ದೆಹಲಿಯ ತಿಹಾರ್ ಜೈಲಿನಲ್ಲಿ ಡಿಕೆಶಿಯನ್ನು ಭೇಟಿಯಾದ ಸೋನಿಯಾ ಗಾಂಧಿ; ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್​ಗೆ ಮೊರೆ?

57 ವರ್ಷದ ಡಿಕೆ ಶಿವಕುಮಾರ್ ಅವರು ದೆಹಲಿ ಹೈಕೋರ್ಟ್​ನಲ್ಲಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದಿದ್ದು, ಇವತ್ತು ಕೋರ್ಟ್ ತೀರ್ಪು ನೀಡಲಿದೆ. ಇಂದು ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಡಿಕೆಶಿ ನಿರ್ಧರಿಸಿದ್ದಾರೆನ್ನಲಾಗಿದೆ.

news18-kannada
Updated:October 23, 2019, 12:35 PM IST
ದೆಹಲಿಯ ತಿಹಾರ್ ಜೈಲಿನಲ್ಲಿ ಡಿಕೆಶಿಯನ್ನು ಭೇಟಿಯಾದ ಸೋನಿಯಾ ಗಾಂಧಿ; ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್​ಗೆ ಮೊರೆ?
ಡಿ.ಕೆ. ಶಿವಕುಮಾರ್
  • Share this:
ನವದೆಹಲಿ(ಅ. 23): ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಗಾಂಧಿ ಜೊತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿಯೂ ಇದ್ರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಇಡಿ ಕಸ್ಟಡಿಯಲ್ಲಿರುವ ಡಿಕೆಶಿ ಅವರನ್ನು ಕೈ ವರಿಷ್ಠರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

57 ವರ್ಷದ ಡಿಕೆ ಶಿವಕುಮಾರ್ ಅವರು ದೆಹಲಿ ಹೈಕೋರ್ಟ್​ನಲ್ಲಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದಿದ್ದು, ಇವತ್ತು ಕೋರ್ಟ್ ತೀರ್ಪು ನೀಡಲಿದೆ. ಇಂದು ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಡಿಕೆಶಿ ನಿರ್ಧರಿಸಿದ್ದಾರೆನ್ನಲಾಗಿದೆ. ಅವರ ಸಹೋದರ ಡಿಕೆ ಸುರೇಶ್ ಅವರು ಇಂದು ವಕೀಲರನ್ನು ಭೇಟಿ ಮಾಡಿ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಹಿಂದೂ ಮುಖಂಡ ಕಮಲ್ ತಿವಾರಿ ಬರ್ಬರ ಹತ್ಯೆ; ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಇ.ಡಿ. ವಿಶೇಷ ನ್ಯಾಯಾಲಯ ಡಿಕೆಶಿ ಜಾಮೀನು ಅರ್ಜಿಯನ್ನು ವಜಾ ಮಾಡಿದ ಹಿನ್ನೆಲೆಯಲ್ಲಿ ಡಿಕೆಶಿ ಪರ ವಕೀಲರು ದೆಹಲಿ ಹೈಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುರೇಶ್ ಕುಮಾರ್ ಅವರು ಅ.17ರಂದು ತೀರ್ಪನ್ನು ಇಂದಿಗೆ ಕಾಯ್ದಿರಿದ್ದರು. ಇಂದು ಮಧ್ಯಾಹ್ನ 2.30ಕ್ಕೆ ತೀರ್ಪು ಹೊರಬೀಳಲಿದೆ.

ಇಂದು ದೆಹಲಿ ನ್ಯಾಯಾಲಯ ನೀಡುವ ತೀರ್ಪು ವ್ಯತಿರಿಕ್ತವಾಗಿ ಬಂದರೆ ಇಂದೇ ಸುಪ್ರೀಂ ಕೋರ್ಟಿಗೆ ಹೋಗುವುದು ಅಸಾಧ್ಯ. ಏಕೆಂದರೆ ಮಧ್ಯಾಹ್ನ 2.30ಕ್ಕೆ ತೀರ್ಪು ಬರುವುದರಿಂದ ಅಂದೇ ಸುಪ್ರೀಂಕೋರ್ಟ್​ಗೆ ಹೋಗಿ ಜಾಮೀನು ಅರ್ಜಿ ಸಲ್ಲಿಸಲು ತಡವಾಗುತ್ತದೆ. ಹೀಗಾಗಿ ಗುರುವಾರ ಅರ್ಜಿ ಸಲ್ಲಿಸಬಹುದು. ಸುಪ್ರೀಂಕೋರ್ಟ್​ನಲ್ಲಿ ಶುಕ್ರವಾರ ಹೊಸ ಪ್ರಕರಣದ ವಿಚಾರಣೆ  ನಡೆಯುವುದು ಅಸಾಧ್ಯ. ಶನಿವಾರದಿಂದ ಅಕ್ಟೋಬರ್ 31ರವರೆಗೂ ಸುಪ್ರೀಂ ಕೋರ್ಟಿಗೆ ರಜೆ. ಒಂದು ವೇಳೆ ಇಂದು ದೆಹಲಿ ಹೈಕೋರ್ಟ್​ನಿಂದ ಜಾಮೀನು ನಿರಾಕರಣೆಯಾದರೆ ಡಿಕೆಶಿ ಮುಂದಿನ ತಿಂಗಳವರೆಗೂ ಜೈಲಿನಲ್ಲೇ  ಕಳೆಯಬೇಕಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading