• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shiva Rajkumar: ಪತ್ನಿಯಂತೆ ರಾಜಕೀಯಕ್ಕೆ ಬರುತ್ತಾರಾ ಶಿವಣ್ಣ? ಸೊರಬದಲ್ಲಿ ಸ್ಪಷ್ಟನೆ ಕೊಟ್ರು ಹ್ಯಾಟ್ರಿಕ್ ಹೀರೋ

Shiva Rajkumar: ಪತ್ನಿಯಂತೆ ರಾಜಕೀಯಕ್ಕೆ ಬರುತ್ತಾರಾ ಶಿವಣ್ಣ? ಸೊರಬದಲ್ಲಿ ಸ್ಪಷ್ಟನೆ ಕೊಟ್ರು ಹ್ಯಾಟ್ರಿಕ್ ಹೀರೋ

ಚುನಾವಣಾ ಪ್ರಚಾರದಲ್ಲಿ ನಟ ಶಿವರಾಜ್​ಕುಮಾರ್

ಚುನಾವಣಾ ಪ್ರಚಾರದಲ್ಲಿ ನಟ ಶಿವರಾಜ್​ಕುಮಾರ್

ಸೊರಬದಲ್ಲಿ ಮಧು ಬಂಗಾರಪ್ಪಗೆ ಉತ್ತಮ ವಾತಾವರಣವಿದೆ, ಚುನಾವಣೆ ಗೆಲ್ಲುವ ವಿಶ್ವಾಸವಿದೆ ಎಂದು ಶಿವರಾಜ್​​ಕುಮಾರ್ ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Shimoga, India
  • Share this:

ಶಿವಮೊಗ್ಗ: ಜಿಲ್ಲೆಯ ಸೊರಬ (Soraba) ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಮಧು ಬಂಗಾರಪ್ಪ (Madhu Bangarappa) ಪರವಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್​​ಕುಮಾರ್ (Shiva Rajkumar) ಕ್ಯಾಂಪೇನ್ ಮಾಡಿದ್ದರು. ಶಿವಣ್ಣ ಬೃಹತ್ ರೋಡ್‌ ಶೋ ನಡೆಸಿದ್ದರು. ಶಿವಣ್ಣಗೆ ಪತ್ನಿ ಗೀತಾ ಶಿವರಾಜ್​ಕುಮಾರ್ (Geetha Shiva Rajkumar) ಸಾಥ್ ಕೊಟ್ಟರು. ಈ ವೇಳೆ ಮಾತನಾಡಿದ ಶಿವಣ್ಣ, ಮಧು ಬಂಗಾರಪ್ಪ ಬೇರೆಯವರಿಗೆ ಒಳ್ಳೆಯದು ಮಾಡಬೇಕು ಎಂಬ ಮನಸಿರುವ ವ್ಯಕ್ತಿ. ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಬೇಕು ಅಂತ ಮತದಾರಿಗೆ ಕರೆ ನೀಡಿದರು. ಇನ್ನು ಮಧು ಬಂಗಾರಪ್ಪ ಮಾತನಾಡಿದ್ದು, ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಆದರೆ ಹೆಚ್ಚು ಅಂತರದಲ್ಲಿ ಗೆಲ್ಲಬೇಕು ಅಂತ ಹೇಳಿದರು.


ನನಗೆ ರಾಜಕೀಯ ತಿಳಿದಿಲ್ಲ


ಸೊರಬದಲ್ಲಿ ಮಾತನಾಡಿದ ಶಿವರಾಜ್​​ಕುಮಾರ್ ಅವರು, ನಾನು ಸೊರಬ ಸೇರಿದಂತೆ ಸಾಗರ, ತೀರ್ಥಹಳ್ಳಿ, ಬೀದರ್, ಶಿರಸಿ, ಹುಬ್ಬಳ್ಳಿ ಶೆಟ್ಟರ್ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಶೆಟ್ಟರ್​ ನಮ್ಮ ಕುಟುಂಬಸ್ಥರು ಇದ್ದಂಗೆ, ಹೀಗಾಗಿ ಅವರ ಪ್ರಚಾರಕ್ಕೆ ಹೊರಟಿರುವೆ.


ಇದನ್ನೂ ಓದಿ: HD Kumaraswamy: ಚುನಾವಣೆಗೆ ಕೆಲವೇ ದಿನಗಳಿರುವಾಗಲೇ ಎಚ್​​ಡಿಕೆಗೆ ಬಿಗ್​​ಶಾಕ್​​! ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ!


ನನಗೆ ರಾಜಕೀಯ ತಿಳಿದಿಲ್ಲ, ಈ ಹಿನ್ನಲೆಯಲ್ಲಿ ನಾನು ಕೇವಲ ಪ್ರಚಾರ ಮಾಡುತ್ತೇನೆ. ನಾನು ರಾಜಕೀಯಕ್ಕೆ ಸೇರುವುದಿಲ್ಲ, ರಾಜಕೀಯ ಕ್ಷೇತ್ರದಲ್ಲಿ ಗೀತಾ ಇದ್ದಾರೆ. ನಾನು ಚಿತ್ರ ರಂಗದಲ್ಲಿ ಬ್ಯುಸಿ ಆಗಿರುವೆ ಎಂದು ಹೇಳಿದ್ದಾರೆ.




ಶಕ್ತಿಧಾಮ ಕೇಂದ್ರವನ್ನು ತಾಯಿ ಪಾರ್ವತಮ್ಮ ಅವರು ಆರಂಭಿಸಿದ್ದರು. ಇದರಲ್ಲಿ ಕೆಂಪಯ್ಯ ಅವರು ಒಬ್ಬ ಟ್ರಸ್ಟಿಯಾಗಿದ್ದಾರೆ. ಅಮ್ಮನ ಆಸೆಯಂತೆ ದೊಡ್ಡ ಸೊಸೆ ಗೀತಾ ನೋಡಿಕೊಳ್ಳಬೇಕೆಂದು ಆಸೆ ಇತ್ತು. ಅದರಂತೆ ಈಗ ಅವರು ಆ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ. ಶಕ್ತಿಧಾಮ ಅಭಿವೃದ್ಧಿ ಆಗುತ್ತಿದೆ, ಶಾಲೆ ಆರಂಭ ಆಗಿದೆ ಎಂದು ತಿಳಿಸಿದ್ದಾರೆ.


ಇದೇ ವೇಳೆ ಸುದೀಪ್​ ಅವರ ಚುನಾವಣಾ ಪ್ರಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಅಭಿರುಚಿ ಆಗಿದೆ ಎಂದರು. ಉಳಿದಂತೆ ಸೊರಬದಲ್ಲಿ ಮಧು ಬಂಗಾರಪ್ಪಗೆ ಉತ್ತಮ ವಾತಾವರಣವಿದೆ, ಮಧು ಚುನಾವಣೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

top videos
    First published: