ವಿಪ್ ಉಲ್ಲಂಘಿಸಿದವರ ವಿರುದ್ಧ ಕ್ರಮ ಖಾಯಂ; ತಮ್ಮ ನಿಲುವು ಸ್ಪಷ್ಟಪಡಿಸಿದ ಸ್ಪೀಕರ್ ರಮೇಶ್ ಕುಮಾರ್!

ನೀವು ನಿರೀಕ್ಷೆ ಮಾಡುವ ಆದೇಶ ಕೊಡಲು ಸಾಧ್ಯವಿಲ್ಲ. ಆದರೆ, ವಿಪ್ ಉಲ್ಲಂಘಿಸಿದವರ ವಿರುದ್ಧ ನೀವು ದೂರು ನೀಡಿದರೆ ನಾನು ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ ಎಂದು ಹೇಳುವ ಮೂಲಕ ಅತೃಪ್ತರಲ್ಲಿ ಸ್ಪೀಕರ್ ರಮೇಶ್ ಕುಮಾರ್ ಆತಂಕ ಮೂಡಿಸಿದ್ದಾರೆ.

MAshok Kumar | news18
Updated:July 22, 2019, 1:10 PM IST
ವಿಪ್ ಉಲ್ಲಂಘಿಸಿದವರ ವಿರುದ್ಧ ಕ್ರಮ ಖಾಯಂ; ತಮ್ಮ ನಿಲುವು ಸ್ಪಷ್ಟಪಡಿಸಿದ ಸ್ಪೀಕರ್ ರಮೇಶ್ ಕುಮಾರ್!
ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್
  • News18
  • Last Updated: July 22, 2019, 1:10 PM IST
  • Share this:
ಬೆಂಗಳೂರು (ಜುಲೈ.22); ವಿಪ್ ಜಾರಿ ಮಾಡುವುದು ಶಾಸಕಾಂಗ ಪಕ್ಷದ ನಾಯಕನ ಜವಾಬ್ದಾರಿ. ಸದನಕ್ಕೆ ಬರೋದು ಬಿಡೋದು ಶಾಸಕರಿಗೆ ಬಿಟ್ಟಿದ್ದು. ಆದರೆ, ನನಗೆ ವಿಪ್ ಉಲ್ಲಂಘನೆ ಕುರಿತು ದೂರು ಸಲ್ಲಿಸಿದರೆ ನಾನು ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರಲ್ಲಿ ನಡುಕ ಹುಟ್ಟಿಸಿದ್ದಾರೆ.

ಮಂಗಳವಾರದ ಅಧಿವೇಶನದ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅತೃಪ್ತ ಶಾಸಕರ ವಿರುದ್ಧ ಶಾಸಕಾಂಗ ಪಕ್ಷದ ನಾಯಕ ಹೊರಡಿಸಿರುವ ವಿಪ್ ಹಾಗೂ ವಿಪ್ ಕುರಿತ ಸುಪ್ರೀಂ ತೀರ್ಪನ್ನು ಉಲ್ಲೇಖಿಸಿ ಮಾತು ಆರಂಭಿಸಿದ್ದರು.

ಈ ವೇಳೆ ಮಾತನಾಡಿದ್ದ ಶಿವಲಿಂಗೇಗೌಡ, “ವಿಪ್ ಕುರಿತು ಸುಪ್ರೀಂ ಕೋರ್ಟ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ತೀರ್ಪು ನೀಡಿದೆ. ನಮಗೆ ಸ್ಪೀಕರ್ ಆಗಿ ನೀವು ಈ ಕುರಿತು ಸ್ಪಷ್ಟತೆ ನೀಡಬೇಕು. ವಿಪ್ ಜಾರಿಗೊಳಿಸುವ ಅಧಿಕಾರ ನಮಗೆ ಇದೆಯೇ? ವಿಪ್ ಉಲ್ಲಂಘಿಸಿದರೆ ಶಾಸಕಾಂಗ ಪಕ್ಷದ ನಾಯಕ ಅವರ ವಿರುದ್ಧ ಕ್ರಮ ಜರುಗಿಸಬಹುದೆ? ಈ ಕುರಿತು ನೀವು ಒಂದು ಸಂದೇಶ ರವಾನಿಸಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಇಂದೂ ಸಹ ವಿಶ್ವಾಸಮತ ಅನುಮಾನ; ಸುಪ್ರೀಂ ತೀರ್ಪಿನ ಹಿನ್ನೆಲೆ ಮನಸ್ಸು ಬದಲಿಸಿದರಾ ಸಿಎಂ ಕುಮಾರಸ್ವಾಮಿ?

ಈ ವೇಳೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, “ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅಡ್ಡಗೋಡೆ ಮೇಲೆ ದೀಪವಿಡದೆ ಸ್ಪಷ್ಟವಾಗಿ ಹೇಳಿದೆ. ಯಾವುದೇ ಕಾರಣಕ್ಕೂ ಸ್ಪೀಕರ್ ಅಧಿಕಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲ್ಲ. ಅವರ ನಿರ್ಧಾರಕ್ಕೆ ಅವರು ಸರ್ವ ಸ್ವತಂತ್ರ್ಯರಾಗಿದ್ದಾರೆ ಎಂದು ಹೇಳಿದೆ. ಹೀಗಾಗಿ ನಾನು ನೀವು ನಿರೀಕ್ಷೆ ಮಾಡುವ ಆದೇಶ ಕೊಡಲು ಸಾಧ್ಯವಿಲ್ಲ. ಆದರೆ, ವಿಪ್ ಉಲ್ಲಂಘಿಸಿದವರ ವಿರುದ್ಧ ನೀವು ದೂರು ನೀಡಿದರೆ ನಾನು ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ” ಎಂದು ಹೇಳುವ ಮೂಲಕ ಅತೃಪ್ತರಲ್ಲಿ ಆತಂಕ ಮೂಡಿಸಿದ್ದಾರೆ.

ಅತೃಪ್ತರು ಸದನಕ್ಕೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆ ಅತೃಪ್ತ ಶಾಸಕರು ಈವರೆಗೆ ಸದನಕ್ಕೆ ಹಾಜರಾಗಿಲ್ಲ. ಅಲ್ಲದೆ, ಕೋರ್ಟ್ ತೀರ್ಪಿನಿಂದ ತಾವು ವಿಪ್ ಉಲ್ಲಂಘನೆಯಿಂದ ಬಜಾವ್ ಆಗಿದ್ದೇವೆ ಎಂದೇ ಎಲ್ಲಾ ಅತೃಪ್ತರೂ ಭಾವಿಸಿದ್ದರು. ಆದರೆ, ಅದೇ ತೀರ್ಪಿನ ಆಧಾರದಲ್ಲಿ ಸುಪ್ರೀಂ ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂಬ ವಿಚಾರವನ್ನು ಮುಂದಿಟ್ಟು ವಿಪ್ ಉಲ್ಲಂಘಿಸಿದವರು ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸ್ಪೀಕರ್ ನೀಡಿದ್ದಾರೆ.

ಹೀಗಾಗಿ ಬಹುಮತ ಇಲ್ಲದೆ ಸರ್ಕಾರ ಬಿದ್ದರೂ ಅತೃಪ್ತರು ವಿಪ್ ಕುಣಿಕೆಯಿಂದ ಬಚಾವಾಗಲು ಸಾಧ್ಯವೇ ಇಲ್ಲ ಎಂಬ ವಿಚಾರ ಈ ಮೂಲಕ ಸ್ಪಷ್ಟವಾಗಿದೆ.ಇದನ್ನೂ ಓದಿ : ಒಗ್ಗಟ್ಟು ಪ್ರದರ್ಶಿಸಿದರೂ ಅತೃಪ್ತ ಶಾಸಕರಿಗೆ ಕಾಡ್ತಿದೆ ಚಿಂತೆ; ಸರ್ಕಾರ ಬಿದ್ದರೆ ರೆಬೆಲ್​ಗಳ ರಾಜಕೀಯ ಭವಿಷ್ಯವೇ ಅಸ್ತಂಗತ?

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading