• Home
  • »
  • News
  • »
  • state
  • »
  • Yadagiri: ಬೆಳಗ್ಗೆದ್ರೆ ಶುರು ಅತ್ತೆ-ಸೊಸೆ ಜಗಳ; ಬೇಸತ್ತು ಭೀಮಾನದಿಯಲ್ಲಿ ಹೆತ್ತ ತಾಯಿಯನ್ನೇ ಮುಳುಗಿಸಿ ಕೊಂದ ಮಗ

Yadagiri: ಬೆಳಗ್ಗೆದ್ರೆ ಶುರು ಅತ್ತೆ-ಸೊಸೆ ಜಗಳ; ಬೇಸತ್ತು ಭೀಮಾನದಿಯಲ್ಲಿ ಹೆತ್ತ ತಾಯಿಯನ್ನೇ ಮುಳುಗಿಸಿ ಕೊಂದ ಮಗ

ಆರೋಪಿ ಭೀಮಾಶಂಕರ್​

ಆರೋಪಿ ಭೀಮಾಶಂಕರ್​

ಹೆತ್ತ ತಾಯಿಯನ್ನೇ ನೀರಿನಲ್ಲಿ ಮುಳುಗಿಸಿ ಕೊಲೆಗೈದಿದ್ದಾನೆ. ಸುಳ್ಳು ಹೇಳಿ ತಾಯಿಯನ್ನು ಕರೆದುಕೊಂಡು ಹೋಗಿ ಭೀಮಾನದಿಯಲ್ಲಿ ತಳ್ಳಿ ಹತ್ಯೆಗೈದು ನೆಮ್ಮದಿಯಾಗಿದ್ದ ಭೀಮಾಶಂಕರ್​ನನ್ನು ಪೊಲೀಸರು ಬಂಧಿಸಿದ್ದಾರೆ.

  • Share this:

ಯಾದಗಿರಿ (ಮಾ.31): ಹೆತ್ತ ತಾಯಿ (Mother) ಕಣ್ಣಿಗೆ ಕಾಣುವ  ದೇವರು, ದುಡ್ಡು ಕೊಟ್ಟರೇ ಬೇಕಾಗಿದ್ದು ಸಿಗುತ್ತದೆ ಆದರೆ, ಹೆತ್ತ ತಾಯಿ ಸಿಗುವುದಿಲ್ಲ. ಆದರೆ, ಇಲ್ಲಿ ಪಾಪಿ ಪುತ್ರ ಹೆಂಡತಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಈಗ ಜೈಲು (Jail) ಸೇರಿದ್ದಾನೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ನಿವಾಸಿಯಾದ ಭೀಮಾಶಂಕರ ಬಿಳವಾರ ಗ್ರಾಮದಲ್ಲಿ ತಾಯಿ ರಾಚಮ್ಮ ಹಾಗೂ ಹೆಂಡತಿ (Wife) ಜೊತೆ ವಾಸವಾಗಿದ್ದನು. ಗ್ರಾಮದಲ್ಲಿ (Village) ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಯಾವುದೇ ಆಸ್ತಿ ಕೂಡ ಹೊಂದಿಲ್ಲ.ಭೀಮಾಶಂಕರ (Bhima Shankar) ತಂದೆ ಶರಬಣ್ಣ ಸುಮಾರು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ.


ಭೀಮಾಶಂಕರ ಮಾಡಲು ಕೆಲಸವಿಲ್ಲದೇ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದನು. ವಿಧವೆ,ವಿಕಲಚೇತನ  ಇನ್ನಿತರ ಪಿಂಚಣಿ ಯೋಜನೆ ಹಾಗೂ ಆಧಾರ ಕಾರ್ಡ್ ಮಾಡಿಸಿ ಜನರು ನೀಡಿದ್ದ ಹಣದಲ್ಲಿಯೇ ಜೀವನ ನಡೆಸುತ್ತಿದ್ದನು. ಮೊದಲನೇ ಹೆಂಡತಿಯು ಇತನ ವರ್ತನೆಯಿಂದ ಬೇಸತ್ತು ಐದು ವರ್ಷದ ಹಿಂದೆ ಗಂಡನ ಜೊತೆ ಬಿಟ್ಟು ತವರು ಮನೆ ಸೇರಿದ್ದಾಳೆ. ನಂತರ ಎರಡು ವರ್ಷದ ಹಿಂದೆ ಎರಡನೇ ವಿವಾಹವಾಗಿದ್ದಾನೆ.ಎರಡನೇ ಪತ್ನಿಯು ಕೂಲಿ ಕೆಲಸ ಮಾಡುತ್ತಿದ್ದಳು. ಆದರೆ, ಕೆಲವೊಮ್ಮೆ ಕೂಲಿ ಕೆಲಸಕ್ಕೆ ತೆರಳುತ್ತಿರಲಿಲ್ಲ‌.


ಅತ್ತೆ ಹಾಗೂ ಸೊಸೆ ನಡುವೆ ಜಗಳ!


ಇದರಿಂದ ಬೇಸರಗೊಂಡ ಅತ್ತೆಯಾದ ರಾಚಮ್ಮ ಸೊಸೆಗೆ ಸರಿಯಾಗಿ ಮಾಡಿಕೊಂಡು ಜೀವನ ನಡೆಸಿ ಎಂದು ಜಗಳ ಮಾಡುತ್ತಿದ್ದಳಂತೆ. ಎರಡು ವರ್ಷದ ಹಿಂದೆ ರಾಚಮ್ಮಳ ಕಾಲು ಮುರಿದಿತ್ತು. ಆಕೆ ಮಗನ ಮನೆಗೆ ಬಂದು ವಾಸವಾಗಿದ್ದಳು ಅತ್ತೆ ಯಾವಾಗ ಮನೆಗೆ ಬಂದು ವಾಸವಾಗಿದ್ದಳೋ ಅವ್ಯಾಗ್ಲೆ, ಅತ್ತೆ ಹಾಗೂ ಸೊಸೆ ನಡುವೆ ಕದನ ಶುರುವಾಗಿದೆ.
ಜಗಳ ತಾರಕಕ್ಕೆ ಹೋಗಿದೆ ಗಂಡ ಭೀಮಾಶಂಕರಗೆ ಇವತ್ತು ನಿಮ್ಮ ತಾಯಿಯನ್ನು ಕರೆದುಕೊಂಡು ಹೋಗಿ ಮುಗಿಸಿ ಬಿಡು ಎಂದು ಸೊಸೆ  ಹೇಳಿದ್ದಳಂತೆ.


ಇದನ್ನೂ ಓದಿ:Bengaluru: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ! ಹೋಟೆಲ್‌ನಲ್ಲಿ ಹೊತ್ತಿಕೊಂಡ ಬೆಂಕಿ


ನದಿಯಲ್ಲಿ ಮುಳುಗಿಸಿ ತಾಯಿ ಕೊಂದ ಪಾಪಿ


ಮಾರ್ಚ್ 18 ರಂದು ಹೋಳಿ ಹಬ್ಬದ ದಿನವೇ ತಾಯಿಯನ್ನು ಆಸ್ಪತ್ರೆ ಕರೆದುಕೊಂಡು ಹೋಗಿ ನಂತರ ಸಂಬಂಧಿಕರ ಮನೆಗೆ ಹೋಗಿ ಬಿಡುತ್ತೆನೆಂದು ಊರಲ್ಲಿ ಹೇಳಿ  ತಾಯಿಯನ್ನು ಭೀಮಾಶಂಕರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ ಸಮೀಪದ ಭೀಮಾನದಿಯಲ್ಲಿ ಕರೆದುಕೊಂಡು ಹೋಗಿ ಭೀಮಾನದಿಯಲ್ಲಿ ಮುಳುಗಿಸಿ ಸಾಯಿಸುತ್ತಾನೆ.


ಸೊಸೆಯು ಮನೆಯಲ್ಲಿರುವ ಖೌದಿ ಹಾಗೂ ಬಟ್ಟೆಗಳನ್ನು ಒಗೆದು ಮನೆ ಮೇಲೆ ಹಾಕುತ್ತಾರೆ. ಇದರಿಂದ ಸುತ್ತಲೂ ಮನೆಯಲ್ಲಿರುವರಿಗೆ ಅನುಮಾನ ಕಾಡುತ್ತದೆ. ಈ ವೇಳೆ ಭೀಮಾಶಂಕರನಿಗೆ  ಧರ್ಮದೇಟು ನೀಡಿ ಬಾಯಿ ಬಿಡಿಸುತ್ತಾರೆ. ಆವಾಗ , ಹೆಂಡತಿ ಜೊತೆ ಜಗಳ ಪದೇ ಪದೇ ಮಾಡುತ್ತಿದ್ದಳು ಇದರಿಂದ ನಾನು ಬೇಸತ್ತು ಭೀಮಾನದಿಯಲ್ಲಿ ಕೊಲೆ ಮಾಡಿದ್ದೆನೆ ಸತ್ಯ ಬಾಯ್ಬಿಟ್ಟಿದ್ದಾನೆ. ನಂತರ ರಾಚಮ್ಮಳ ಸಂಬಂಧಿ ನಾಗಣ್ಣ ಇದನ್ನು ಅರಿತು ಭೀಮರಾಯನಗುಡಿ ಪೊಲೀಸ ಠಾಣೆಯಲ್ಲಿ ಕೊಲೆ ಮಾಡಿರುವ ಬಗ್ಗೆ ದೂರು ನೀಡುತ್ತಾರೆ. ಈ ವೇಳೆ ಮಾರ್ಚ್ 29 ರಂದು ರಾಚಮ್ಮಳ ಶವ ಪತ್ತೆಯಾಗುತ್ತದೆ. ಭೀಮರಾಯನಗುಡಿ ಪೊಲೀಸರು ದೂರುದಾರ ನಾಗಣ್ಣನಿಗೆ ಕರೆದುಕೊಂಡು ಬರುತ್ತಾರೆ.


ಇದನ್ನೂ ಓದಿ: BBMPಯ ಕಿಲ್ಲರ್ ಕಸದ ಲಾರಿಗೆ ಮತ್ತೊಂದು ಬಲಿ, ಅಪಘಾತದಲ್ಲಿ ವೃದ್ಧನ ದೇಹ ಛಿದ್ರ ಛಿದ್ರ


ಕೊಳತ ಸ್ಥಿತಿಯಲ್ಲಿ ಶವ ಪತ್ತೆ


ಕೊಲೆ ಮಾಡಿ 10 ದಿನಗಳ ನಂತರ ಶವ ಸಂಪೂರ್ಣವಾಗಿ ಕೊಳೆತು ಹೋಗಿರುತ್ತದೆ. ಶವ ನೋಡಿ ಗುರುತು ಪತ್ತೆ ಹಚ್ಚಲು ಕಷ್ಟವಾಗುತ್ತದೆ .ಆದರೆ, ಕಪ್ಪು ಬಣ್ಣದ ದಾರ ಹಾಗೂ ಬಟ್ಟೆ ನೋಡಿ ಪತ್ತೆ ಹಚ್ಚುತ್ತಾರೆ.
ನಂತರ ಭೀಮರಾಯನಗುಡಿ ಗುಡಿ‌ ಪೊಲೀಸರು ಆರೋಪಿ ಭೀಮಾಶಂಕರನನ್ನು ಬಿಳವಾರ ಊರಲ್ಲಿ ಬಂಧಿಸುತ್ತಾರೆ.
ಬೈಕ್ ನಡೆಸಿದ್ದ ಸ್ನೇಹಿತ ಮುತ್ತಪ್ಪ ಪರಾರಿಯಾಗಿದ್ದು ಮುತ್ತಪ್ಪನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ ‌. ಭೀಮಾಶಂಕರನ ಪತ್ನಿ ಪರಾರಿಯಾಗಿದ್ದಾಳೆ.


ಹೆತ್ತ ತಾಯಿಯನ್ನು ಕೊಲೆ ಮಾಡಿ ಖೌದಿ ಹಾಗೂ ಬಟ್ಟೆಗಳನ್ನು ಒಗೆದು ನೆಮ್ಮದಿಯಾಗಿರಬೇಕೆಂದಿದ್ದ ಪಾಪಿ ಪುತ್ರ ಈಗ ಜೈಲು ಸೇರಿದ್ದಾನೆ.ಇದ್ದಷ್ಟು ದಿವಸ ತಾಯಿಗೆ ಆರೈಕೆ ಮಾಡಿ ತಾಯಿ ಸೇವೆ ಮಾಡಬೇಕಾದ ಪುತ್ರ ಮಡದಿಯ ಮಾತು ಕೇಳಿ ಜನ್ಮ ನೀಡಿದ್ದ ತಾಯಿಯನ್ನೆ ಕೊಲೆ ಮಾಡಿದ್ದು ದುರಂತ ಸಂಗತಿಯಾಗಿದೆ.

Published by:ಪಾವನ ಎಚ್ ಎಸ್
First published: