ಸದನವನ್ನು ಶುಕ್ರವಾರಕ್ಕೆ ಮುಂದೂಡಿದ ಸ್ಪೀಕರ್; ಬಹುಮತ ಸಾಬೀತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿಗೆ ಕರೆಕೊಟ್ಟ ಬಿಎಸ್​ವೈ!

ರಾತ್ರಿ 12 ಗಂಟೆಯಾದರೂ ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಒತ್ತಾಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಲಾಪ ಮುಂದೂಡಿದ ಸ್ಪೀಕರ್ ಅವರ ತೀರ್ಮಾನಕ್ಕೆ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಸದನದ ಕಾರ್ಯಕಲಾಪ ಮುಗಿಯುವವರೆಗೆ ಸರ್ಕಾರದ ವಿರುದ್ಧ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

MAshok Kumar | news18
Updated:July 18, 2019, 6:54 PM IST
ಸದನವನ್ನು ಶುಕ್ರವಾರಕ್ಕೆ ಮುಂದೂಡಿದ ಸ್ಪೀಕರ್; ಬಹುಮತ ಸಾಬೀತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿಗೆ ಕರೆಕೊಟ್ಟ ಬಿಎಸ್​ವೈ!
ಬಿ.ಎಸ್​. ಯಡಿಯೂರಪ್ಪ
  • News18
  • Last Updated: July 18, 2019, 6:54 PM IST
  • Share this:
ಬೆಂಗಳೂರು (ಜುಲೈ.18); ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವ ಆಡಳಿತ ಪಕ್ಷ ಇಂದೇ ಬಹುಮತ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದಲ್ಲೆ ಆಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ.

ಗುರುವಾರ ವಿಶ್ವಾಸ ಮತಯಾಚನೆ ಮೇಲೆ ನಡೆದ ಚರ್ಚೆ ವೇಳೆ ಬಿಜೆಪಿಯವರ ಒತ್ತಾಯದ ಮೇರೆಗೆ ಸದನದ ಮಧ್ಯ ಪ್ರವೇಶಿಸಿದ್ದ ರಾಜ್ಯಪಾಲರು, ಆಡಳಿತ ಪಕ್ಷವನ್ನು ಇಂದೇ ಬಹುಮತ ಸಾಬೀತುಪಡಿಸುವಂತೆ ಸ್ಪೀಕರ್ ಅವರಿಗೆ ಸೂಚನೆ ನೀಡಿದ್ದರು. ಆದರೆ, 'ಪಕ್ಷಾಂತರ ಕಾಯ್ದೆ, ವಿಪ್'  ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆಯಾಗಿ ತೀರ್ಮಾನ ಕೈಗೊಳ್ಳದೆ ವಿಶ್ವಾಸಮತ ಯಾಚಿಸುವುದಿಲ್ಲ. ಅಲ್ಲದೆ, ಸದನದ ಕಲಾಪದಲ್ಲಿ ಮಧ್ಯಪ್ರವೇಶಿಸುವ, ಸ್ಪೀಕರ್​ಗೆ ಆದೇಶಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ” ಎಂದು ಮೈತ್ರಿ ಪಕ್ಷದ ನಾಯಕರು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಮೈತ್ರಿ ಸರ್ಕಾರ ಇಂದೇ ಬಹುಮತ ಸಾಬೀತುಪಡಿಸಲಿ; ಸ್ಪೀಕರ್​ಗೆ ಆದೇಶಿಸಿದ ರಾಜ್ಯಪಾಲರು; ಕಿಡಿಕಾರಿದ ಕೈ-ತೆನೆ ನಾಯಕರು!

ಆಡಳಿತ ಪಕ್ಷದ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಪರಿಣಾಮ ಸ್ಪೀಕರ್ ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು.

ಆದರೆ, ರಾತ್ರಿ 12 ಗಂಟೆಯಾದರೂ ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಒತ್ತಾಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಲಾಪ ಮುಂದೂಡಿದ ಸ್ಪೀಕರ್ ಅವರ ತೀರ್ಮಾನಕ್ಕೆ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, “ಸದನದ ಕಾರ್ಯಕಲಾಪ ಮುಗಿಯುವವರೆಗೆ ಸರ್ಕಾರದ ವಿರುದ್ಧ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕು ಹಾಗೂ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ತಲೆದಂಡಕ್ಕಾಗಿ ಒತ್ತಾಯಿಸಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದರು.

ಇದನ್ನೂ ಓದಿ : ಆಗ ಇಷ್ಟವಾದ ಸುಪ್ರೀಂ ತೀರ್ಪು ಈಗ್ಯಾಕೆ ಅಪಥ್ಯ? ವಿಧಾನಸೌಧದಲ್ಲಿ ಕಡತಗಳ ವಿಲೇವಾರಿಗೆ ತೋರಿದ ತರಾತುರಿ ಈಗ ಯಾಕಿಲ್ಲ?: ಸದನದಲ್ಲಿ ಬಿಜೆಪಿ ಆರ್ಭಟ
First published: July 18, 2019, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading