ನನ್ನ ತಂದೆ ನನ್ನ ಪರ ಪ್ರಚಾರ ಮಾಡೋದಿಲ್ಲ; ಶಿಸ್ತುಕ್ರಮದ ಪ್ರಶ್ನೆಯೇ ಇಲ್ಲ; ಶರತ್​​ ಬಚ್ಚೇಗೌಡ

ಈ ಹಿಂದೆಯೇ ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ನಿಲ್ಲಲು ತನ್ನ ಪುತ್ರ ಶರತ್‌ ಬಚ್ಚೇಗೌಡರಿಗೆ ಬಿಜೆಪಿ ಟಿಕೆಟ್​​ ನೀಡಬೇಕೆಂದು ಸಂಸದ ಬಚ್ಚೇಗೌಡ ಆಗ್ರಹಿಸಿದ್ದರು

news18-kannada
Updated:November 22, 2019, 3:57 PM IST
ನನ್ನ ತಂದೆ ನನ್ನ ಪರ ಪ್ರಚಾರ ಮಾಡೋದಿಲ್ಲ; ಶಿಸ್ತುಕ್ರಮದ ಪ್ರಶ್ನೆಯೇ ಇಲ್ಲ; ಶರತ್​​ ಬಚ್ಚೇಗೌಡ
ಶರತ್​ ಬಚ್ಚೇಗೌಡ
  • Share this:
ಬೆಂಗಳೂರು(ನ.22): "ನನ್ನ ತಂದೆ ನನ್ನ ಪರವಾಗಿ ಪ್ರಚಾರ ಮಾಡೇ ಇಲ್ಲ ಅಂದಮೇಲೆ ಶಿಸ್ತುಕ್ರಮದ ಪ್ರಶ್ನೆ ಎಲ್ಲಿಂದ ಬಂತು ಎಂದು ಶರತ್ ಬಚ್ಚೇಗೌಡ ಬಿಜೆಪಿಗರಿಗೆ ಪ್ರಶ್ನಿಸಿದ್ದಾರೆ. ಶಿಸ್ತುಕ್ರಮ ಜರುಗಿಸುವಂತ ತಪ್ಪೇನು ಬಚ್ಚೇಗೌಡರು ಮಾಡಿಲ್ಲ. ನನ್ನ ತಂದೆ ಚಿಕ್ಕಬಳ್ಳಾಪುರದ ಕ್ಷೇತ್ರದ ಬಿಜೆಪಿ ಸಂಸದರು, ಉತ್ತಮ ಕೆಲಸ ಮಾಡುತ್ತಿದ್ಧಾರೆ. ನನ್ನ ಪರವಾಗಿ ಪ್ರಚಾರಕ್ಕೆ ಬಂದಿಲ್ಲ. ಇದುವರೆಗೂ ನನ್ನೊಂದಿಗೆ ಕಾಣಿಸಿಕೊಂಡೇ ಇಲ್ಲ. ಹಾಗಾಗಿ ಶರತ್​​ ಬಚ್ಚೇಗೌಡರ ವಿರುದ್ಧ ಶಿಸ್ತುಕ್ರಮದ ಪ್ರಶ್ನೆಯೇ ಇಲ್ಲ ಎಂದು ತಂದೆ ಪರ ಮಗ ಶರತ್​​ ಬಚ್ಚೇಗೌಡ ಬ್ಯಾಟಿಂಗ್​​​ ಮಾಡಿದರು.

ಹೊಸಕೋಟೆಯ ನಂದಗುಡಿ ಗ್ರಾಮದಲ್ಲಿ ಪ್ರಚಾರದ ವೇಳೆ ಸುದ್ದಿಗಾರೊಂದಿಗೆ ಮಾತಾಡಿದ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್​​ ಬಚ್ಚೇಗೌಡ, ನನ್ನ ತಂದೆ ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತಿದ್ದೇನೆ. ಬಚ್ಚೇಗೌಡರ ಎಲ್ಲಾ ಬೆಂಬಲಿಗರು ನನ್ನ ಜೊತೆಯಲ್ಲೇ ಇದ್ದಾರೆ. ನನಗೇ ಬೆಂಬಲ ನೀಡುತ್ತಿದ್ದಾರೆ. ಐಟಿಗೆ ಹೆದರಿ ಎಂಟಿಬಿ ನಾರಗರಾಜ್​​ ಬಿಜೆಪಿ ಸೇರಿದ್ದಾರೆ ಎಂದು ಕುಟುಕಿದರು.

ಒಂದು ಲಕ್ಷಕ್ಕೂ ಹೆಚ್ಚು ಮತ ಪಡೆಯುವ ಗುರಿ ಹೊಂದಿದ್ದೇನೆ. ಕುಕ್ಕರ್ ಕ್ಷೇತ್ರದಲ್ಲಿ ಯಾರು ಹಂಚುತ್ತಿದ್ದಾರೋ ಗೊತ್ತಿಲ್ಲ, ಆದರೆ, ನನ್ನ ಕುಕ್ಕರ್ ಗುರುತಿಗೆ ಮತಹಾಕಿ ಎಂದು ಜನರಲ್ಲಿ ಕೇಳುತ್ತಿದ್ದೇನೆ ಎಂದರು.

ಇದನ್ನೂ ಓದಿ: ಹೊಸಕೋಟೆ ಉಪಚುನಾವಣೆ: ಪುತ್ರ ಶರತ್​​ಗೆ ಬಿಜೆಪಿ ಟಿಕೆಟ್​​ ನೀಡಲೇಬೇಕು ಎಂದು ಸಂಸದ ಬಚ್ಚೇಗೌಡ ಆಗ್ರಹ

ಈ ಹಿಂದೆಯೇ ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ನಿಲ್ಲಲು ತನ್ನ ಪುತ್ರ ಶರತ್‌ ಬಚ್ಚೇಗೌಡರಿಗೆ ಬಿಜೆಪಿ ಟಿಕೆಟ್​​ ನೀಡಬೇಕೆಂದು ಸಂಸದ ಬಚ್ಚೇಗೌಡ ಆಗ್ರಹಿಸಿದ್ದರು. "ಅನರ್ಹ ಶಾಸಕ ಎಂಟಿಬಿ ನಾಗರಾಜ್​​ರನ್ನು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಏನಾದರೂ ಮಾಡಲಿ. ನಿಗಮ ಮಂಡಳಿ ಅಧ್ಯಕ್ಷರನ್ನಾಗಿಸಲೀ, ಬೇಕಾದರೇ ಕರ್ನಾಟಕ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಿ. ಆದರೆ, ಬಿಜೆಪಿ ಟಿಕೆಟ್​​ ಮಾತ್ರ ಶರತ್​​​ ಬಚ್ಚೇಗೌಡಗೆ ಕೊಡಬೇಕು ಎಂದು ಸಂಸದ ಬಚ್ಚೇಗೌಡ ಪಟ್ಟು ಹಿಡಿದಿದ್ದರು.

ನ್ಯೂಸ್​​-18 ಕನ್ನಡದ ಜೊತೆಗೆ ಮಾತಾಡಿದ್ದ ಬಿಜೆಪಿ ಸಂಸದ ಬಚ್ಚೇಗೌಡರು, ಎಂಟಿಬಿ ನಾಗರಾಜ್​​ ಅವರಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ಎಂಎಲ್​​ಸಿ ಮಾಡಿ ಎಂಟಿಬಿ ನಾಗರಾಜ್​​ರನ್ನು ಮಂತ್ರಿ ಮಾಡಿದರೂ ನಮಗೆ ಚಿಂತೆಯಿಲ್ಲ. ನನ್ನ ಚುನಾವಣೆಗೆ ಶರತ್​​ ಬಚ್ಚೇಗೌಡ ಕೆಲಸ ಮಾಡಿದ್ದಾರೆ. ಹೊಸಕೋಟೆಯಲ್ಲೂ ಬಿಜೆಪಿಗಾಗಿ ದುಡಿದಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್​​ ನೀಡಬೇಕು, ಇಲ್ಲದೆ ಹೋದಲ್ಲಿ ಶರತ್​​ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬಹುದು ಎಂದು ಬಿಜೆಪಿಗೆ ಖಡಕ್​​ ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಬಚ್ಚೇಗೌಡರ ವಿರುದ್ಧ ಸ್ಥಳೀಯ ಬಿಜೆಪಿಗರು ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದಾರೆ.
First published: November 22, 2019, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading