ಅಕಾಲಿಕ ಮಳೆ ಸುರಿದ ಪರಿಣಾಮ ಸೋಯಾಬೀನ್ ಬೆಳೆದ ರೈತ ಕಂಗಾಲು 

ಸೋಯಾಬೀನ್ ಕಾಳುಗಳು ಅಕಾಲಿಕ ಮಳೆಯ ಪರಿಣಾಮ ಗದ್ದೆಯಲ್ಲಿ ಮೊಳಕೆ ಬಂದು ಕೊಳೆತು ಹೋಗುವ ಸ್ಥಿತಿಗೆ ತಲುಪಿವೆ. ಚಿಕ್ಕೋಡಿ ವಿಭಾಗದಲ್ಲೆ 3132 ಸಾವಿರ ಹೆಕ್ಟೇರ್ ಗೂ ಅಧಿಕ ಪ್ರಮಾಣದ ಸೊಯಾ ಸಂಪೂರ್ಣ ಹಾಳಾಗಿದೆ.

news18-kannada
Updated:September 16, 2020, 2:30 PM IST
ಅಕಾಲಿಕ ಮಳೆ ಸುರಿದ ಪರಿಣಾಮ ಸೋಯಾಬೀನ್ ಬೆಳೆದ ರೈತ ಕಂಗಾಲು 
ಮಳೆಯಿಂದ ಕೊಳೆತು ಹೋಗಿರುವ ಸೋಯಾಬೀನ್ ಬೆಳೆ
  • Share this:
ಚಿಕ್ಕೋಡಿ(ಸೆ.16): ಚಿಕ್ಕೋಡಿ ಉಪವಿಭಾಗದಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಟಾವಿಗೆ ಬಂದ ಸೋಯಾಬೀನ್ ಕೈಗೆ ಸಿಗುತ್ತಿಲ್ಲ. ಬೆಳೆದ ಬೆಳೆ ಇನ್ನೇನು ರಾಶಿ ಮಾಡಬೇಕೆನ್ನುವಷ್ಟರಲ್ಲಿ ಅಕಾಲಿಕವಾಗಿ ಮಳೆ ಸುರಿದ ಪರಿಣಾಮ‌ ಜಮೀನಿನಲ್ಲಿ ನೀರು ನಿಂತು ಬೆಳೆಗಳೆಲ್ಲವೂ ಹಾಳಾಗಿದೆ. ಹೀಗಾಗಿ ಗಡಿ ಭಾಗದ ರೈತರು ಕಂಗಾಲಾಗಿದ್ದಾರೆ. ಹೌದು, ಕಳೆದ ಎರಡು ವರ್ಷಗಳಿಂದಲೂ ಚಿಕ್ಕೋಡಿ ವಿಭಾಗದ ಕೃಷ್ಣಾ ತೀರದ ರೈತರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಬಂದ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿ ಸಾಕಷ್ಟು ಹಾನಿಯನ್ನ ರೈತರು ಅನುಭವಿಸಿದ್ದರು. ಈ ವರ್ಷವಾದರೂ ಒಳ್ಳೆ ಬೆಳೆ ಬೆಳೆದು ತಮ್ಮ ಕಷ್ಟಗಳನ್ನ ಕಡಿಮೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದ ರೈತರಿಗೆ ಅಕಾಲಿಕ ಮಳೆ ಬರೆ ಎಳೆದಿದೆ.  ರೈತರನ್ನ ಮತ್ತೆ ಸಂಕಷ್ಟಕ್ಕೆ ದೂಡಿದೆ. ಮೊದ ಮೊದಲು ಬಿತ್ತನೆ ಸಮಯದಲ್ಲಿ ಕಳಪೆ ಬೀಜಗಳು ರೈತರನ್ನ ಕಾಡಿತ್ತು. ಹುಕ್ಕೇರಿ ಚಿಕ್ಕೋಡಿ ಕಾಗವಾಡ ತಾಲೂಕಿನಲ್ಲಿ ಶೇ 30 ರಷ್ಟು ರೈತರಿಗೆ ಕಳಪೆ ಬಿತ್ತನೆ ಬೀಜಗಳನ್ನ ಇಲಾಖೆ ನೀಡಿತ್ತು. ಬಿತ್ತಿದ ಸೋಯಾಬೀನ್‌ ಬೀಜಗಳು ಸಮರ್ಪಕವಾಗಿ ಮೊಳಕೆ ಬಾರದೆ ನಷ್ಟ ಅನುಭವಿಸಿದ ರೈತರಿಗೆ ಮೂರು ತಿಂಗಳಾದರೂ ಕೃಷಿ ಇಲಾಖೆಯಿಂದ ಪರಿಹಾರ ದೊರೆತಿಲ್ಲ.

ಈರುಳ್ಳಿ ಬೆಳೆದು ಕಣ್ಣೀರು ಹಾಕುತ್ತಿರುವ ಬೆಳೆಗಾರ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಪರಿಹಾರ ಕೊಡುತ್ತೇವೆ, ಬೇರೆ ಬೆಳೆ ಬೆಳೆಯಿರಿ ಎಂದು ಹೇಳಿದ್ದ ಕೃಷಿ ಇಲಾಖೆ ಇವತ್ತಿಗೂ ಸುಮ್ಮನೆ ಕುಳಿತಿದೆ. ಇನ್ನು ಬೇರೆ ವಿಧಿಯಿಲ್ಲದೆ ಸಾಲ ಶೂಲ ಮಾಡಿ ಬೇರೆ ಬೆಳೆಯನ್ನ ಬೆಳೆದಿದ್ದ ರೈತರು ಇನ್ನೇನು ಉತ್ತಮ ಇಳುವರಿ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಆದ್ರೆ ಅಕಾಲಿಕ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿದ್ದರ ಪರಿಣಾಮ ಬೆಳೆದ ಬೆಳೆ ಕೈಗೆ ಸಿಗದೆ ಹಾಳಾಗಿವೆ. ಇನ್ನೇನು ಕಟಾವು ಮಾಡಬೇಕಾದ ಸೋಯಾಬೀನ್ ಬೆಳೆಯೂ ಕೂಡಾ ಕಪ್ಪು ಬಣ್ಣಕ್ಕೆ ತಿರುಗಿವೆ. ಸೋಯಾಬೀನ್ ಕಾಳುಗಳು ಅಕಾಲಿಕ ಮಳೆಯ ಪರಿಣಾಮ ಗದ್ದೆಯಲ್ಲಿ ಮೊಳಕೆ ಬಂದು ಕೊಳೆತು ಹೋಗುವ ಸ್ಥಿತಿಗೆ ತಲುಪಿವೆ. ಚಿಕ್ಕೋಡಿ ವಿಭಾಗದಲ್ಲೆ 3132 ಸಾವಿರ ಹೆಕ್ಟೇರ್ ಗೂ ಅಧಿಕ ಪ್ರಮಾಣದ ಸೊಯಾ ಸಂಪೂರ್ಣ ಹಾಳಾಗಿದೆ.

ಇನ್ನು ಬಾರದ ಪರಿಹಾರ

ಇನ್ನು ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ರೈತರು ಕಷ್ಟದಲ್ಲಿದ್ದರೂ ಸರ್ಕಾರ ಮಾತ್ರ ರೈತರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಯಾ ಬೆಳೆಯಲು ಒಂದು ಎಕರೆ ಪ್ರದೇಶಕ್ಕೆ ಸುಮಾರು 30 ರಿಂದ 40 ಸಾವಿರ ಹಣ ಖರ್ಚಾಗುತ್ತದೆ. ಆದ್ರೆ ಸರ್ಕಾರ ಮಾತ್ರ ನಮಗೆ ಪರಿಹಾರ ಅಂತ ನೀಡುವುದು ಕೇವಲ 3 ರಿಂದ  4 ಸಾವಿರ ರೂ. ಪ್ರತಿ ಎಕರೆಗೆ ಇದು ಯಾವುದಕ್ಕೂ ಸಾಲದು. ಸರ್ಕಾರದ ಈ ನೀತಿಯಿಂದದಾಗಿ ರೈತ ತನ್ನ ಕಷ್ಟಗಳಿಂದ ಮೇಲೆ ಬರಲಾಗದೆ ಒದ್ದಾಡುವಂತಾಗಿದೆ.

ಇನ್ನು ಈಗಲೂ ಸಹ ಸರ್ವೆ ಕೆಲಸ ಸಂಪೂರ್ಣ ಮುಗಿದಿಲ್ಲ, ಸರ್ವೆ ಕಾರ್ಯವನ್ನು ಬೇಗ ಮುಗಿಸಿ ಸರ್ಕಾರ ಈ ಬಾರಿ ಪೂರ್ಣ ಪ್ರಮಾಣದ ಬೆಳೆ ಹಾನಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Published by: Latha CG
First published: September 16, 2020, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading