ಆಧುನಿಕ ಶ್ರವಣಕುಮಾರ: ಅಮ್ಮನ ಕೊನೆಯ ಆಸೆ ಪೂರೈಸಲು ಮಗ ಮಾಡಿದ್ದೇನು ಗೊತ್ತಾ?

news18
Updated:September 29, 2018, 9:51 AM IST
ಆಧುನಿಕ ಶ್ರವಣಕುಮಾರ: ಅಮ್ಮನ ಕೊನೆಯ ಆಸೆ ಪೂರೈಸಲು ಮಗ ಮಾಡಿದ್ದೇನು ಗೊತ್ತಾ?
  • Advertorial
  • Last Updated: September 29, 2018, 9:51 AM IST
  • Share this:
ವೀರೇಶ್ ಜಿ ಹೊಸೂರ್, ನ್ಯೂಸ್ 18 ಕನ್ನಡ

ಚಿಕ್ಕಮಗಳೂರು(ಸೆ.29): ಜನ್ಮ ಕೊಟ್ಟ ತಾಯಿಗೆ ಮಕ್ಕಳು ಯಾವುದೇ ವಿಧದಲ್ಲೂ ಋಣ ತೀರಿಸಲೂ ಸಾಧ್ಯವೇ ಇಲ್ಲ. ಇತ್ತೀಚೆಗಂತೂ ವಯಸ್ಸಾದ ಜನ್ಮದಾತರನ್ನ ವೃದ್ದಾಶ್ರಮ ತಳ್ಳೋದು ಒಂಥರಾ ಪ್ಯಾಷನ್ ಆಗ್ಬಿಟ್ಟಿದೆ. ಆದರೆ ಇಲ್ಲೊಬ್ಬ ಆಧುನಿಕ ಶ್ರವಣಕುಮಾರ ತನ್ನ ತಾಯಿಯ ಕೊನೆ ದಿನಗಳ ಆಸೆ ತೀರಿಸಲು ಮಾಡುತ್ತಿರುವ ಕೆಲಸ ನಿಮ್ಮ ಕಣ್ಣುಗಳು ತೇವಗೊಳ್ಳುವುದು ಖಚಿತ.

ಅಮ್ಮನಿಗಾಗಿ ಸ್ಕೂಟರ್​ನಲ್ಲಿ ದೇಶ ಸುತ್ತಿಸಿದ ಮಗ

ಈ ಪ್ರಪಂಚದಲ್ಲಿ ಅಮ್ಮ ಎನ್ನೋ ಒಂದು ಪದಕ್ಕೆ ಇನ್ನಿಲ್ಲದ ಮಹತ್ವ ಇದೆ. ಇಂತಹ ಅಮ್ಮನ ಅದೆಷ್ಟೋ ಆಸೆಗಳನ್ನು ಮಕ್ಕಳು ಈಡೇರಿಸೋದೆ ಇಲ್ಲ. ಆದ್ರೆ ಇಲ್ಲೊಬ್ಬ ಮಗ ತೀರ್ಥಯಾತ್ರೆ ಮಾಡಬೇಕು ಅಂದುಕೊಂಡಿದ್ದ ತನ್ನ ತಾಯಿಯ ಆಸೆಯನ್ನು ತನ್ನ ಹಳೆಯ ಸ್ಕೂಟರ್ ನಲ್ಲಿಯೇ ದೇಶಾದ್ಯಾಂತ ತೀರ್ಥಯಾತ್ರೆ ಮಾಡಿಸಿ ಅಮ್ಮನ ಆಸೆಗೆ ಹೆಗಲಾಗಿ ನಿಂತಿದ್ದಾನೆ.ಮೈಸೂರಿನ ಕೃಷ್ಣಮೂರ್ತಿ ತನ್ನ ತಾಯಿಯೊಂದಿಗೆ ಸ್ಕೂಟರ್‍ನಲ್ಲೇ 9 ತಿಂಗಳಲ್ಲಿ ಬರೋಬ್ಬರಿ 26,000 ಕಿ.ಮೀ. ಸುತ್ತಿ ಕೇರಳ, ತಮಿಳನಾಡು,ಆಂದ್ರ ಪ್ರದೇಶ, ತೆಲಂಗಾಣ, ಮಾಹಾರಾಷ್ಟ ಹಾಗೂ ದಕ್ಷಿಣ ಬಾರತದ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ದೇವರುಗಳನ್ನು ತಾಯಿಗೆ ದರ್ಶನ ಮಾಡಿಸಿದ್ದಾನೆ. ಹೀಗಾಗಿ ಮಗನ ಕಾರ್ಯಕ್ಕೆ ತಾಯಿ ಆನಂದಗೊಂಡಿದ್ದಾರೆ.

ಇನ್ನು ಈ ವೇಳೆ ಕೃಷ್ಣ ಮೂರ್ತಿ ತಮ್ಮ ತಾಯಿಯನ್ನು ಮಲೆನಾಡಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶಾರದಾಂಭೆ ಹಾಗೂ ಜಗದ್ಗುರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಮಾಡಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಕೃಷ್ಣಮೂರ್ತಿ ತಾಯಿ‌ ಚೂಡಾಮಣಿ ತೀರ್ಥಯಾತ್ರೆ ಮಾಡಬೇಕು ಎಂದು ಮಗನ ಬಳಿ ಹೇಳಿಕೊಂಡಿದ್ರು.‌ ಇದಕ್ಕೆ ಚಾಚು ತಪ್ಪದೇ ಸ್ಪಂದಿಸಿದ ಮಗ ತನ್ನ ಬಜಾಜ್ ಸ್ಕೂಟರ್ನಲ್ಲಿಯೇ ತಾಯಿಗೆ ತೀರ್ಥಯಾತ್ರೆಮಾಡಿಸಿ ಸೈ ಎನಿಸಿಕೊಂಡಿದ್ದಾನೆ. ಮಗನ ಈ ಕಾರ್ಯಕ್ಕೆ ತಾಯಿ‌ ಆನಂದ ವ್ಯಕ್ತಪಡಿಸಿದ್ದು. ಕೃಷ್ಣಮೂರ್ತಿ ಗೆ ಮತ್ತಷ್ಟು ಆನಂದ ಉಂಟಾಗಿದೆ.ಒಟ್ಟಾರೆ ತಂದೆ ತಾಯಿಗಳಿಗೆ ವಯಸಾಗ್ತಿದಂತೆ ಒಂದು ಊರುಗೋಲು ಕೊಟ್ಟು ವೃದ್ದಾಶ್ರಮಕ್ಕೆ ಬಿಟ್ಟು ಬರೋ ಮಕ್ಕಳ ನಡುವೆ ಮೈಸೂರಿನ ಈ ಕೃಷ್ಣ ಮೂರ್ತಿ ಕಾರ್ಯ ಎಲ್ಲರೂ ಮೆಚ್ಚುವುದರ ಜೊತೆಗೆ ಎಲ್ಲರಿಗೂ ಮಾದರಿಯಾಗಿದ್ದಾರೆ..
First published:September 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ