ಶಾಸಕ ಉಮೇಶ್​ ಜಾಧವ್ ರಾಜೀನಾಮೆ ಅಂಗೀಕಾರ ಮಾಡುತ್ತಾರಾ ಸ್ಪೀಕರ್​?; ಕುತೂಹಲ ಮೂಡಿಸಿದೆ ರಮೇಶ್​ಕುಮಾರ್​ ನಡೆ

ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುವ ಉಮೇಶ ಜಾಧವ್ ಗೆ ನೈತಿಕತೆ ಇಲ್ಲ. ಇಂತಹವರು ಪಕ್ಷ ಬಿಟ್ಟು ಹೋಗಿದ್ದೇ ಒಳ್ಳೆಯದಾಯ್ತು ಎಂದು ದಿನೇಶ್​ ಗುಂಡೂರಾವ್​ ಅಸಮಾಧಾನ ವ್ಯಕ್ತಪಡಿಸಿದರು.

HR Ramesh | news18
Updated:March 4, 2019, 11:34 AM IST
ಶಾಸಕ ಉಮೇಶ್​ ಜಾಧವ್ ರಾಜೀನಾಮೆ ಅಂಗೀಕಾರ ಮಾಡುತ್ತಾರಾ ಸ್ಪೀಕರ್​?; ಕುತೂಹಲ ಮೂಡಿಸಿದೆ ರಮೇಶ್​ಕುಮಾರ್​ ನಡೆ
ಉಮೇಶ್​ ಜಾಧವ್​
  • News18
  • Last Updated: March 4, 2019, 11:34 AM IST
  • Share this:
ಬೆಂಗಳೂರು: ಅಂತು ಕೊನೆಗೂ ಕಾಂಗ್ರೆಸ್​ನ ಚಿಂಚೋಳಿ ಶಾಸಕ ಉಮೇಶ್​ ಜಾಧವ್​ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ಪಾಳಯಕ್ಕೆ ಬಿಗ್​ ಶಾಕ್​ ನೀಡಿದ್ದಾರೆ. ಇಂದು ಬೆಳಗ್ಗೆ ಸ್ಪೀಕರ್​ ರಮೇಶ್​ ಕುಮಾರ್​ ಅವರನ್ನು ಭೇಟಿಯಾದ ಉಮೇಶ್​ ಜಾಧವ್​ ತಮ್ಮ ರಾಜೀನಾಮೆಯನ್ನು ನೀಡಿದರು. ಮುಂದೆ ಉಮೇಶ್ ಜಾಧವ್ ರಾಜೀನಾಮೆಯನ್ನು ಸ್ಪೀಕರ್​ ಅಂಗೀಕಾರ ಮಾಡುತ್ತಾರಾ ಅಥವಾ ಅಮಾನತು ವಿಚಾರಣೆ ಕಾರಣ ನೀಡಿ ವಿಳಂಬ ಮಾಡ್ತಾರ? ವಿವರಣೆ ಕೇಳಿ ಜಾಧವ್ ವಿಚಾರಣೆ ಮಾಡುತ್ತಾರಾ ಎಂಬ ಕುತೂಹಲ ಮೂಡಿದ್ದು, ಸ್ಪೀಕರ್ ನಡೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಉಮೇಶ್​ ಜಾಧವ್ ಸೇರಿ ನಾಲ್ವರ ಶಾಸಕ ಸ್ಥಾನ ಅನರ್ಹ ಮಾಡುವಂತೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್​ಗೆ ದೂರು ನೀಡಿದ್ದರು. ಈ ದೂರಿನ‌ ಆಧಾರದ ಮೇಲೆ‌ ನೋಟಿಸ್ ನೀಡಿ ಸ್ಪೀಕರ್​ ವಿವರಣೆ ಕೇಳಬೇಕಿದೆ. ಸ್ಪೀಕರ್ ವಿವರಣೆ ಬಳಿಕ ಶಾಸಕ‌ ಸ್ಥಾನ ಅನರ್ಹ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ರಮೇಶ್ ಜಾರಕಿಹೊಳಿ‌, ಮಹೇಶ್ ಕುಮಟಳ್ಳಿ, ಬಿ ನಾಗೇಂದ್ರ ಹಾಗೂ ಉಮೇಶ್ ಜಾಧವ್ ಒಟ್ಟು ನಾಲ್ಕು ಶಾಸಕರ ಅನರ್ಹತೆಗೆ ದೂರು ನೀಡಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಶಾಸಕರು ಅನರ್ಹತೆ ಭೀತಿಯಲ್ಲಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಮೇಶ್ ಜಾಧವ್ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕಾರಣಕ್ಕೆ ಜಾಧವ್ ರಾಜೀನಾಮೆ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾಧವ್​ ಲೋಕ ಸಮರದಲ್ಲಿ ಎದುರಾಳಿಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಾರ್ಚ್ 6ನೇ ತಾರೀಖು ಉಮೇಶ್​ ಜಾಧವ್​ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಆಗಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಮಾರ್ಚ್​ 6ರಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ನಡೆಯಲಿದ್ದು, ಇದೇ ವೇದಿಕೆಯಲ್ಲಿ ಜಾಧವ್​ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಪ್ರಧಾನಿಯಿಂದಲೇ‌ ಜಾಧವ್ ಬಿಜೆಪಿ ಅಭ್ಯರ್ಥಿ ಎಂದು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮಾರ್ಚ್ 6ರ ಒಳಗೆ ರಾಜೀನಾಮೆ ಅಂಗೀಕಾರ ಮಾಡುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.  ಒಂದು ವೇಳೆ ಮಾರ್ಚ್ 6ರೊಳಗೆ ರಾಜೀನಾಮೆ ಅಂಗೀಕಾರ ಆಗದೇ ಇದ್ದರೆ ಬಿಜೆಪಿ ಸೇರ್ಪಡೆ ವಿಳಂಬವಾಗಲಿದೆ.

ಇದನ್ನು ಓದಿ: ಕಾಂಗ್ರೆಸ್​ ಶಾಸಕ ಉಮೇಶ್​​ ಜಾಧವ್​ ರಾಜೀನಾಮೆ

ಉಮೇಶ್​ ಜಾಧವ್​ ರಾಜೀನಾಮೆಗೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್, ಉಮೇಶ್​ ಜಾಧವ ಬಿಕರಿಯಾಗಿದ್ದಾರೆ. ಅವರಿಗೆ ಯಾವುದೇ ರಾಜಕೀಯ ಸಿದ್ಧಾಂತ ಇಲ್ಲ ಅನ್ನೋದನ್ನ ತೋರಿಸಿದ್ದಾರೆ. ಈ ಪಕ್ಷದಿಂದ ಎಲ್ಲವನ್ನೂ ಪಡೆದು ಇದೀಗ ಬಿಜೆಪಿಗೆ ಹೋಗುವ ಮೂಲಕ ಸ್ವಾರ್ಥ ರಾಜಕಾರಣ ಮಾಡಿದ್ದಾರೆ. ಪಕ್ಷ ಅವರಿಗೆ ಅನ್ಯಾಯ ಮಾಡಿದ್ರೆ ಸರಿ. ಏನೂ ಮಾಡದೇ ಅವರು ಬಿಜೆಪಿಗೆ ಹೋಗುತ್ತಿದ್ದಾರೆ ಅಂದರೆ ಏನರ್ಥ. ನಮಗೆ ಮೊದಲೇ ಗೊತ್ತಿತ್ತು.‌ಅವರು ನಮ್ಮ ಪಕ್ಷದಲ್ಲಿ ಇರಲ್ಲ ಅನ್ನೋದು ಎಂದು ಹೇಳಿದರು. ಮತ್ತೆ ಬೇರೆ ಯಾವ ಶಾಸಕರು ರಾಜೀನಾಮೆ ಕೊಡಬಹುದು ಅನ್ನುವ ಪ್ರಶ್ನೆಗೆ ಅನರ್ಹ ಆಗಬಾರದು‌ ಅನ್ನುವ ಕಾರಣಕ್ಕೆ ಅವರು ಸದನಕ್ಕೆ ಹಾಜರಾಗಿದ್ರು. ಯಾರಿಗೆ ಸೈದ್ಧಾಂತಿಕವಾಗಿ ಬದ್ಧತೆ ಇರಲ್ಲ. ಅಂತವರು ಹೋಗಬಹುದು , ಹೋಗದೆಯೂ ಇರಬಹುದು. ಉಮೇಶ ಜಾಧವ ಸುಳ್ಳು ಹೇಳಬಾರದು.‌ಲೋಕಸಭೆಗೆ ಟಿಕೆಟ್ ಕೊಡ್ತಾರೆ ಅದಕ್ಕೆ ಹೋಗ್ತಿದ್ದೀನಿ ಅಂತಾ ಹೇಳಿದ್ರೆ ಸಾಕಿತ್ತು. ಮಲ್ಲಿಕಾರ್ಜುನ ಖರ್ಗೆಯವರನ್ನು ಯಾರಿಗೂ ಹೋಲಿಕೆ ‌ಮಾಡಲು ಆಗಲ್ಲ. ಅವರ ಕೊಡುಗೆ ಅಪಾರ. ಆ ಭಾಗಕ್ಕೆ ವಿಶೇಷ ಸ್ಥಾನ‌ಮಾನ ಬಂದಿದ್ರೆ ಅದಕ್ಕೆ ಖರ್ಗೆ ಅವ್ರು ಕಾರಣ. ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುವ ಉಮೇಶ ಜಾಧವ್ ಗೆ ನೈತಿಕತೆ ಇಲ್ಲ. ಇಂತಹವರು ಪಕ್ಷ ಬಿಟ್ಟು ಹೋಗಿದ್ದೇ ಒಳ್ಳೆಯದಾಯ್ತು ಎಂದು ದಿನೇಶ್​ ಗುಂಡೂರಾವ್​ ಅಸಮಾಧಾನ ವ್ಯಕ್ತಪಡಿಸಿದರು.

ಉಮೇಶ್​ ಜಾಧವ್​ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಮೇಶ ಜಾಧವ್ ರಾಜೀನಾಮೆ ನೀಡುವ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ. ನಾನು ಕೊನೆಯ ಹಂತದವರೆಗೂ ಮನವೊಲಿಸುವ ಪ್ರಯತ್ನ ಮಾಡಿದೆ. ನಾಳೆ ಅವರಿಗೆ ಎಲ್ಲ ಗೊತ್ತಾಗುತ್ತೆ. ರಾಜೀನಾಮೆ ಸ್ವೀಕರಿಸುವ ಬಗ್ಗೆ ಸ್ಪೀಕರ್ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
First published: March 4, 2019, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading