ಸಾಮಾನ್ಯವಾಗಿ ಒಂದು ಪ್ರದೇಶವನ್ನು ಹಾಗೇ ನೋಡುವುದಕ್ಕಿಂತ ಎತ್ತರದ ಪ್ರದೇಶದಿಂದ ನೋಡಿದರೆ ತುಂಬಾ ವಿಭಿನ್ನವಾಗಿ ಕಾಣುತ್ತದೆ. ಅದರಲ್ಲೂ ಬೆಂಗಳೂರಿನಂತಹ (Bengaluru) ದೈತ್ಯ ನಗರವನ್ನು ವಿಮಾನದಲ್ಲಿ ಹೋಗುತ್ತಿರುವಾಗಲೋ, ಡ್ರೋನ್ (Drone) ವಿಡಿಯೋಗಳಿಂದ ನೋಡಿದಾಗ ಹೇಗೆ ಕಾಣಬಹುದು ಅಲ್ವಾ? ಹಗಲಿನಲ್ಲಿ ನೋಡಿದರೆ ಬರೀ ಗಗನಚುಂಬಿ ಕಟ್ಟಡಗಳು, ಕೊಟ್ಯಾಂತರ ಮನೆಗಳನ್ನು ಕಾಣಬಹುದು. ಅದೇ ರಾತ್ರಿ ಹೊತ್ತು ಫಳ ಫಳ ಹೊಳಿಯುವ ಲೈಟ್‌ಗಳಿಂದ ತುಂಬಿರುವ ಬೆಂಗಳೂರನ್ನು ನೋಡಬಹುದು.
ಬಾಹ್ಯಾಕಾಶ ನಿಲ್ದಾಣ ಸೆರೆಹಿಡಿದಿದೆ ಬೆಂಗಳೂರಿನ ಚಿತ್ರಣ:
ಪ್ರಸ್ತುತ ಬೆಂಗಳೂರಿನ ಈ ವಿಹಂಗಮ ನೋಟವನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಸೆರೆಹಿಡಿದಿದೆ. ಹೌದು, ಭೂಮಿಯ ಮೇಲ್ಮೈಯಿಂದ ಸುಮಾರು 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಇತ್ತೀಚೆಗೆ ಬೆಂಗಳೂರಿನ ವಿಡಿಯೋವನ್ನು ಎತ್ತರದಿಂದ ಸೆರೆಹಿಡಿದಿದ್ದು, ಟ್ವಿಟರ್ ಪೋಸ್ಟ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ. ಸದ್ಯ ಐಎಸ್‌ಎಸ್ ಸೆರೆಹಿಡಿದ ಬೆಂಗಳೂರು ನಗರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
This @Space_Station view starts over the city of Bengaluru (also called Bangalore) which is the capital of India's🇮🇳 southern Karnataka state - and then passes over Sri Lanka🇱🇰.
Feb 25, 2023 06:39 UTC
(you may notice this view is upside down from the usual orientation - that's… https://t.co/sdP7hWUUX8 pic.twitter.com/ffsowUaNMy
— ISS Above (@ISSAboveYou) February 25, 2023
ವೈರಲ್ ಆಯ್ತು ವಿಡಿಯೋ:
ಈ ಸುಂದರವಾದ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ "ಈ ನೋಟವು ಭಾರತದ ದಕ್ಷಿಣ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ನಗರದ್ದಾಗಿದೆ. ಬೆಂಗಳೂರಿನ ನಂತರ ಶ್ರೀಲಂಕಾದ ಮೇಲೆ ಹಾದುಹೋಗುತ್ತದೆ. ಈ ನೋಟವು ತಲೆಕೆಳಗಾಗಿದೆ ಎಂಬುದನ್ನು ನೀವು ಗಮನಿಸಬಹುದು. ಏಕೆಂದರೆ ಸೋಯುಜ್ MS-23 ಅನ್ನು ಡಾಕಿಂಗ್ ಮಾಡುವ ತಯಾರಿಯಲ್ಲಿ, ಐಎಸ್‌ಎಸ್ ಅನ್ನು 180 ಡಿಗ್ರಿಗಳಷ್ಟು ತಿರುಗಿಸಲಾಗಿತ್ತು" ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: Raichuru: ರಾಜ್ಯದಲ್ಲಿ ಮಾಟಮಂತ್ರ ರಾಜಕೀಯ; ಕೇರಳದಿಂದ ಮಂತ್ರವಾದಿಗಳನ್ನ ಕರೆಸಿದ್ರಾ?
ಬಾಹ್ಯಾಕಾಶ ನಿಲ್ದಾಣವು ಶ್ರೀಲಂಕಾದ ಮೇಲೆ ಹಾದುಹೋಗುವ ಮೊದಲು ಬೆಂಗಳೂರಿನ ಭೂದೃಶ್ಯವನ್ನು ಸೆರೆಹಿಡಿಯುವ ವೀಡಿಯೊವನ್ನು ಸೆರೆಹಿಡಿದು ಅದನ್ನು ಬಿಡುಗಡೆ ಮಾಡಿದೆ. ಮತ್ತೊಂದು ಪೋಸ್ಟ್‌ನಲ್ಲಿ, ಬಾಹ್ಯಾಕಾಶ ನಿಲ್ದಾಣವು ಹಾದುಹೋಗುವ ನಗರಗಳು ಮತ್ತು ಪಟ್ಟಣಗಳ ನಕ್ಷೆಯನ್ನು ಸಹ ISS ಬಿಡುಗಡೆ ಮಾಡಿದೆ. ಇದನ್ನು ಕೂಡ ನೀವು ಐಎಸ್‌ಎಸ್ ಟ್ವಿಟರ್ ಪುಟದಲ್ಲಿ ನೋಡಬಹುದು.
418 ಕಿಲೋಮೀಟರ್ ಎತ್ತರದಿಂದ ಸೆರೆಯಾದ ವಿಡಿಯೋ:
ಟ್ವಿಟರ್ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಿದ, ಬಾಹ್ಯಾಕಾಶ ನಿಲ್ದಾಣವು ದೃಶ್ಯದ ವಿವರಗಳನ್ನು ಸಹ ಹಂಚಿಕೊಂಡಿದೆ. "ಇದು ಸರಿಸುಮಾರು 260 ಮೈಲುಗಳು (418 ಕಿಲೋಮೀಟರ್) ಎತ್ತರದಿಂದ ಸೆರೆಯಾದ ವಿಡಿಯೋ ಮತ್ತು ಆ ಬಿಳಿ ಕಲೆಗಳು ಮೋಡಗಳಾಗಿವೆ" ಎಂದು ವಿವರಣೆ ಸಹ ನೀಡಿದೆ. ISS ಬೆಂಗಳೂರಿನ ಈ ವಿಡಿಯೋ 13,000 ವೀಕ್ಷಣೆಗಳನ್ನು ಮತ್ತು ಹಲವು ಕಾಮೆಂಟ್, ಲೈಕ್ಸ್‌ಗಳನ್ನು ಪಡೆದುಕೊಂಡಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ:
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ವು ಬಾಹ್ಯಾಕಾಶದಲ್ಲಿ ಮನುಷ್ಯರು ವಾಸಿಸಲು ಯೋಗ್ಯವಾದ ಕೃತಕ ಉಪಗ್ರಹ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು NASA (ಅಮೆರಿಕ), JAXA (ಜಪಾನ್), ROSCOSMOS (ರಷ್ಯಾ), ESA (ಯೂರೋಪ್), ಮತ್ತು CSA (ಕೆನಡ) ಬಾಹ್ಯಾಕಾಶ ಸಂಸ್ಥೆಗಳು ಸೇರಿ ನಿರ್ಮಿಸಿವೆ. ಇದನ್ನು 20 ನವೆಂಬರ್ 1998ರಂದು ಉಡಾವಣೆ ಮಾಡಲಾಯಿತು. ISS ಗಂಟೆಗೆ 27,600 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದು 356x240 ಅಡಿ ವಿಸ್ತೀರ್ಣ ಹೊಂದಿದೆ. ಇದರ ಭಾರ 450 ಟನ್ ಆಗಿದೆ. ISS ಮೂರು ದಶಕಗಳಿಂದ ಬಾಹ್ಯಾಕಾಶದಲ್ಲಿ ಸಂಶೋಧನೆ ಮತ್ತು ವೈಜ್ಞಾನಿಕ ಪ್ರಗತಿಗಳ ಕೇಂದ್ರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ