Karnataka Trust Vote: ಮತದಾನದ ಮೂಲಕ ವಿಶ್ವಾಸಮತ ಯಾಚನೆ; ಸ್ಪೀಕರ್​ ರಮೇಶ್​ ಕುಮಾರ್​

Karnataka Trust Vote: ವಿಶ್ವಾಸಮತ ಯಾಚನೆ ವೇಳೆ  ಎಲ್ಲಾ ಶಾಸಕರ ಹಾಜರಿ ಅಗತ್ಯವಿಲ್ಲ. ಹಾಜರಿರುವ ಶಾಸಕರ ಮತಗಳನ್ನು ಗಣನೆಗೆ ತೆಗೆದುಕೊಂಡು ಬಹುಮತ ನಿರ್ಣಯ ಮಾಡಲಾಗುವುದು. ಡಿವಿಷನ್ ಬೆಲ್ ರಿಂಗ್ ಆದಮೇಲೆ ಇರುವ ಸಂಖ್ಯೆಯಲ್ಲಿ ಬಹುಮತ ಗಣನೆಗೆ ತೆಗೆದುಕೊಳ್ಳುತ್ತೇವೆ. 

Seema.R | news18
Updated:July 18, 2019, 11:09 AM IST
Karnataka Trust Vote: ಮತದಾನದ ಮೂಲಕ ವಿಶ್ವಾಸಮತ ಯಾಚನೆ; ಸ್ಪೀಕರ್​ ರಮೇಶ್​ ಕುಮಾರ್​
ರಮೇಶ್​ ಕುಮಾರ್
  • News18
  • Last Updated: July 18, 2019, 11:09 AM IST
  • Share this:
ಬೆಂಗಳೂರು (ಜು.18): ಮೈತ್ರಿ ಸರ್ಕಾರದ ಅಳಿವು- ಉಳಿವಿನ ಲೆಕ್ಕಾಚಾರ ಇಂದು ನಡೆಯಲಿದ್ದು, ಇಡೀ ದೇಶದ ಕಣ್ಣು ರಾಜ್ಯದ ಶಕ್ತಿಸೌಧದ ಮೇಲಿದೆ. ಪೂರ್ವ ನಿಗದಿಯಂತೆ ಮೈತ್ರಿ ಸರ್ಕಾರ  ಇಂದು ವಿಶ್ವಾಸ ಮತ ಯಾಚನೆ ಮಾಡಲಿದ್ದು, ಸದನದ ನಿರ್ಣಯವನ್ನು ಮತಕ್ಕೆ ಹಾಕಲಾಗುವುದು ಎಂದು ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದರು.

ಸದನಕ್ಕೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸದನದಲ್ಲಿ ಹಾಜರಿರುವ ಶಾಸಕರಿಂದ ಬಹುಮತ ನಿರ್ಣಯ ನಡೆಸಲಾಗುವುದು. ಈ ಬಗ್ಗೆ ಯಾರಿಗೆ ತೃಪ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ತೃಪ್ತನಾಗಿದ್ದೇನೆ ಎಂದರು

ವಿಶ್ವಾಸಮತ ಯಾಚನೆ ವೇಳೆ  ಎಲ್ಲಾ ಶಾಸಕರ ಹಾಜರಿ ಅಗತ್ಯವಿಲ್ಲ. ಹಾಜರಿರುವ ಶಾಸಕರ ಮತಗಳನ್ನು ಗಣನೆಗೆ ತೆಗೆದುಕೊಂಡು ಬಹುಮತ ನಿರ್ಣಯ ಮಾಡಲಾಗುವುದು. ಡಿವಿಷನ್ ಬೆಲ್ ರಿಂಗ್ ಆದಮೇಲೆ ಇರುವ ಸಂಖ್ಯೆಯಲ್ಲಿ ಬಹುಮತ ಗಣನೆಗೆ ತೆಗೆದುಕೊಳ್ಳುತ್ತೇವೆ. ಸದನದ ಬಾಗಿಲು ಹಾಕಿದ ನಂತರ ಇರುವ ಶಾಸಕರಲ್ಲಿ ಯಾರು ಸಾಬೀತು ಮಾಡುತ್ತಾರೆ ಅವರಿಗೆ ಬಹುಮತ ಎಂದರು.

ಇದನ್ನು ಓದಿ: ವಿಶ್ವಾಸಮತ ಯಾಚನೆ; ಬಿಜೆಪಿಗಿಂತ ಕಾನ್ಫಿಡೆಂಟ್ ಆಗಿರುವ ಸಿಎಂ ಹೆಚ್​ಡಿಕೆ; ಆಪರೇಷನ್ ಮೈತ್ರಿ ಗುಮಾನಿ!

11 ಗಂಟೆಗೆ ಸದನ ಪ್ರಾರಂಭವಾಗಲಿದ್ದು, ಈಗಾಗಲೇ ವಿಶ್ವಾಸಮತ ಯಾಚನೆ ಕುರಿತು ಪ್ರತಿಯೊಬ್ಬ ಶಾಸಕರಿಗೂ ನೋಟಿಸ್​ ಜಾರಿ ಮಾಡಲಾಗಿದೆ. ಯಾರು ಬರುತ್ತಾರೆ. ಬರಲಿ. ಶಾಸಕರನ್ನು ಕರೆತರುವುದು ಪಕ್ಷಗಳಿಗೆ ಬಿಟ್ಟ ವಿಚಾರ. ಈ ಬಗ್ಗೆ ನನಗೆ ಸಂಬಂಧವಿಲ್ಲ. ನಾನು ಸಂವಿಧಾನಿಕವಾಗಿ ನನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತೇನೆ ಎಂದರು.

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading