ರಾಜೀನಾಮೆ ಯಾರಿಗೆ, ಹೇಗೆ ಕೊಡಬೇಕು ಎಂಬ ಅರಿವಿಲ್ಲ ಎಂದರೆ ಹೇಗೆ?; ಆನಂದ್​ ಸಿಂಗ್​ ವಿರುದ್ಧ ಗರಂ ಆದ ಸ್ಪೀಕರ್​

ಶಾಸಕರಾದವರಿಗೆ ಯಾರಿಗೆ, ಹೇಗೆ ರಾಜೀನಾಮೆ ಪತ್ರ ನೀಡಬೇಕು ಎಂಬ ಅರಿವಿರಬೇಕು. ಈ ಬಗ್ಗೆ ಅವರಿಗೆ ತಿಳುವಳಿಕೆಯೇ ಇಲ್ಲ ಎಂದರೆ ಅದು ನಮ್ಮ ಹಣೆ ಬರಹ- ಸ್ಪೀಕರ್​ ರಮೇಶ್​ ಕುಮಾರ್​​

Seema.R | news18
Updated:July 3, 2019, 1:58 PM IST
ರಾಜೀನಾಮೆ ಯಾರಿಗೆ, ಹೇಗೆ ಕೊಡಬೇಕು ಎಂಬ ಅರಿವಿಲ್ಲ ಎಂದರೆ ಹೇಗೆ?; ಆನಂದ್​ ಸಿಂಗ್​ ವಿರುದ್ಧ ಗರಂ ಆದ ಸ್ಪೀಕರ್​
ಸ್ಪೀಕರ್​ ರಮೇಶ್​ ಕುಮಾರ್​
  • News18
  • Last Updated: July 3, 2019, 1:58 PM IST
  • Share this:
ಬೆಂಗಳೂರು (ಜೂ.3): ಮಂಗಳವಾರ ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ವಿಜಯನಗರ ಶಾಸಕ ಆನಂದ್​ ಸಿಂಗ್ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈ ಕುರಿತು ಸಿಟ್ಟಾಗಿರುವ ರಮೇಶ್ ಕುಮಾರ್, "ಶಾಸಕರಾದವರಿಗೆ ಎಲ್ಲಿ ಯಾರಿಗೆ ರಾಜೀನಾಮೆ ನೀಡಬೇಕು ಎಂಬ ಅರಿವಿರಬೇಕು" ಎಂದು ಹೇಳುವ ಮೂಲಕ ಶಾಸಕ ಆನಂದ್ ಸಿಂಗ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಸ್ಪೀಕರ್​ ಕಚೇರಿಗೆ ರಾಜೀನಾಮೆ ಪತ್ರ ನೀಡಿದ್ದ ಶಾಸಕ ಆನಂದ್ ಸಿಂಗ್ ನಂತರ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೂ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಆನಂದ್ ಸಿಂಗ್ ಅವರ ಈ ನಡೆ ಸ್ಪೀಕರ್ ರಮೇಶ್ ಕುಮಾರ್ ಅವರ ಅಸಹನೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಶಾಸಕರ ರಾಜೀನಾಮೆ ಕುರಿತು ಇಂದು ಮಾಧ್ಯಮಗಳ ಎದುರು ತಮ್ಮ ಅಭಿಪ್ರಾಯವನ್ನು ತಿಳಿಸಿರುವ ಸ್ಪೀಕರ್ ರಮೇಶ್ ಕುಮಾರ್, "ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದವರು ಯಾರು? ಅಧಿಕೃತವಾಗಿ ಒಬ್ಬ ಶಾಸಕ ಮಾತ್ರ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಪರಿಶೀಲಿಸುತ್ತೇನೆ. ಅದನ್ನು ಅಂಗೀಕರಿಸುವ ಅಥವಾ ಅನೂರ್ಜಿತಗೊಳಿಸುವ ಪರಮಾಧಿಕಾರ ನನಗೆ ಇಲ್ಲ , ಆದರೆ ಜವಾಬ್ದಾರಿ ಇದೆ" ಎಂದು ಅವರು ತಿಳಿಸಿದ್ದಾರೆ.

"ಶಾಸಕರಾದವರಿಗೆ ಯಾರಿಗೆ, ಹೇಗೆ ರಾಜೀನಾಮೆ ಪತ್ರ ನೀಡಬೇಕು ಎಂಬ ಅರಿವಿರಬೇಕು. ಆದರೆ, ಈ ಬಗ್ಗೆ ನಮ್ಮ ಶಾಸಕರಿಗೆ ತಿಳುವಳಿಕೆಯೇ ಇಲ್ಲ ಎಂದರೆ ಅದು ನಮ್ಮ ಹಣೆ ಬರಹ. ಶಾಸಕರ ಇಂತಹ ವರ್ತನೆಯಿಂದ ಬೇಸರ ಆಗಿರುವುದು ನಿಜ. ಆದರೆ, ನಾವು ಏನು ತಾನೆ ಮಾಡಲು ಸಾಧ್ಯ? ಮಾಧ್ಯಮದ ಮುಂದೆ ಹೇಳಬಹುದಷ್ಟೆ" ಎಂದು ಪರೋಕ್ಷವಾಗಿ ಆನಂದ್​ ಸಿಂಗ್​ ವಿರುದ್ಧ ಹರಿಹಾಯ್ದಿದ್ದಾರೆ.

ಆನಂದ್​ ಸಿಂಗ್ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಿದ್ದಾರೆ ಎಂದರೆ ಬೇರೆ ಉದ್ದೇಶ ಇರಬೇಕು. ಅವರಿಗೆ ಸಮಯವಿದ್ದರೆ ರಾಷ್ಟ್ರಪತಿಗಳನ್ನು ಭೇಟಿಮಾಡಿ ರಾಜೀನಾಮೆ ನೀಡಲಿ ಎಂದು ಇದೇ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಮಾತಿನಲ್ಲೇ ಕುಟುಕಿದ್ದಾರೆ

ಇದನ್ನು ಓದಿ: ಕೊನೆಯ ಅಂಕದಲ್ಲಿ ರಾಜೀನಾಮೆ ನಾಟಕ; ಇಂದು ಸ್ಪೀಕರ್​ ಖುದ್ದು ಭೇಟಿಯಾಗಿ ಶಾಸಕ ಸ್ಥಾನ ತ್ಯಜಿಸಲಿರುವ ರಮೇಶ್ ಜಾರಕಿಹೊಳಿ?

ಇನ್ನೂ ಶಾಸಕರ ರಾಜೀನಾಮೆ ಕಾರಣದ ಕುರಿತು ಮಾತನಾಡಿರುವ ಅವರು, "ಶಾಸಕ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದು ಜಿಂದಾಲ್ ವಿಚಾರಕ್ಕೆ ಅಲ್ಲ. ಜಿಂದಾಲ್ ಸಮಸ್ಯೆ ರಾಜೀನಾಮೆ ಕೊಡುವಷ್ಟು ದೊಡ್ಡ ಸಮಸ್ಯೆ ಕೂಡ ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.ಶಾಸಕರ ರಾಜೀನಾಮೆಯಿಂದ ಯಾವುದೇ ತೊಂದರೆ ಇಲ್ಲ. ಸರ್ಕಾರ ಭದ್ರವಾಗಿದೆ.  ಈ ಬಗ್ಗೆ ಸಿದ್ದರಾಮಯ್ಯ ಅಂತ ಮುತ್ಸದ್ದಿ ಇದ್ದಾರೆ, ಡಿಸಿಎಂ ಪರಂ, ಡಿಕೆಶಿ  ಸಮಸ್ಯೆ ಪರಿಹಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading