ಪ್ರವಾಸಿಗರಿಗೆ ಸಿಹಿಸುದ್ದಿ; ಜೋಗ್​ ಫಾಲ್ಸ್​​ನಲ್ಲಿ ಸದ್ಯದಲ್ಲೇ ಆರಂಭವಾಗಲಿದೆ ಜಿಪ್​ಲೈನ್​ ಸೌಲಭ್ಯ

ಜೋಗ್​ಫಾಲ್ಸ್​ ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರಿಗೆ ಈ ಜಿಪ್​ಲೈನ್​ ಹೊಸ ಅನುಭವ ನೀಡಲಿದೆ. ಹಚ್ಚಹಸಿರಿನ ಪ್ರಕೃತಿಯ ನಡುವೆ, ಹಗ್ಗ ಕಟ್ಟಿಕೊಂಡು ಜಾರಿ ರಮಣೀಯ ಜೋಗ್​ಫಾಲ್ಸ್​​​ ನೋಡುವ ವಿಶೇಷ ಅನುಭವವೇ ಬೇರೆ.

Latha CG | news18-kannada
Updated:September 12, 2019, 4:24 PM IST
ಪ್ರವಾಸಿಗರಿಗೆ ಸಿಹಿಸುದ್ದಿ; ಜೋಗ್​ ಫಾಲ್ಸ್​​ನಲ್ಲಿ ಸದ್ಯದಲ್ಲೇ ಆರಂಭವಾಗಲಿದೆ ಜಿಪ್​ಲೈನ್​ ಸೌಲಭ್ಯ
ಜೋಗ್​ ಫಾಲ್ಸ್​​
  • Share this:
ಬೆಂಗಳೂರು(ಸೆ.12): ಮಳೆಗಾಲದ ವೇಳೆ ಮೈದುಂಬಿ ರುದ್ರ ರಮಣೀಯವಾಗಿ ಧುಮ್ಮಿಕ್ಕುವ ಜೋಗ ಜಲಪಾತ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ದೇಶದ 2ನೇ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಗ ಜಲಪಾತದಲ್ಲಿ ಶರಾವತಿ ನದಿ ರಾಜ, ರಾಣಿ, ರೋರರ್, ರಾಕೆಟ್ ಎಂಬ 4 ಧಾರೆಗಳಾಗಿ ಧುಮ್ಮಿಕ್ಕುತ್ತಾಳೆ. ಲಿಂಗನಮಕ್ಕಿ ಅಣೆಕಟ್ಟಿನಿಂದ ಹೊರಬರುವ ನೀರು 829 ಅಡಿ ಎತ್ತರದಿಂದ ಕೆಳಗೆ ಬೀಳುತ್ತದೆ. 

ಮಳೆಗಾಲದಲ್ಲಿ ಭೋರ್ಗರೆಯುತ್ತಾ ಜೀವಕಳೆಯೊಂದಿಗೆ ಧುಮುಕುವ ಜೋಗ ಜಲಪಾತವನ್ನು ವೀಕ್ಷಿಸಲು ದೇಶದೆಲ್ಲೆಡೆಯಿಂದ ಆಗಮಿಸುತ್ತಾರೆ. ಜೋಗ ಜಲಪಾತದ ವೈಭವವನ್ನು ಎದುರು ನಿಂತು ವೀಕ್ಷಿಸುವುದರ ಜೊತೆಗೆ ಇನ್ನುಮುಂದೆ ಮೇಲಿನಿಂದಲೂ ನೋಡಬಹುದು! ಹೇಗೆ ಅಂತೀರಾ?

ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿರುವ ಜೋಗ ಜಲಪಾತದಲ್ಲಿ ಶೀಘ್ರದಲ್ಲೇ ಜಿಪ್​ಲೈನ್​ ಸೌಲಭ್ಯ ಆರಂಭವಾಗಲಿದೆ. ಜೋಗ್​​​ ನಿರ್ವಹಣಾ ಅಧಿಕಾರಿಗಳು ಜೋಗ್​ಫಾಲ್ಸ್​​ನಲ್ಲಿ ಜಿಪ್​ಲೈನ್​ ಸೌಲಭ್ಯ ಒದಗಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ಜೋಗ್​ ಜಲಪಾತದ ರಮಣೀಯತೆಯನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಮಾತ್ರವಲ್ಲ, ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಈ ಜಿಪ್​ಲೈನ್​ ವ್ಯವಸ್ಥೆ ಮಾಡಲಾಗುತ್ತಿದೆ.

ಕುಸಿಯುತ್ತಿರುವ ಆರ್ಥಿಕತೆ ಸುಧಾರಣೆಗೆ ಅರ್ಥ ತಜ್ಞ ಡಾ.ಮನಮೋಹನ್​ ಸಿಂಗ್​ ಐದು ಸೂತ್ರಗಳು!

ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹನುಮ ನಾಯಕ್ ಈ ಹೊಸ ಯೋಜನೆಯ ಅನುಷ್ಠಾನದ ಬಗ್ಗೆ ಮಾತನಾಡಿದ್ದಾರೆ. 60 ಲಕ್ಷ ವೆಚ್ಚದಲ್ಲಿ ಜಿಪ್​ಲೈನ್​ ಯೋಜನೆ ಅನುಷ್ಠಾನ ಮಾಡಲು ಅಂದಾಜು ಮಾಡಲಾಗಿದೆ. ಮುಂದಿನ ವರ್ಷದೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಜಿಪ್​ಲೈನ್​ ಯೋಜನೆ ಪ್ರಾರಂಭ ಮಾಡುವ ಸಲುವಾಗಿ ಪ್ರವಾಸಿಗರು ಜಾರಿ ಹೋಗಲು ಸೂಕ್ತ ಸ್ಥಳ ಮತ್ತು ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಿದ್ದೇವೆ. ಈ ಜಿಪ್​ಲೈನ್​ ಪ್ರವಾಸಿಗರನ್ನು ತಪಾಸಣಾ ಬಂಗಲೆ ಇರುವ ಪ್ರದೇಶದಿಂದ 1 ಸಾವಿರ ಅಡಿ ಎತ್ತರಕ್ಕೆ ಕರೆದೊಯ್ಯಲಿದೆ ಎಂದರು.

ಈ ಜಿಪ್​ಲೈನ್​​ ಸೌಲಭ್ಯ ಜೋಗ್​ಫಾಲ್ಸ್​​ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.  ಜೋಗ್​ಫಾಲ್ಸ್​ ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರಿಗೆ ಈ ಜಿಪ್​ಲೈನ್​ ಹೊಸ ಅನುಭವ ನೀಡಲಿದೆ. ಹಚ್ಚಹಸಿರಿನ ಪ್ರಕೃತಿಯ ನಡುವೆ, ಹಗ್ಗ ಕಟ್ಟಿಕೊಂಡು ಜಾರಿ ರಮಣೀಯ ಜೋಗ್​ಫಾಲ್ಸ್​​​ ನೋಡುವ ವಿಶೇಷ ಅನುಭವವೇ ಬೇರೆ.

ಕುಮಾರಸ್ವಾಮಿ ಫೋನ್ ಕದ್ದಾಲಿಸಿದ್ದರೆ ಯಾಕೆ ಬಂಧಿಸಬಾರದು?; ಜಿಟಿಡಿ ನಂತರ ತಿರುಗಿಬಿದ್ದ ಮತೊಬ್ಬ ಜೆಡಿಎಸ್ ಶಾಸಕಸದ್ಯ ಕೊಡಗು ಮತ್ತು ಉತ್ತರ ಕರ್ನಾಟಕದಲ್ಲಿ ಈ ಜಿಪ್​ಲೈನ್​ ಸೌಲಭ್ಯ ಇದ್ದು, ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜೋಗ್​​ಫಾಲ್ಸ್​​ನಲ್ಲಿ ಪೂರ್ಣ ಪ್ರಮಾಣದ ಸರ್ಕಾರಿ ಒಡೆತನದ ಜಿಪ್​​ಲೈನ್​ ಸೌಲಭ್ಯ ಆರಂಭವಾಗಲಿದೆ.

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ