವಾದಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್, ಈ ಬಗ್ಗೆ ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ. ಎಲ್ಲಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿಯೇ ಇರುತ್ತವೆ. ಹಾಗಂತ ಎಲ್ಲಾ ಅಧಿಕಾರಿಗಳು ಸರ್ಕಾರದ ಆಳುಗಳಲ್ಲ ಎಂದು ತಿರುಗೇಟು ನೀಡಿದರು."ಸದನ ಸಮಿತಿ ತನಿಖೆ ಮಾಡಲು ಸಾಧ್ಯವಿಲ್ಲ. ಅಲ್ಲದೇ ನ್ಯಾಯಾಂಗ ತನಿಖೆಯೂ ಸರಿಯಾಗಲ್ಲ. ಎಸ್ಐಟಿ ತನಿಖೆಯೇ ಆಗಬೇಕು. ನನ್ನ ಮೇಲಿನ ತಪ್ಪು ಆಪಾದನೆಯನ್ನು ಹೊತ್ತುಕೊಂಡು ತಿರುಗಲು ಸಾಧ್ಯವಿಲ್ಲ ಯಾರಿಂದ ತನಿಖೆ ಅನ್ನುವುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ" ಎಂದರು
ಇದನ್ನು ಓದಿ: ಆಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ; ಸಂಕಷ್ಟಕ್ಕೆ ಸಿಲುಕುತ್ತಾರ ಬಿಎಸ್ವೈ?
ಇದೇ ವೇಳೆ ಅತೃಪ್ತ ಶಾಸಕರ ಅನರ್ಹ ವಿಚಾರ ಕಾಂಗ್ರೆಸ್ ದೂರಿನ ಕುರಿತು ಮಾತನಾಡಿದ ಅವರು, ಅದರ ಬಗ್ಗೆ ನಾನು ಅಧ್ಯಯನ ಮಾಡಬೇಕು. ನಂತರ ಉಳಿದ ವಿಚಾರ ಚರ್ಚೆ ಮಾಡುತ್ತೇನೆ. ಅತೃಪ್ತ ಶಾಸಕರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುತ್ತೇನೆ. ಕಂಪ್ಲಿ ಗಣೇಶ್ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಪೊಲೀಸರು ಸ್ವತಂತ್ರರು. ಗಣೇಶ್ನನ್ನು ಬಂಧಿಸಿದರೆ ನಮಗೆ ಮಾಹಿತಿ ನೀಡುತ್ತಾರೆ ಎಂದರು.
Loading...