• Home
  • »
  • News
  • »
  • state
  • »
  • Murder: ಪತ್ನಿ ಕರೆದೊಯ್ಯಲು ಮುಂಬೈನಿಂದ ಬಂದ; ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದ, ಕಾರಣ ಏನು ಗೊತ್ತಾ?

Murder: ಪತ್ನಿ ಕರೆದೊಯ್ಯಲು ಮುಂಬೈನಿಂದ ಬಂದ; ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದ, ಕಾರಣ ಏನು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಿಮ್ರಾನ್ ಯಾದಗಿರಿಗೆ ಆಗಮಿಸಿ ತನ್ನ ತಾಯಿ ಮುಂದೆ ನೋವು ತೊಡಿಕೊಳ್ಳುತ್ತಾಳೆ. ಹೆಂಡತಿ ಯಾದಗಿರಿಗೆ ತೆರಳಿದ್ದನ್ನು ಅರಿತ ಗಂಡ ರಫೀಕ್ ಪತ್ನಿಗೆ ಫೋನ್​ ಮಾಡಿ ಬೆದರಿಸುತ್ತಾನೆ. ಬಳಿಕ ಹೆಂಡತಿ ಕರೆದೊಯ್ಯಲು ಬಂದು ಅತ್ತೆ ಜೊತೆ ಜಗಳವಾಡಿದ್ದಾನೆ.

  • Share this:

ಯಾದಗಿರಿ (ಜೂ 4):  ಅಳಿಯ ದೂರದ ಮಹಾರಾಷ್ಟ್ರದ (Maharashtra) ಮುಂಬೈನಿಂದ ಅತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದ, ಅಳಿಯ ಬಂದಿದ್ದಾನೆಂದು ತಿಳಿದು ಅತ್ತೆ ಹಾಗೂ ಆಕೆಯ ಕುಟುಂಬಸ್ಥರು‌ (Family) ಸಂತೋಷವಾಗಿದ್ದರು. ಆದರೆ, ಕಿರಾತಕ ಅಳಿಯ ಮಾಡಿದ್ದು ಮನೆ ಹಾಳು ಮಾಡುವ ಕೆಲಸ. ಅತ್ತೆ ಜೊತೆ ಜಗಳವಾಡಿ  ಹೆಣ್ಣುಕೊಟ್ಟ ಅತ್ತೆಗೆ ಚಾಕು ಇರಿದು ಕೊಲೆ (Murder) ಮಾಡಿ ಪರಾರಿಯಾಗಿದ್ದಾನೆ. ಯಾದಗಿರಿ ನಗರದಲ್ಲಿ ಬೆಳ್ಳಂ ಬೆಳಿಗ್ಗೆ ಈ ಘಟನೆ ಜರುಗಿದ್ದು ಯಾದಗಿರಿ (Yadagiri) ನಗರದ ಜನ‌ ಬೆಚ್ಚಿ ಬಿದ್ದಿದ್ದಾರೆ.


ಹೆಂಡತಿ ಜೊತೆ ನಿತ್ಯ ಜಗಳ


ಬೆಳಿಗ್ಗೆ ಎದ್ದು ಎಂದಿನಂತೆ ರಶೀದಾ ಬೇಗಂ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದಳು. ಯಾದಗಿರಿ ನಗರದ ಚಟಾನ್ ಗಲ್ಲಿಯ ನಿವಾಸಿ ರಶೀದಾ ಬೇಗಂ ಬೀಡಿ ಕಟ್ಟುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದಳು. ರಶೀದಾಬೇಗಂ 2 ಮದುವೆಯಾಗಿದ್ದಳು.


ಮೊದಲನೇ ಪತ್ನಿ ನಿಶಾರ್ ಅಹ್ಮದ್ ನಿಧನ ಹೊಂದಿದ್ದು ,ಈ ದಂಪತಿಗಳಿಗೆ ಸಮ್ರಿನ್ ಎಂಬ ಮಗಳಿದ್ದು  8 ವರ್ಷದ ಹಿಂದೆ ಮಹಾರಾಷ್ಟ್ರದ ಮುಂಬೈನ ರಫೀಕ್ ಜೊತೆ ವಿವಾಹ ಮಾಡಲಾಗಿತ್ತು. ಕಳೆದ 2020 ರಿಂದ ಸಿಮ್ರಾನ್ ಹಾಗೂ ರಫೀಕ್ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು. ಮುಂಬೈನಲ್ಲಿ ಮೊಬೈಲ್ ದುರಸ್ತಿ ಕಾರ್ಯ ಮಾಡುವ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದನು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.


ಕುಡಿದು ಗಲಾಟೆ, ಮೈತುಂಬಾ ಸಾಲ


ರಫೀಕ್ ನಿತ್ಯವೂ ಮದ್ಯ ಸೇವಿಸುವ ಚಟ ಹಾಕಿಕೊಂಡಿದ್ದನು ಕುಡಿತ ಚಟಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದನು. ಈ ವೇಳೆ ಸಾಲ ತೀರಿಸಲು. ಸಾಲಗಾರರು ಕಾಟ ಕೊಡುತ್ತಿದ್ದು ಸಾಲಗಾರರ ಹತ್ತಿರ ಹೋಗಿ ಮಲಗು ಎಂದು ಹೆಂಡತಿಗೆ ಗಂಡ ರಫೀಕ್  ಪೀಡಿಸುತ್ತಿದ್ದನು. ಇದರಿಂದ ಕೋಪಗೊಂಡ ಪತ್ನಿ ಕಳೆದ ಒಂದು ವರ್ಷದ ಹಿಂದೆ ಪತಿಯನ್ನು ಬಿಟ್ಟು ಬಂದಿದ್ದಳು. ಹಿರಿಯರು ನ್ಯಾಯ ಪಂಚಾಯತ್ ಮಾಡಿದ ನಂತರ ವಾಪಸ್ ಗಂಡನ ಹತ್ತಿರ ತೆರಳಿದಳು. ಆದರೆ, ಪತಿರಾಯ ಪತ್ನಿಗೆ ಕಿರುಕುಳ ಕೊಡುವದನ್ನು ಬಿಡಲಿಲ್ಲ.


ಇದನ್ನೂ ಓದಿ: Covid19: ದಿನೇ ದಿನೇ ಹೆಚ್ಚುತ್ತಿದೆ ಕೊರೊನಾ ಅಬ್ಬರ; ಕರ್ನಾಟಕ ಸೇರಿ 5 ರಾಜ್ಯಕ್ಕೆ ಎಚ್ಚರಿಕೆ ಪತ್ರ


ಪತ್ನಿಗೆ  ನಿರಂತರ ಕಿರುಕುಳ 


ಕಳೆದ 20 ದಿನಗಳ ಹಿಂದೆ ದಂಪತಿಗಳ ನಡುವೆ ಜಗಳವಾಗಿದ್ದು, ಪತಿ ನಡೆ ವಿರುದ್ಧ ಅಕ್ರೋಶಗೊಂಡು ಜಗಳ ಮಾಡಿಕೊಂಡು 20 ದಿನಗಳ ಹಿಂದೆ ವಾಪಸ್ ತಮ್ಮ ಊರಾದ ಯಾದಗಿರಿಗೆ ಬಂದಿದ್ದಳು.
ಸಿಮ್ರಾನ್ ಯಾದಗಿರಿಗೆ ಆಗಮಿಸಿ ತನ್ನ ತಾಯಿ ಮುಂದೆ ನೋವು ತೊಡಿಕೊಳ್ಳುತ್ತಾಳೆ. ಹೆಂಡತಿ ಯಾದಗಿರಿಗೆ ತೆರಳಿದ್ದನ್ನು ಅರಿತ ಗಂಡ ರಫೀಕ್ ಪತ್ನಿಗೆ ಫೋನ್​ ಮಾಡಿ ಬೆದರಿಸುತ್ತಾನೆ. ಈ ವೇಳೆ ಜೀವ ಬೆದರಿಕೆ ಹಾಕುತ್ತಾನಂತೆ. ಗಂಡ ಬರುವ ಮಾಹಿತಿ ಅರಿತು ಸಿಮ್ರಾನ್ ತಮ್ಮ ಸಂಬಂಧಿಗಳ ಊರಿಗೆ ತೆರಳುತ್ತಾಳೆ. ಮುಂಬೈನಿಂದ ಕೊಲೆ ಮಾಡುವ ಉದ್ದೇಶದಿಂದ ರಫೀಕ್ ಟ್ರೈನ್ ಮೂಲಕ ಆಗಮಿಸಿದನು.


ಇದನ್ನೂ ಓದಿ: Explained: ಏನಿದು PSI Exam Scam? ಇದರ ಆಳ, ಅಗಲ ಏನು? ಈವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ


ಅತ್ತೆ ಜೊತೆ ಜಗಳ ತೆಗೆದ 


ಪತ್ನಿ ಇರುವ ಮಾಹಿತಿ ಅರಿತು ಯಾದಗಿರಿ ನಗರದ ಚಟಾನ್ ಗಲ್ಲಿಯಲ್ಲಿರುವ ಅತ್ತೆ ಮನೆಯಾದ ರಶೀದಾ ಬೇಗಂ ಅವರ ಮನೆಗೆ ಚಾಕು ಸಹಿತ ತೆಗೆದುಕೊಂಡು ಹೋಗುತ್ತಾನೆ. ಈ ವೇಳೆ ಹೆಂಡತಿಗೆ ನನ್ನ ಹತ್ತಿರ  ಯಾಕೆ ಕಳುಹಿಸಿಲ್ಲ‌ ಸಾಲ ಕಟ್ಟಲು ಹಣ ಯಾಕೆ ನೀಡಿಲ್ಲವೆಂದು ಅತ್ತೆ ಜೊತೆ ಜಗಳ ಮಾಡುತ್ತಾನೆ.


ಅತ್ತೆಗೆ ಚಾಕುವಿನಿಂದ ಇರಿದು ಕೊಂದ


ಹಿಂಬಾಗಿಲ ಮುಲಕ ಎಸ್ಕೇಪ್ ಆಗಿ ಬಟ್ಟೆ ಕಟ್ಟಿಕೊಂಡು ಬಂದು ಅತ್ತೆಯ ಹೊಟ್ಟೆಗೆ ನಾಲ್ಕು ಬಾರಿ ಚಾಕು ಇರಿದು ಅತ್ತೆ ಕೊಲೆ ಮಾಡುತ್ತಾನೆ.ಹಿಂಭಾಗಿಲಿನ ಮೂಲಕ ಕೊಲೆ ಮಾಡಿ ಅಳಿಯ ಎಸ್ಕೆಪ್ ಆಗುತ್ತಾನೆ.ಕೊಲೆಯಾದ ರಶೀದಾಬೇಗಂ ಅವರ ಸಹೋದರಿಗೆ ಕೂಡ ಹಲ್ಲೆ ನಡೆಸಲು ಬೇದರಿಕೆ ಹಾಕುತ್ತಾನೆ.
ಈ ವೇಳೆ ಘಟನಾ ಸ್ಥಳಕ್ಕೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Published by:Pavana HS
First published: