ಆಪರೇಷನ್ ಕೆ.ಎಚ್.ಮುನಿಯಪ್ಪ ಫೇಲ್​; ರಮೇಶ್​ಕುಮಾರ್ ನೇತೃತ್ವದ ನಿಯೋಗಕ್ಕೆ ಮಣೆ ಹಾಕದ ಕಾಂಗ್ರೆಸ್​ ಹೈಕಮಾಂಡ್

ಕೆ.ಎಚ್. ಮುನಿಯಪ್ಪ ವಿರೋಧಿಗಳ ಮನವಿಗೆ ಸೊಪ್ಪು ಹಾಕದ ಕಾಂಗ್ರೆಸ್​ ವರಿಷ್ಠರು, 7 ಬಾರಿ ಗೆದ್ದಿರುವ ಮುನಿಯಪ್ಪ ಅವರನ್ನು ಬೆಂಬಲಿಸಿ, ಪಕ್ಷ ಬಲಪಡಿಸಿ ಎಂದು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಂದು ಸಂಜೆ ವಿರೋಧಿಗಳ ಸಭೆ ನಡೆಸಿ ರಮೇಶ್ ಕುಮಾರ್ ಟೀಂ ಕೋಲಾರಕ್ಕೆ ವಾಪಸ್ಸಾಗಲಿದೆ.

HR Ramesh | news18
Updated:March 29, 2019, 5:29 PM IST
ಆಪರೇಷನ್ ಕೆ.ಎಚ್.ಮುನಿಯಪ್ಪ ಫೇಲ್​; ರಮೇಶ್​ಕುಮಾರ್ ನೇತೃತ್ವದ ನಿಯೋಗಕ್ಕೆ ಮಣೆ ಹಾಕದ ಕಾಂಗ್ರೆಸ್​ ಹೈಕಮಾಂಡ್
ಕೆ.ಎಚ್.ಮುನಿಯಪ್ಪ ಮತ್ತು ಕೆ.ಆರ್.ರಮೇಶ್​ಕುಮಾರ್
HR Ramesh | news18
Updated: March 29, 2019, 5:29 PM IST
ನವದೆಹಲಿ: ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ನೆನ್ನೆ ಸ್ಪೀಕರ್​ ರಮೇಶ್​ಕುಮಾರ್​ ನೇತೃತ್ವದ ನಿಯೋಗ ನೀಡಿದ ದೂರಿಗೆ ಕಾಂಗ್ರೆಸ್​ ಕೈಕಮಾಂಡ್​ ಮಣೆ ಹಾಕಲಿಲ್ಲ. ಹೀಗಾಗಿ ಕೋಲಾರದಿಂದ ದೆಹಲಿಗೆ ತೆರಳಿದ್ದ ರಮೇಶ್​ಕುಮಾರ್ ನಿಯೋಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಇಂದು ಕೋಲಾರಕ್ಕೆ ವಾಪಸ್ಸಾಗಲಿದೆ.

ಕೆ.ಎಚ್. ಮುನಿಯಪ್ಪ ವಿರೋಧಿಗಳ ಮನವಿಗೆ ಸೊಪ್ಪು ಹಾಕದ ಕಾಂಗ್ರೆಸ್​ ನ ಕೆ.ಸಿ.ವೇಣುಗೋಪಾಲ್, 7 ಬಾರಿ ಗೆದ್ದಿರುವ ಮುನಿಯಪ್ಪ ಅವರನ್ನು ಬೆಂಬಲಿಸಿ, ಪಕ್ಷ ಬಲಪಡಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂದು ಸಂಜೆ ವಿರೋಧಿಗಳ ಸಭೆ ನಡೆಸಿ ರಮೇಶ್ ಕುಮಾರ್ ಟೀಂ ಕೋಲಾರಕ್ಕೆ ವಾಪಸ್ಸಾಗಲಿದೆ.

ಕೆಎಚ್ ಮುನಿಯಪ್ಪ ಪರವಾಗಿ ಶಾಸಕರಾದ ಜೆ.ಕೆ ಕೃಷ್ಣಾರೆಡ್ಡಿ, ನಂಜೇಗೌಡ, ರೂಪಕಲಾ ಹಾಗೂ  ಜಿಲ್ಲಾ ಪಂಚಾಯ್ತಿ ಅಧ್ಯಕ್ಷ್ಯೆ ಗೀತಮ್ಮ ಬ್ಯಾಟಿಂಗ್ ನಡೆಸಿದ್ದರು.

ಇದನ್ನು ಓದಿ: ಬಿಜೆಪಿ ಶಾಸಕ ಪ್ರೀತಂ ಗೌಡ ಮನೆಯಲ್ಲಿ ಉಪಾಹಾರ ಸೇವಿಸಿದ ಎ.ಮಂಜು; ಜೆಡಿಎಸ್ ವಿರುದ್ಧ ಕಮಲದಿಂದ ಸ್ಪರ್ಧೆಗೆ ಸಿದ್ದು ಆಪ್ತ ರೆಡಿ?

ಕೆ.ಎಚ್. ಮುನಿಯಪ್ಪ ವಿರುದ್ದ ಬಂಡೆದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಕೋಲಾರದಿಂದ ಟಿಕೆಟ್​ ನೀಡದಂತೆ ಹೈಕಮಾಂಡಿಗೆ ನೆನ್ನೆ ದೂರು ನೀಡಿದ್ದರು. ನೆನ್ನೆ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾದ ಸ್ಪೀಕರ್ ‌ರಮೇಶ್ ಕುಮಾರ್ ನೇತೃತ್ವದ ಕೋಲಾರ ನಿಯೋಗ ಎಲ್ಲರ ವಿರೋಧ ಕಟ್ಟಿಕೊಂಡಿರುವ ಕೆ.ಎಚ್. ಮುನಿಯಪ್ಪಗೆ ಗೆಲುವು ಕಷ್ಟ. ಹೀಗಾಗಿ ಅವರಿಗೆ ಟಿಕೆಟ್ ನೀಡಬಾರದು. ಅವರ ಬದಲಿಗೆ ಬೇರೆಯವರಿಗೆ ನೀಡಿ ಎಂದು ಹೈಕಮಾಂಡಿಗೆ‌ ದೂರು ನೀಡಿತ್ತು.

ಸ್ಪೀಕರ್ ರಮೇಶ್ ಕುಮಾರ್ ಅವರಿಗೆ‌, ಶಾಸಕರಾದ ಶ್ರೀನಿವಾಸಗೌಡ, ವಿ ಮುನಿಯಪ್ಪ, ಎಸ್ ಎನ್ ನಾರಾಯಣಸ್ವಾಮಿ ಶ್ರೀನಿವಾಸ್, ನಸೀರ್ ಅಹಮದ್ ಸೇರಿದಂತೆ ಹಲವರು ಸಾಥ್ ನೀಡಿದ್ದರು.
Loading...

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626