• Home
  • »
  • News
  • »
  • state
  • »
  • Udupi: ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ‌; ಕಾಜಲ್ ಹಿಂದೂಸ್ತಾನಿ ಕರೆ

Udupi: ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ‌; ಕಾಜಲ್ ಹಿಂದೂಸ್ತಾನಿ ಕರೆ

ಬೃಹತ್ ಸಮಾವೇಶ

ಬೃಹತ್ ಸಮಾವೇಶ

ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ.‌ ಉತ್ತರ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ. ಆದರೆ ದಕ್ಷಿಣ ಭಾರತೀಯರಿಗೆ ಏನಾಗಿದೆ? ಬಾಲಿವುಡ್ ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ಹಿಂದೂ ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಾಜಲ್ ಹಿಂದೂಸ್ತಾನಿ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಉಡುಪಿಯಲ್ಲಿ ಹಿಜಾಬ್ , ಧರ್ಮದಂಗಲ್, ಸಾವರ್ಕರ್ ವಿವಾದ ತಣ್ಣಗಾದ ಬಳಿಕ ನಗರದಲ್ಲಿ ಕೇಸರಿ ಪಡೆ (Saffron Rally) ಗರ್ಜಿಸಿದೆ. ಪೂಜಿತ ಶಸ್ತ್ರ ಹಿಡಿದು ಕೇಸರಿ ಪತಾಕೆ ಕೇಸರಿ ಪೇಟ ಶಾಲು ಧರಿಸಿದ ಸಾವಿರಾರು ಹಿಂದೂ ಜಾಗರಣ ವೇದಿಕೆ (Hindu Vigilance Forum) ಕಾರ್ಯಕರ್ತರು ಶಿವಾಜಿ, ದುರ್ಗೆ ವೇಷದಾರಿಯರೊಂದಿಗೆ ದುರ್ಗಾ ದೌಡ್ ನಡೆಸಿ ಅಬ್ಬರಿಸಿದ್ರು. ನಗರದಲ್ಲಿ ಎಲ್ಲಿ ನೋಡಿದ್ರು ಕೇಸರಿ ಕೇಸರಿ ಕೇಸರಿ. ದೂರದಲ್ಲಿ ಕಣ್ಣಾಯಿಸಿದ್ರೆ ಶಸ್ತ್ರ, ಕೇಸರಿ ಬಾವುಟ, ಕೇಸರಿ ಶಾಲು ಧರಿಸಿ ಓಡೋಡಿ ಬರುತ್ತಿರುವ ಸಾವಿರಕ್ಕೂ ಅಧಿಕ ಉಡುಪಿ‌ (Udupi) ಜಿಲ್ಲೆ ಹಾಗೂ‌ ದೂರದ ಮಹಾರಾಷ್ಟ್ರ ರಾಜ್ಯದಿಂದ ಬಂದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು (Activist). ಕಾರ್ಯಕರ್ತರೊಂದಿಗೆ ಶಿವಾಜಿ, ದುರ್ಗೆ ವೇಷದಾರಿಗಳು ಜೊತೆಗೆ ಶಿವಾಜಿ ಟ್ಯಾಬ್ಲೋ ಗಮನ ಸೆಳೆಯಿತು.


ಈ‌ ಬೃಹತ್ ರ್ಯಾಲಿಯಲ್ಲಿ ಸಚಿವ ವಿ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ಶಾಸಕ ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅನೇಕ ಗಣ್ಯರು ಭಾಗಿಯಾದ್ರು.




ಜಿಲ್ಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಸಂಘಟನೆಗೆ  ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಈ ಬೃಹತ್ ಸಮಾವೇಶ ನಡೆಸಲಾಯ್ತು.‌ ಸಮಾವೇಶದಲ್ಲಿ ಗುಜರಾತ್ ನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ತಮ್ಮ ಪ್ರಖರ ಭಾಷಣದಲ್ಲಿ ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾ ಗಳನ್ನು ಬಹಿಷ್ಕರಿಸಿ‌ ಎಂದು ಕರೆ‌ ಕೊಟ್ರು.‌


ಬಾಲಿವುಡ್ ಸಿನಿಮಾ ಬಹಿಷ್ಕರಿಸಿ- ಕಾಜಲ್ ಹಿಂದೂಸ್ತಾನಿ


ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ.‌ ಉತ್ತರ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ. ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ? ಬಾಲಿವುಡ್ ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ಹಿಂದೂ ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ ಪ್ರೀತಿ , ಅಕ್ರಮ ಮದುವೆ ಮಾಡಿಕೊಳ್ಳುವವರೆಂದು ಹಿಂದೂ ಮಹಿಳೆಯರನ್ನು ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.


ಬಾಲಿವುಡ್ ನ ಕೊಳಕು ಸಿನಿಮಾ ಗಳನ್ನು ದಕ್ಷಿಣ ಭಾರತೀಯರು ನೋಡಲೇಬೇಡಿ. ದಕ್ಷಿಣ ಭಾರತೀಯರು ಕರಣ್ ಜೋಹರ್ ನನ್ನು ಬಹಿಷ್ಕಾರ ಮಾಡಿ.‌ ಇಸ್ಲಾಮಿಕ್ ಆಕ್ರಮಣ ಹೆಚ್ಚುತ್ತಿದ್ದರೆ ಹಿಂದೂ ಜಾಗೃತನಾದರೂ ಮಲಗಿದ ಸ್ಥಿತಿಯಲ್ಲೇ ಇದ್ದಾನೆ. ಲವ್ ಜಿಹಾದ್ ಮತ್ತು ನಮ್ಮ ಧಾರ್ಮಿಕ ಕೇಂದ್ರಗಳ ವಶ ಪಡಿಸಿಕೊಳ್ಳುವುದು ಮುಸಲ್ಮಾನರ ಕಾರ್ಯತಂತ್ರ. ಪಾಪ್ಯುಲರ್ ಫ್ರಂಟ್ ಅಲ್ಲ ಪಿಎಫ್ ಐ ಅಂದರೆ ಪಾಯಿಸನ್ ಫಾರ್ ಇಂಡಿಯಾ ಅಂತ‌ ಆಕ್ರೋಶ ಹೊರಹಾಕಿದ್ರು.


ರಾಷ್ಟ್ರದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ. ಹಿಂದುಗಳು ಮೂರು ಮಹತ್ವದ ನಿರ್ಧಾರ ಕೈಗೊಳ್ಳಬೇಕು. ಎಲ್ಲರೂ ಹಿಂದೂ ಸಂಸ್ಕಾರ ಪಾಲಿಸಬೇಕು, ಹಿಂದುಗಳಿಂದಲೇ ಖರೀದಿಸಬೇಕು, ಹಿಂದೂಗಳಿಗೆ ಮಾತ್ರ ನೌಕರಿ ನೀಡಬೇಕು. ನಿಮ್ಮದೇ ಹಣದಲ್ಲಿ ದೇಶದೊಳಗೆ  ಜಿಹಾದಿಗಳ ಸೃಷ್ಡಿಯಾಗಲು ಬಿಡಬೇಡಿ.‌ ಪಿಎಫ್ ಐ ಮೂಲಕ ದೇಶ ಒಡೆಯುವ ಕೆಲಸ ಮುಸಲ್ಮಾನರು ಮಾಡುತ್ತಾ ಬಂದಿದ್ದರು.


ಇದೀಗ ಮೋದಿಯವರು ಸರಿಯಾದ ಪಾಠ ಕಲಿಸಿದ್ದಾರೆ.‌ ಟಿಪ್ಪು ಮಾನಸಿಕತೆ ಈಗಲೂ ಪಿಎಫ್ ಐ ಮೂಲಕ ಜೀವಂತ ಇತ್ತು. ವಕ್ಫ್  ಬೋರ್ಡ್  ನಲ್ಲೂ ಟಿಪ್ಪೂ ಮಾನಸಿಕತೆಯ ಮತ್ತೊಂದು ಪ್ರತೀಕ. ಓವೈಸಿ ಸಹೋದರರ ಮೂಲಕ ಟಿಪ್ಪು ಮಾನಸಿಕತೆ ಜೀವಂತ ಇರಿಸಲಾಗಿದೆ. ಜಿಹಾದಿ ವೈರಸ್ ಎದುರಿಸಲು ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು. ದೇಶದಲ್ಲಿ ಇನ್ನು ಮುಂದೆ ಹಿಂದೂ ಕಾರ್ಯಕರ್ತರು ಕೊಲೆಯಾಗಬಾರದು.‌ ನಮ್ಮ ದೇವಾಲಯಗಳ ಭೂಮಿಯ ಅಕ್ರಮ ವಶ ಮಾಡಿಕೊಳ್ಳುವುದರಲ್ಲಿ ವಕ್ಫ್ ಬೋರ್ಡ್ ನಿರತವಾಗಿದೆ.


ಪ್ರತಿ ಮನೆಯಲ್ಲೂ ದುರ್ಗೆಯರು ತಯಾರಾಗಲಿ


ಪ್ರತೀ ಮನೆಯಲ್ಲೂ ದುರ್ಗೆಯರು ತಯಾರಾಗಲಿ. ನಮ್ಮ ಯುವತಿಯರು ಲವ್ ಜಿಹಾದಿಗೆ ಹೇಗೆ ಬಲಿಯಾಗುತ್ತಾರೆ. ಜೀನ್ಸ್ ಧರಿಸುವ ನಮ್ಮ ಯುವತಿಯರು ಬುರ್ಖಾ ಧರಿಸಲು ಹೇಗೆ ಮಾರುಹೋಗುತ್ತಾರೆ.‌ ಮನೆಯಲ್ಲಿ ಗೋವುಗಳಿಗೆ ಗೋಗ್ರಾಸ ಕೊಟ್ಟ ಹುಡುಗಿಯರು ಗೋಮಾಂಸ ಹೇಗೆ ತಿನ್ನುತ್ತಾರೆ.‌ ಮೂವರು ಸವತಿಯರ ಜೊತೆ ಸಂಸಾರ ನಡೆಸಲು ಯಾಕೆ ಮುಂದಾಗುತ್ತಾರೆ.‌ ನಮ್ಮ ಯುವತಿಯರಿಗೆ ಸಂಸ್ಕಾರ ನೀಡದಿರುವುದೇ ಲವ್ ಜಿಹಾದ್ ಗೆ ಕಾರಣ.‌‌


ಇದನ್ನೂ ಓದಿ:  Karnataka Assembly Elections: ಬೆಳ್ತಂಗಡಿಯಲ್ಲಿ ಪೂಂಜಾ ಸೋಲಿಸಲು ಈ ಅಸ್ತ್ರ ಬಳಸುತ್ತಾ ಕಾಂಗ್ರೆಸ್​?


ಗುಜರಾತ್ ನಲ್ಲಿ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಮುಸ್ಲಿಂ ಯುವಕರು ಬರುತ್ತಾರೆ.‌ ಮುಸ್ಲಿಂ ಹುಡುಗರಿಗೆ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಏನು ಕೆಲಸ?‌ ಬೇಕಿದ್ದರೆ ತಮ್ಮ ಮಡದಿಯರನ್ನು ಕರೆ ತಂದು ಗರ್ಭಾ ನೃತ್ಯ ಮಾಡಲಿ. ತಮ್ಮ ಮಹಿಳೆಯರನ್ನು ಮಸೀದಿ ಒಳಗೆ ಬಿಡದವರು ನವರಾತ್ರಿಯ ವೇಳೆ ಹಿಂದೂ ಹುಡುಗಿಯರ ಜೊತೆ ಗರ್ಭಾ ನೃತ್ಯ ಮಾಡುತ್ತಾರೆ.‌ ನಿಮ್ಮ ನಾಡಿನಲ್ಲಿ ಟಿಪ್ಪುವನ್ನು ಏನಂತ ಕರೀತೀರಿ ಗೊತ್ತಿಲ್ಲ. ಆದರೆ ಗುಜರಾತಿನಲ್ಲಿ ಹಂದಿಗಳಿಗೆ ಟಿಪ್ಪು , ಔರಂಗಜೇಬ್, ಬಾಬರ್ ಹೆಸರಿಡುತ್ತೇವೆ‌.


ಹಿಂದುಗಳ ಮನೆಯಲ್ಲಿ ಆಯುಧ ಪೂಜೆ ಆಗಬೇಕು


ಕರ್ನಾಟಕದಲ್ಲಿ ಲಿಂಗಾಯಿತ ವಿವಾದ ಎಬ್ಬಿಸಿ ಹಿಂದೂಗಳಲ್ಲಿ ಬಿಕ್ಕಟ್ಟು ಸೃಷ್ಟಿಸಿದರು‌.‌ ಗುಜರಾತಿನಲ್ಲೂ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದರು. ಹಿಂದುಗಳು ಜಾತಿಯ ವಿಚಾರ ಇಟ್ಟುಕೊಂಡು ಹಂಚಿ ಹೋಗಿದ್ದೇವೆ.‌ ಸಮಾವೇಶದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಮಾತನಾಡುತ್ತಾ, ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪುತ್ತದೆ ಅಂತ ನೇರ ಎಚ್ಚರಿಕೆ ನೀಡಿದ್ರು. ಮುಂದಿನ ಮೂರು ವರ್ಷದಲ್ಲಿ ಊರು ಹಳ್ಳಿ ಮನೆಗೆ ಸಂಘ ತಲುಪುತ್ತದೆ.‌ ಪ್ರತಿ ಹಿಂದುಗಳ ಮನೆಯಲ್ಲಿ ಆಯುಧ ಪೂಜೆ ಆಗಬೇಕು.‌


ಆಯುಧ ಪೂಜೆಗೆ ಹಳೆ ಸೈಕಲ್ ಗ್ರೈಂಡರ್  ಗೆ ಪೂಜೆ ಮಾಡಬೇಡಿ. ಹಳೇ ಮಿಕ್ಸಿ, ಕುಕ್ಕರ್ ಗೆ ಆಯುಧ ಪೂಜೆ ಮಾಡಬೇಡಿ.‌ಶಸ್ತ್ರ ಪೂಜೆಯ ಜೊತೆ ಶಸ್ತ್ರ ಬಳಸುವ ಮನೋಸ್ಥೈರ್ಯ ಮುಂದೆ ಬೆಳೆಸೋಣ.‌ ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು.‌ ಹಿಜಾಬ್ ವಿವಾದದಲ್ಲಿ ಆರು ಯುವತಿಯರು ಕರಾವಳಿಯ ಮಾನ ಮರ್ಯಾದೆ ತೆಗೆದರು. ಹಿಜಬ್ ಯುವತಿಯರ ಬಣ್ಣ ಬಯಲು ಮಾಡಿದ್ದು ಹಿಂದೂ ಜಾಗರಣ ವೇದಿಕೆ. ದುರ್ಗಾ ದೌಡ್ ನ ಪೇಟಗಳು ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದೆವು.‌ಕೇಸರಿ ಪೇಟಗಳು ಸಮಾಜದ ಜಾಗೃತಿಗಾಗಿ ಶೋಕಿಗಾಗಿ ಹಾಕಿದ್ದಲ್ಲ.‌ವಿವಾದ ಎದ್ದರೆ ಪೇಟಗಳ ಜೊತೆ ಒಂದು ಸಾವಿರ ಕತ್ತಿಗಳು ಕಾಣಿಸಿಕೊಳ್ಳುತ್ತವೆ.‌ ಇದು ಹಿಂದೂ ಜಾಗರಣ ವೇದಿಕೆಯ ಎಚ್ಚರಿಕೆ ಎಂದು ಪರಿಗಣಿಸಿ ಎಂದು ಸವಾಲು ಹಾಕಿದ್ರು. ಪಿಎಫ್ ಐ ನಿಷೇಧ ಮಾಡಿದ ಕೂಡಲೇ ಹೊಸ ವರಸೆ ಶುರುವಾಗಿದೆ.


ಇದನ್ನೂ ಓದಿ: Rain Update: ಮತ್ತೆ ಹಲವೆಡೆ ವರುಣನ ಆರ್ಭಟ; ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ


ಕೇಸರಿ ಸಮಾವೇಶದ ಮೂಲಕ ಮುಸ್ಲಿಂ ಸಂಘಟನೆಗಳಿಗೆ ಎಚ್ಚರಿಕೆ


ಇಂತಿ ಫಿದಾ ಎಂದು ಪಿ ಎಫ್ ಐ ಕಾರ್ಯಕರ್ತರು ಬರೆದುಕೊಂಡಿದ್ದಾರೆ.‌ಇಂತಿಫಿದಾ ಎಂದರೆ ನಾಗರಿಕ ಸಂಘರ್ಷದ ಮುನ್ಸೂಚನೆ. ಇಂತಿಫಿದಾ ಎಂದರೆ ಕ್ರಾಂತಿಯ ಮುನ್ಸೂಚನೆ.‌ಇಸ್ರೇಲ್ ನ ನಾಗರೀಕ ಹೋರಾಟದ ಇಂತಿಫಿದಾ ಭಾರತದಲ್ಲಿ ಕೇಳಿಬರುತ್ತಿದೆ. ಪಾಕಿಸ್ತಾನದ ಏಂಜಂಟರ ವಿರುದ್ಧ ಹೋರಾಟ ಆರಂಭಕ್ಕಾಗಿ ದುರ್ಗಾದೌಡ್ ಮಾಡಲಾಗಿದೆ. ಕಾಂಗ್ರೆಸ್ ಹಿಂದೂಗಳ ಮೇಲೆ ಸುಳ್ಳು ಉಗ್ರವಾದದ ನೂರಾರು ಕೇಸು ದಾಖಲಿಸಿದೆ. ಖಡ್ಗ ಹಿಡಿದು ಮೆರವಣಿಗೆ ಮಾಡಲು ಅನುಮತಿ ಸಿಗಲಿಲ್ಲ.‌ ಮೆರವಣಿಗೆಯಲ್ಲಿ ನಾವು ಬಹಿರಂಗವಾಗಿ ಶಸ್ತ್ರಾಸ್ತ್ರ ಬಳಕೆ ಮಾಡಿಲ್ಲ.‌ ಸಂದರ್ಭ ಒದಗಿ ಬಂದಾಗ ಶಸ್ತ್ರಾಸ್ತ ಬಳಕೆ ಮಾಡುತ್ತೇವೆ. ಒಟ್ಟಾರೆ ವಿವಾದದ ಬಳಿಕ ‌ಕೇಸರಿ ಸಮಾವೇಶದ ಮೂಲಕ ಮುಸ್ಲೀಂ ಸಂಘಟನೆಗಳಿಗೆ ನೇರ ಎಚ್ಚರಿಕೆ ರವಾನೆಯಾಗಿದೆ. ಈ ಎಚ್ಚರಿಕೆ ಮುಂದಿನ ದಿನಗಳಲ್ಲಿ ಅದ್ಯಾವ ರೂಪ‌ ಪಡೆದುಕೊಳ್ಳುತ್ತೋ ಕಾದುನೋಡಬೇಕಿದೆ.

Published by:ಪಾವನ ಎಚ್ ಎಸ್
First published: