• Home
  • »
  • News
  • »
  • state
  • »
  • Chikkamagaluru: ತಾಯಿಯನ್ನ ಕೊಂದು ಹೈಡ್ರಾಮಾ ಮಾಡಿದ್ದ ಮಗ ಅರೆಸ್ಟ್; ಕೊಲೆಯ ರಹಸ್ಯ ಹೇಳಿದ ಮಾಂಗಲ್ಯ ಸರ

Chikkamagaluru: ತಾಯಿಯನ್ನ ಕೊಂದು ಹೈಡ್ರಾಮಾ ಮಾಡಿದ್ದ ಮಗ ಅರೆಸ್ಟ್; ಕೊಲೆಯ ರಹಸ್ಯ ಹೇಳಿದ ಮಾಂಗಲ್ಯ ಸರ

ಆರೋಪಿ ಬಸವರಾಜ್

ಆರೋಪಿ ಬಸವರಾಜ್

ವಿಷಯ ಹೊರಗಡೆ ಬರುತ್ತಿದ್ದಂತೆ ಅಮ್ಮನನ್ನ ಕೊಂದ ಬಸವರಾಜನ ಜೊತೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರಿಂದ ಆ ನಾಲ್ವರನ್ನೂ ಪೊಲೀಸರು ಒದ್ದು ಒಳಗೆ ಹಾಕಿದ್ದಾರೆ.

  • Share this:

ಚಿಕ್ಕಮಗಳೂರು : ಕೇಳಿದ ಕೂಡಲೇ ಹಣ (Money) ನೀಡಲಿಲ್ಲ ಎಂದು ತಾಯಿಯನ್ನೇ (Mother Murder) ಒಲೆ ಊದುವ ಕೊಳವೆಯಿಂದ ಹೆತ್ತ ಮಗನೇ (Son) ಹೊಡೆದು ಸಾಯಿಸಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಹಚ್ಚಡಮನೆ (Hachchadamane, Chikkamagaluru) ಗ್ರಾಮದಲ್ಲಿ ನಡೆದಿದೆ‌. ಹತ್ತೆ ತಾಯಿಯನ್ನೇ ಕೊಂದ ಪಾಪಿ ಮಗ ಬಳಿಕ ದೊಡ್ಡ ಹೈಡ್ರಾಮವನ್ನೇ ಮಾಡಿ ಊರಿನ ಜನರನ್ನೂ ಯಾಮಾರಿಸಿದ್ದಾನೆ. ಜುಲೈ 18ರಂದು ಮನೆಯಲ್ಲಿ ತಾಯಿ ಲತಾ ಹಾಗೂ ಈತನ ಮಧ್ಯೆ ಹಣಕ್ಕಾಗಿ ಗಲಾಟೆ ನಡೆದಿತ್ತು. ಈ ವೇಳೆ ತಾಯಿ ಹಣ ಕೊಡಲಿಲ್ಲ ಎಂದು ಹೊಡೆದು ಸಾಯಿಸಿದ್ದಾನೆ. ಮರುದಿನ ಬೆಳಗ್ಗೆ ಊರಿನ ಜನಕ್ಕೆ ಅಮ್ಮನಿಗೆ ಪಿಡ್ಸ್ ಬರುತ್ತಿತ್ತು. ರಾತ್ರಿ ಕ್ಯಾಂಡಲ್ ಬೆಂಕಿ ಹಾಸಿಗೆಗೆ ತಾಕಿ ಸಾವನ್ನಪ್ಪಿದ್ದಾಳೆ ಎಂದು ಕಥೆ ಹೇಳಿದ್ದಾನೆ. ಊರಿನ ಜನ ನಂಬಿ ಅಂತ್ಯ ಸಂಸ್ಕಾರ ಕೂಡ ಮಾಡಿದ್ದಾರೆ.


ಆದರೆ, ಮೃತಳ ತಂಗಿ ಮಗಳಿಗೆ ಮನೆಯಲ್ಲಿ ತಾಳಿ ನೇತಾಡುತ್ತಿದ್ದನ್ನ ಕಂಡು ಚಿಕ್ಕಮ್ಮ ತಾಳಿ ತೆಗೆಯುತ್ತಿರಲಿಲ್ಲ. ಇದೇಕೆ ಹೀಗೆ ಎಂದು ಅನುಮಾನಗೊಂಡು ಯಾರೋ ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದಳು. ಪೊಲೀಸರು ಮಗನನ್ನ ವಿಚಾರಿಸುತ್ತಿದ್ದಂತೆ ನಾನೇ ಕೊಂದು, ಡಿಸೇಲ್ ಸುರಿದು ಬೆಂಕಿ ಹಚ್ಚಿ ಕೊಂದೆ ಎಂದು ಒಪ್ಪಿಕೊಂಡಿದ್ದಾನೆ.


ವಿಷಯ ಗೊತ್ತಿದ್ರೂ ಸುಮ್ಮನಿದ್ರು ನಾಲ್ಕು ಜನರು


ಹೆತ್ತವಳನ್ನ ಕೊಂದು ಕಾಗಕ್ಕ-ಗೂಬಕ್ಕನ ಕಥೆ ಹೇಳಿದ ಈ ಪಾಪಿ ಪುತ್ರ ಊರಿನ ಜನರನ್ನು ನಂಬಿಸಿದ್ದನು. ರಾತ್ರಿ ಕೊಂದು ಬೆಳಗ್ಗೆ ಬಾಗಿಲಲ್ಲಿ ಕಣ್ಣೀರಾಕುತ್ತಿದ್ದವನನ್ನ ಕಂಡು ಜನ ಅಯ್ಯೋ ಪಾಪ ಅಂತ ಅಂತ್ಯ ಸಂಸ್ಕಾರ ನೇರವೇರಿಸಿದ್ದರು. ಆದ್ರೆ, ಈ ಹಂತಕ ಪುತ್ರ ಮಾಡಿದ ಕೊಲೆ ಊರಿನ ನಾಲ್ವರಿಗೆ ಗೊತ್ತಿತ್ತು. ಆದರೆ, ಅವರೂ ಅದನ್ನ ಯಾರಿಗೂ ಹೇಳಿರಲಿಲ್ಲ. ಹೊರಗಡೆ ಗೊತ್ತಾದರೆ ಅರೆಸ್ಟ್ ಮಾಡಿ ಒಳಗೆ ಹಾಕ್ತಾರೆ ಯಾರಿಗೂ ಹೇಳಬೇಡ ಎಂದಿದ್ದಾರೆ.


ಇದನ್ನೂ ಓದಿ:  Air Pollution: ಬೆಂಗಳೂರಲ್ಲಿ ಹೆಚ್ಚಾಯ್ತು ವಾಯುಮಾಲಿನ್ಯ; BBMPಗೆ ಹೊಸ ಟಾಸ್ಕ್​ ನೀಡಿದ ಕೇಂದ್ರ


ಆರೋಪಿ ಜೊತೆ ನಾಲ್ವರು ಅರೆಸ್ಟ್


ವಿಷಯ ಹೊರಗಡೆ ಬರುತ್ತಿದ್ದಂತೆ ಅಮ್ಮನನ್ನ ಕೊಂದ ಬಸವರಾಜನ ಜೊತೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರಿಂದ ಆ ನಾಲ್ವರನ್ನೂ ಪೊಲೀಸರು ಒದ್ದು ಒಳಗೆ ಹಾಕಿದ್ದಾರೆ.


ಹೊಟ್ಟೆ-ಬಟ್ಟೆ ಕಟ್ಟಿ ಸಾಕಿದ್ದ ಮಗನೇ ಅಮ್ಮನಿಗೆ ವಿಲನ್ ಆಗಿದ್ದು, ಕೇಳಿದ ಕೂಡಲೇ ದುಡ್ಡು ನೀಡಿಲಿಲ್ಲ ಅಂತ ಕೊಂದ ಪಾಪಿ ಪುತ್ರನಿಗೆ ಪೊಲೀಸ್ ಭಾಷೆಯಲ್ಲಿ ಬುದ್ಧಿ ಹೇಳಿರೋ ಪೊಲೀಸರು ಎಲ್ಲರನ್ನೂ ಜೈಲಲ್ಲಿ ಮುದ್ದೆ ಮುರಿಯೋಕೆ ಬಿಟ್ಟಿದ್ದಾರೆ.


ಒಟ್ಟಾರೆ, ಅಮ್ಮ ಅಂದ್ರೆ ಜೀವ-ದೇವ್ರು-ಜೀವನ ಎನ್ನುತ್ತಾರೆ. ಆದ್ರೆ, ಹೆತ್ತು-ಹೊತ್ತು-ಹೊಟ್ಟೆ-ಬಟ್ಟೆ ಕಟ್ಟಿ ಸಾಕಿದ್ದ ಹೆತ್ತ ತಾಯಿಯನ್ನೇ ಕೊಲ್ಲುವ ಮಕ್ಕಳು ಇದ್ದಾರೆ ಅಂದ್ರೆ ಅಂತಹಾ ಮಕ್ಕಳು ಬೇಕಾ ಎಂಬ ಪ್ರಶ್ನೆ ಕೂಡ ಮೂಡುತ್ತೆ. ಅದೂ ಕೇಳಿದ ಕೂಡಲೇ ಹಣ ನೀಡಲಿಲ್ಲ ಎಂಬ ಕಾರಣಕ್ಕೆ.


ಮಕ್ಕಳನ್ನ ಬೆಳೆಸುವಾಗಲೇ ಚೆನ್ನಾಗಿ ಬೆಳೆಸಿದರೆ ಮುಂದೊಂದು ದಿನ ಹೆತ್ತವರಿಗೆ ಇಂತಹಾ ಸ್ಥಿತಿ ಬರುವುದಿಲ್ಲ. ಅದೆಲ್ಲಕ್ಕೂ ಮಿಗಿಲಾಗಿ ಹೆತ್ತವರನ್ನೇ ಕೊಲ್ಲುವ ಮಕ್ಕಳು ಹುಟ್ಟುವುದಕ್ಕಿಂತ ಹುಟ್ಟದಿರುವುದೇ ಒಳ್ಳೆಯದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.


ಪ್ರೇಯಸಿ ರುಂಡದ ಜೊತೆ ಠಾಣೆಗೆ ಬಂದ ಪ್ರಿಯಕರ; ಬೇರೆ ಮದ್ವೆಯಾದ್ರೂ ಯುವತಿ ಮೇಲೆ ಮೋಹ


ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಆತ ಮನೆಯವರ ಒತ್ತಾಯದ ಮೇರೆಗೆ ಮೂರು ತಿಂಗಳ ಹಿಂದೆ ಮದುವೆಯಾಗಿದ್ದನು. ಯುವತಿ ಎಲ್ಲವನ್ನೂ ಮರೆತಯ ತನ್ನ ವಿದ್ಯಾಭ್ಯಾಸದತ್ತ ಗಮನ ನೀಡಿದ್ದಳು. ಇದೀಗ ಆ ಯುವತಿ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ.


ಇದನ್ನೂ ಓದಿ:  Notice To Hospitals: ಭಾನುವಾರ, ಸರ್ಕಾರಿ ರಜೆ ದಿನ ಬಾಗಿಲು ಹಾಕಿದ ಆಸ್ಪತ್ರೆಗಳಿಗೆ ನೋಟಿಸ್


23 ವರ್ಷದ ನಿರ್ಮಲಾ ಕೊಲೆಯಾದ ಯುವತಿ. ಭೋಜರಾಜ್ ಕೊಲೆ ಆರೋಪಿ. ಇಬ್ಬರು ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿಯ ನಿವಾಸಿಗಳು. ನಿರ್ಮಲಾ ಮತ್ತು ಭೋಜರಾಜ್ ಪ್ರೀತಿಸುತ್ತಿದ್ದರು. ಆದ್ರೆ ಬೋಜರಾಜ್ ಮನೆಯವರು ತೋರಿಸಿದ ಯುವತಿಯನ್ನು ಮದುವೆಯಾಗಿದ್ದರಿಂದ ನಿರ್ಮಲಾ ಮೌನವಾಗಿದ್ದರು .

Published by:Mahmadrafik K
First published: