ಕೈಯಲ್ಲಿ ಸುತ್ತಿಗೆ ಹಿಡಿದು ಫೀಲ್ಡ್​ಗಿಳಿದ ನೂತನ ಶಾಸಕಿ ಸೌಮ್ಯಾ ರೆಡ್ಡಿ: ವೈರಲ್ ಆಯ್ತು ವಿಡಿಯೋ


Updated:June 20, 2018, 4:07 PM IST
ಕೈಯಲ್ಲಿ ಸುತ್ತಿಗೆ ಹಿಡಿದು ಫೀಲ್ಡ್​ಗಿಳಿದ ನೂತನ ಶಾಸಕಿ ಸೌಮ್ಯಾ ರೆಡ್ಡಿ: ವೈರಲ್ ಆಯ್ತು ವಿಡಿಯೋ

Updated: June 20, 2018, 4:07 PM IST
ನ್ಯೂಸ್ 18 ಕನ್ನಡ

ಬೆಂಗಳೂರು(ಜೂ.20): ಜಯನಗರದ ನೂತನ ಶಾಸಕಿಯಾದ ರಾಮಲಿಂಗಾರೆಡ್ಡಿ ಪುತ್ರಿ, ಸೌಮ್ಯಾ ರೆಡ್ಡಿ ಇಂದು ಬೆಳ್ಳಂ ಬೆಳಿಗ್ಗೆ ಕೈಯಲ್ಲಿ ಸುತ್ತಿಗೆ ಗಡಪಾರಿ ಹಿಡಿದು ಫೀಲ್ಡ್ ಗಿಳಿದಿದ್ದಾರೆ. ಆಪರೇಷನ್ ಕ್ಲೀನ್ ಅಂಡ್ ಗ್ರೀನ್​ಗಾಗಿ ಕ್ಷೇತ್ರದ ಜನರೊಂದಿಗೆ ಸೇರಿ ಕೆಲಸ ಮಾಡುತ್ತಿರುವ ಜಯನಗರ ಕ್ಷೇತ್ರದ ಶಾಸಕಿಯ ವಿಡಿಯೋ ಸದ್ಯ ವೈರಲ್ ಅಗುತ್ತಿದೆ.

ಹೌದು ಇಂದು ಬೆಳ್ಳಂ ಬೆಳಿಗ್ಗೆ ರಾಮಲಿಂಗಾ ರೆಡ್ಡಿ ಮಗಳು ಸೌಮ್ಯಾ ರೆಡ್ಡಿ ತನ್ನ ಕ್ಷೇತ್ರದ ಜನರೊಡಗೂಡಿ ಆಪರೇಷನ್ ಕ್ಲೀನ್ ಅಂಡ್ ಗ್ರೀನ್​ಗೆ ಕೈ ಹಾಕಿದ್ದಾರೆ. ಇದರ ಭಾಗವಾಗಿ ಜಯನಗರದ ಬೈರಸಂದ್ರದಲ್ಲಿ ಕಸವೆತ್ತಿ ಸ್ವಚ್ಛ ಮಾಡುವ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಕಂಡುಬಂದ ಹಳೇ ಕಾಪೌಂಡ್ ಒಡೆಯಲು ಸುತ್ತಿಗೆ ಹಿಡಿದು ಹರಸಾಹಸ ಪಟ್ಟಿದ್ದಾರೆ. ಆದರೆ ಸೌಮ್ಯಾರೆಡ್ಡಿ ಅದೆಷ್ಟೇ ಸುತ್ತಿಗೆ ಏಟು ನೀಡಿದರೂ ಕಾಂಪೌಂಟ್​ ಗೋಡೆ ಮಾತ್ರ ಸ್ವಲ್ಪವೂ ಬಿರುಕು ಬಿಟ್ಟಿಲ್ಲ. ಹೀಗಾಗಿ ಗೋಡೆಗೆ ಸುತ್ತಿಗೆ ಏಟು ನೀಡಿ ಸುಸ್ತಾದ ಶಾಸಕಿ ಕಸ ಕ್ಲೀನ್ ಮಾಡುವ ಕೆಲಸ ಮುಂದುವರೆಸಿದ್ದಾರೆ.


ಅದೇನಿದ್ದರೂ ಜಯನಗರ ಕ್ಷೇತ್ರದಿಂದ ಗೆದ್ದು ಬಂದ ಯುವನಾಯಕಿ, ಸೌಮ್ಯಾರೆಡ್ಡಿ ತನ್ನ ಕ್ಷೇತ್ರದ ಸ್ವಚ್ಛತೆಗೆ ಗಮನ ನೀಡಿ, ಖುದ್ದು ತಾನೇ ಈ ಕೆಲಸದಲ್ಲಿ ಜನರೊಂದಿಗೆ ತೊಡಗಿಸಿಕೊಂಡಿರುವುದು ಕ್ಷೇತ್ರದ ಜನರ ಮನ್ನಣೆಗೆ ಪಾತ್ರವಾಗಿದೆ.
First published:June 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ