• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Jayanagar: 6 ಬಾರಿ ಮತ ಎಣಿಕೆ; ಕಣ್ಣೀರು ಹಾಕ್ತಾ ಹೊರಬಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ

Jayanagar: 6 ಬಾರಿ ಮತ ಎಣಿಕೆ; ಕಣ್ಣೀರು ಹಾಕ್ತಾ ಹೊರಬಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ

ಸೌಮ್ಯಾ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ

ಸೌಮ್ಯಾ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ

Sowmay Reddy: ಮತ ಎಣಿಕೆಯಲ್ಲಿ ಗೊಂದಲ ಹಿನ್ನೆಲೆ 6 ಬಾರಿ ಎಣಿಕೆ ನಡೆದಿತ್ತು. ಆರನೇ ಬಾರಿ ಎಣಿಕೆ ಸುತ್ತಿನಲ್ಲಿ ರಾಮಮೂರ್ತಿ ಗೆಲುವು ದಾಖಲಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ  ಜಯನಗರದಲ್ಲಿ (Jayanagara) ಕಾಂಗ್ರೆಸ್​ಗೆ (Congress) ಸೋಲಾಗಿದೆ. ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯರೆಡ್ಡಿ (Congress Candidate Sowmya Reddy) ವಿರುದ್ಧ ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ (BJP Candidate CK Ramamurthy) 16 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇನ್ನು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸೌಮ್ಯಾ ರೆಡ್ಡಿ ಕಣ್ಣೀರು ಹಾಕುತ್ತಾ ಹೊರ ಬಂದರು. ಮತ ಎಣಿಕೆಯಲ್ಲಿ ಗೊಂದಲ ಹಿನ್ನೆಲೆ 6 ಬಾರಿ ಎಣಿಕೆ ನಡೆದಿತ್ತು. ಆರನೇ ಬಾರಿ ಎಣಿಕೆ ಸುತ್ತಿನಲ್ಲಿ ರಾಮಮೂರ್ತಿ ಗೆಲುವು ದಾಖಲಿಸಿದ್ದಾರೆ.


ಮತ ಎಣಿಕೆಯಲ್ಲಿ ಗೊಂದಲ ಏರ್ಪಟ್ಟ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಜಯನಗರಕ್ಕೆ ಆಗಮಿಸಿದ್ದರು. ಮೋಸ ಮಾಡಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಮುಂದೆ ಆಕ್ರೋಶ ಹೊರಹಾಕಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.


ಕಣ್ಣೀರು ಹಾಕುತ್ತಲೇ ಹೊರ ಬಂದ ಸೌಮ್ಯಾ ರೆಡ್ಡಿ


ಇನ್ನು ಮತ ಎಣಿಕಾ ಕೇಂದ್ರದಿಂದ ಹೊರ ಹೋಗುವಾಗ ಮೋಸ ಆಗಿದೆ ಎಂದು ಕಣ್ಣೀರು ಹಾಕುತ್ತಲೇ ಸೌಮ್ಯಾ ರೆಡ್ಡಿ ತೆರಳಿದರು. ಮತ ಎಣಿಕಾ ಕೇಂದ್ರದಿಂದ ಹೊರ ಬರುತ್ತಿದ್ದಂತೆಸ ಸೌಮ್ಯಾ ರೆಡ್ಡಿ ಅವರನ್ನು ಸುತ್ತುವರಿದ ಬೆಂಬಲಿಗರು ಮೋಸ ಆಗಿದೆ ಎಂದು ಘೋಷಣೆ ಕೂಗಿದರು.


ಯಾರಿಗೆ ಎಷ್ಟು ಮತಗಳು?


ರಾಮಮೂರ್ತಿ: 57,797 ಮತ


ಸೌಮ್ಯರೆಡ್ಡಿ: 57,781 ಮತ


ಮತಗಳ ಅಂತರ: 16




ಇದನ್ನೂ ಓದಿ:  Karnataka Results:136+2 ಸೀಟಲ್ಲ, 136+1 ಸೀಟು ಕಣಯ್ಯಾ! ಹಿಂಗ್ಯಾಕೆ ಅಂದ್ರು ಸಿದ್ದರಾಮಯ್ಯ?


ನನಗೂ ಸಿಎಂ ಆಗುವ ಆಸೆ ಇದೆ!


ಸಿಎಂ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ ಅಂತ ಯಾದಗಿರಿಯಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ. ನಾನು ಐದು ಬಾರಿ ಗೆದ್ದಿದ್ದೆನೆ ನನಗು ಸಿಎಂ ಆಗುವ ಆಸೆ ಇದೆ, ಆದ್ರೆ ಪಕ್ಷ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಿರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.

top videos
    First published: