ಬೆಂಗಳೂರು(ಜ.01): ಹಿಂದಿನಿಂದಲೂ ಕೇಂದ್ರ ಸರ್ಕಾರ ಆಯಾ ರಾಜ್ಯದ ಸ್ಥಳೀಯ ಸರ್ಕಾರಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಲೇ ಬಂದಿದೆ ಎಂಬ ಗಂಭೀರ ಆರೋಪ ಎದುರಿಸುತ್ತಿತ್ತು. ಇನ್ನು ಅಧಿಕಾರದಲ್ಲಿರುವ ಉತ್ತರ ಭಾರತದವರಂತೂ ತಮ್ಮ ಭಾಷೆಯನ್ನು ದಕ್ಷಿಣ ಭಾರತದ ಮೇಲೆ ಹೇರಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ ಎಂಬ ಮಾತುಗಳೂ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿತ್ತು. ಕೇಂದ್ರ ಹಿಂದಿ ಪರ ನೀತಿಯಿಂದ ಸ್ಥಳೀಯ ಭಾಷೆಗಳು ಬಡವಾಗುತ್ತಿವೆ ಎಂಬ ವಾದ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಹೀಗಿರುವಾಗ ಕೇಂದ್ರ ಬಜೆಟ್ 2019ರಲ್ಲೂ ಇದು ಪುನರಾವರ್ತಿತವಾಗಿದೆ.
ಬ್ಯಾಂಕ್, ಶಿಕ್ಷಣ, ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಂದಿಯದ್ದೇ ಕಾರುಬಾರು ಕಳೆದೈದು ವರ್ಷಗಳಿಂದ ಆರಂಭವಾಗಿದೆ. ಇದಲ್ಲದೇ ಸಂಸತ್ನಲ್ಲಿಯೂ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ, ಕೇಂದ್ರ ಬಜೆಟ್ ಮಂಡನೆ ವೇಳೆ ಹಿಂದಿ ಭಾಷೆ ಬಳಸಿ, ಅದರ ಮೇಲಿನ ತಮ್ಮ ವ್ಯಾಮೋಹವನ್ನು ಹಣಕಾಸು ರಾಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ತೋರಿದ್ದಾರೆ. ಸಂಸತ್ನಲ್ಲಿ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರದ ನಡೆ ವಿರುದ್ಧ ಈಗಾಗಲೇ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಸ್ಥಳೀಯ ರಾಜ್ಯ ಸರ್ಕಾರಗಳು ಹೋರಾಟ ಮಾಡುತ್ತಲೇ ಇವೆ. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳದಲ್ಲಿ ಎಷ್ಟೇ ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದರೂ ಕೇಂದ್ರ ಕ್ಯಾರೇ ಎನ್ನುತ್ತಿಲ್ಲ ಎಂಬ ಅಭಿಪ್ರಾಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ನಾವು ಎಷ್ಟೇ ಕೂಗಾಡಿದರೂ ಕೇಂದ್ರ ತನ್ನ ಪಾಡಿಗೆ ಸ್ಥಳೀಯರ ಮೇಲೆ ಹಿಂದಿ ಹೇರಿಕೆ ಬಾಣ ಬಿಡುತ್ತಲೇ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಸಾಮಾನ್ಯವಾಗಿ ಬಜೆಟ್ ಮಂಡನೆ ಇಂಗ್ಲೀಷ್ ಭಾಷೆಯಲ್ಲಿರುತ್ತದೆ. ಆದರೆ, ಹಣಕಾಸು ಸಚಿವರು ಮಾತ್ರ ಬಜೆಟ್ ಮಂಡನೆ ವೇಳೆ ಹೆಚ್ಚು ಹಿಂದಿ ಬಳಕೆ ಮಾಡಿದರು. ಆಗಾಗ ಮಧ್ಯೆ ಕಾಟಚಾರಕ್ಕೆ ಇಂಗ್ಲೀಷ್ ಬಳಕೆ ಮಾಡಿದಂತೆ ಭಾಸವಾಗಿದ್ದು ಸುಳ್ಳಲ್ಲ.
2001ರಿಂದ 2011ರ ವರೆಗೆ ಹಿಂದಿ ಭಾಷೆಯನ್ನು ಬಳಸುವ ಜನರ ಸಮೀಕ್ಷೆ ಬಿಡುಗಡೆಯಾಗಿತ್ತು. ಸಮೀಕ್ಷೆ ಪ್ರಕಾರ ದಕ್ಷಿಣ ಭಾರತದಲ್ಲಿ ಹಿಂದಿ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ, ಸ್ಥಳೀಯರ ನೆಲದಲ್ಲಿಯೇ ಅವರ ಭಾಷೆ ಕಡಿಮೆಯಾಗುತ್ತಿದೆ ಎಂದು ಹೇಳಿತ್ತು. ಇತ್ತೀಚೆಗಂತೂ ಹಿಂದಿ ದಕ್ಷಿಣ ಭಾರತದ ಸ್ಥಳೀಯ ಭಾಷೆಗಳಾದ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷಿಗರ ಮೇಲೆ ದಂಡಯಾತ್ರೆ ಮಾಡುತ್ತಿದೆ ಎಂಬ ಮಾತುಗಳೂ ಕೇಳಿ ಬಂದವು.
ದಿನೆದಿನೇ ದ್ರಾವಿಡ ಮತ್ತು ಆರ್ಯನ್ ಬಿಕ್ಕಟ್ಟು ಮತ್ತೆ ಚರ್ಚೆಗೆ ಬರುತ್ತಿದೆ. ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳ ರಾಜಕೀಯ ಮುಖಂಡರು ಬಹಿರಂಗವಾಗಿ ಪ್ರತಿಭಟಿಸಿದ್ದರು. ಜತೆಗೆ ಹಿಂದಿ ಹೇರಿಕೆಯಿಂದ ಸ್ಥಳೀಯ ಭಾಷೆಗಳ ಬಳಕೆ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹಿಂದಿ ಹೇರಿಕೆ ಮತ್ತು ಇಂಗ್ಲೀಷ್ ಪ್ರಭಾವವನ್ನು ಮೀರಿ ಸ್ಥಳೀಯ ಭಾಷೆಗಳನ್ನು ಬೆಳೆಸಬೇಕು ಎಂದು ಹೊರಟಿದ್ದಾರೆ. ಆದರೆ, ಕೇಂದ್ರ ಮಾತ್ರ ರಾಷ್ಟ್ರೀಯ ಭಾಷೆ ಎಂದು ಹೇಳುತ್ತಾ ಹಿಂದಿಯನ್ನು ಹೇರುತ್ತಲೇ ಇದೆ. ನಮ್ಮ ಭಾಷೆಯ ಅಸ್ತಿತ್ವಕ್ಕೆ ನಾವು ಪರದಾಡುವಂತಾಗಿದೆ ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರೊಬ್ಬರು.
ಭಾರತವೂ ಭಾಷೆ, ಧರ್ಮ, ಆಚಾರ, ವಿಚಾರ, ಆಹಾರ ಹೀಗೆ ಎಲ್ಲದರಲ್ಲೂ ವೈವಿಧ್ಯತೆಯೇ ತುಂಬಿದೆ. ಈ ಕಾರಣಕ್ಕಾಗಿಯೇ ವಿವಿಧತೆಯಲ್ಲಿ ಏಕತೆಯನ್ನು ಭಾರತ ಸಾಧಿಸಿದೆ. ಆದರೆ ಈ ಎಲ್ಲ ವೈವಿಧ್ಯತೆಯನ್ನು ಪ್ರತಿನಿಧಿಸುವ ವ್ಯವಸ್ಥೆ ಎಂಬಂತಿರುವ ಕೇಂದ್ರ ಸರ್ಕಾರ ಭಾರತದ ವಿವಿಧತೆಯ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆ ಅನ್ನುವ ಪ್ರಶ್ನೆ ಈಗ ಮೇಲೆದ್ದಿದೆ. ಇದನ್ನು ಪದೇ ಪದೆ ಎತ್ತಬೇಕಾದ ಅನಿವಾರ್ಯತೆ ಹಿಂದಿಯೇತರ ಭಾಷಿಕರಿಗೆ ಒದಗಿದೆ.
ಸ್ವಾತಂತ್ರ ಬಂದಾಗಿನಿಂದಲೂ ಎಲ್ಲ ಕೇಂದ್ರ ಸರ್ಕಾರಗಳು ಹಿಂದಿಯ ಬೆನ್ನಿಗೆ ನಿಲ್ಲುತ್ತ ಬಂದಿವೆ. ಇದಕ್ಕೆ ಮುಖ್ಯ ಕಾರಣ ಸಂವಿಧಾನದ ವಿಧಿ 343ರಿಂದ 351ರವರೆಗೆ ಬರೆಯಲಾಗಿರುವ ಕೇಂದ್ರ ಸರ್ಕಾರದ ಭಾಷಾ ನೀತಿ. ಇದರನ್ವಯ ಇಡೀ ದೇಶದಲ್ಲಿ ಎಲ್ಲೆಡೆ ಹಿಂದಿಯನ್ನು ಸ್ಥಾಪಿಸಿ, ಭಾರತವೆಂದರೆ ಹಿಂದಿ ಎಂಬಂತೆ ಮಾರ್ಪಡಿಸುವ ಹೊಣೆಯನ್ನೇ ಕೇಂದ್ರಕ್ಕೆ ನೀಡಲಾಗಿದೆ. ಅದಕ್ಕಾಗಿ ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ವರ್ಷವೂ ಕೇಂದ್ರ ಸರ್ಕಾರ ಹಿಂದಿ ಪ್ರಚಾರಕ್ಕೆಂದೇ ಮೀಸಲಿಡುತ್ತ ಬಂದಿದೆ.
ಕೇಂದ್ರ ಹೇಗೆ ಹಿಂದಿ ಹೇರಿಕೆ ಮಾಡುತ್ತದೆ?:
Why is so much of the #Budget2019 speech in HINDI? Half the country cannot understand hindi. What about the south and east of the country?
— Faye DSouza (@fayedsouza) February 1, 2019
There is no winning irrespective of the choice of language. It is sensible to choose Hindi. I am no fan of Hindi imposition but stop being a baby about choice of language for budget presentation
— Venkata Rao K (@vrkrishn) February 1, 2019
This is part of poor #hindiimposition agenda...#Stophindiimposition
— Karthi (@attur_karthi) February 1, 2019
Exactly
Why Hindi Imposition in a country which is enriched with so many beautiful languages other than Hindi#StopHindiImposition
Hindi is nothing but an official language like other languages
We all hv right to talk, write & use our mother languages & not hindi
— Kamalika Sree 💖 JusticeForSreesanth 🔥 (@KamalikaSree36) February 1, 2019
Remember they r responsible to whole nation. North Indian people knows english, right? Then why hindi??????. It is an imposition only.Even every state has it's own language.
— Akira Ravanan (@Rajiv_GKR) February 1, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ