ಬೆಂಗಳೂರು: ಮಗಳನ್ನು ಕೊಟ್ಟು ಮದುವೆ (Marriage) ಮಾಡಿಕೊಟ್ಟಿದ್ದ ಅತ್ತೆಯನ್ನೇ ಅಳಿಯ ಕೊಚ್ಚಿ ಕೊಲೆಗೈದಿರುವ ಘಟನೆ ಕೆಂಗೇರಿಯ (Kengeri) ನಾಗದೇವನಹಳ್ಳಿಯಲ್ಲಿ ನಡೆದಿದೆ. ಚಾಕುವಿನಿಂದ ಕುತ್ತಿಗೆ ಕೊಯ್ದು ಮಹಿಳೆಯನ್ನು (Women) ಬರ್ಬರವಾಗಿ ಕೊಲೆಗೈದಿದ್ದು, ಮೃತ ಮಹಿಳೆಯನ್ನು ಏಳಲ್ ಅರಸಿ (48) ಎಂದು ಗುರುತಿಸಲಾಗಿದೆ. ಏಳಲ್ ಅರಸಿ ಅಳಿಯ ದಿವಾಕರ್ ಕೊಲೆಗೈದು ಪರಾರಿಯಾಗಿರುವ ಆರೋಪಿಯಾಗಿದ್ದಾನೆ. ಕೊಲೆಯಾಗಿರುವ ಏಳಲ್ ಅರಸಿ ಮಗಳು ತನ್ನ ಮಗನೊಂದಿಗೆ (Son) ಕೆಲ ದಿನಗಳ ಹಿಂದೆ ತವರು ಮನೆಗೆ ಬಂದಿದ್ದರಂತೆ. ಏಳಲ್ ಅರಸಿ ಕೆಜಿಎಫ್ನಲ್ಲಿ (KGF) ವಾಸಿಸುತ್ತಿದ್ದರು. ಆದರೆ ಈ ನಡುವೆ ಕೆಜಿಎಫ್ನಲ್ಲಿದ್ದ ಅತ್ತೆಯ ಮನೆಗೆ ಆಗಮಿಸಿದ್ದ ಅಳಿಯ ದಿವಾಕರ್, ಮನೆಯಲ್ಲಿದ್ದ ಅತ್ತೆ ಹಾಗೂ ಹೆಂಡತಿಗೆ ಯಾವುದೇ ಮಾಹಿತಿ ನೀಡಿದೆ ಕರೆದುಕೊಂಡು ವಾಪಸ್ ಆಗಿದ್ದನಂತೆ. ಕೆಜಿಎಫ್ನಿಂದ ಬಂದಿದ್ದ ದಿವಾಕರ್ ನೇರ ಅಲ್ಲಿಂದ ಬೆಂಗಳೂರಿನ (Bengaluru) ಕೆಂಗೇರಿಯ ತನ್ನ ತಂಗಿ ಮನೆಗೆ ಬಂದಿದ್ದನಂತೆ.
ಇಂದು ಮಗುವನ್ನು ವಾಪಸ್ ಕರೆದುಕೊಂಡು ಹೋಗಲು ಏಳಲ್ ಅರಸಿ ಮಗಳನ್ನು ಕರೆದುಕೊಂಡು ಬಂದು ಕೆಂಗೇರಿಗೆ ಆಗಮಿಸಿದ್ದರು. ಈ ವೇಳೆ ಅಳಿಯ ದಿವಾಕರ್ ಹಾಗೂ ಏಳಲ್ ಅರಸಿ ಜೊತೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಏಳಲ್ ಅರಸಿ ಕುತ್ತಿಗೆಗೆ ಚಾಕುವಿನಿಂದ ಇರಿದ್ದಾನೆ.
ಕೂಡಲೇ ಮಹಿಳೆಯ ಕುತ್ತಿಗೆ ಸೀಳಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ಏಳಲ್ ಅರಸಿ ಅವರೊಂದಿಗೆ ಬಂದಿದ್ದ ಚಿಕ್ಕಮಗಳು ಸಿಂಧೂ ಅರಸಿ ಎಂಬ ಯುವತಿಗೂ ಗಾಯವಾಗಿದೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಮಗು ಸಾವು
ಬಿಲ್ಡಿಂಗ್ ಕಾಮಗಾರಿಗೆ ಬಂದಿದ್ದ ದಂಪತಿಯ ಮಗು ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸುಲ್ತಾನ್ ಪೇಟೆ ಬಳಿ ನಡೆದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಮೃತ ಬಾಲಕಿಯನ್ನು 6 ವರ್ಷದ ಮಹೇಶ್ವರಿ (6) ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಆಟವಾಡುತ್ತಿದ್ದ ಬಾಲಕಿ ಲಿಫ್ಟ್ಗೆ ತೋಡಿದ್ದ ಗುಂಡಿಗೆ ಬಿದ್ದ ಸಾವನ್ನಪ್ಪಿದೆ. ಐದು ಅಂತಸ್ತಿನ ಬಿಲ್ಡಿಂಗ್ ಕಾಮಗಾರಿ ನಡೆಯುವ ವೇಳೆ ದುರ್ಘಟನೆ ನಡೆದಿದ್ದು, ಗುಂಡಿಯಲ್ಲಿ ಮಗುವಿನ ಶವ ತೇಲುತ್ತಿದ್ದನ್ನು ಗಮನಿಸಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸ್ಥಳಕ್ಕೆ ಕೆ.ಆರ್ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಬಾಲಕಿ ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದಿದ್ದ ಕಮಲಮ್ಮ, ಮಲ್ಲಪ್ಪ ದಂಪತಿಯ ಎರಡನೇ ಮಗು ಎಂದು ತಿಳಿದು ಬಂದಿದೆ. ಯಲಹಂಕದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಲ್ಲಪ್ಪ ದಂಪತಿ, ನಿನ್ನೆ ಕಣ್ಣಿನ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ಸಂಬಂಧಿಕರು ಅಲ್ಲೇ ಕೆಲಸ ಮಾಡುತ್ತಿದ್ದ ಕಾರಣ ಅಲ್ಲಿಯೇ ಉಳಿದುಕೊಂಡಿದ್ದರು.
ಈ ಬಗ್ಗೆ ಮಾತನಾಡಿರುವ ಮಗು ತಾಯಿ ಕಮಲಮ್ಮ, ನಿನ್ನೆ ಸಂಜೆ ನಾನು ನನ್ನ ಇನ್ನೊಂದು ಮಗುವಿಗೆ ಹಾಲು ಕೊಡುತ್ತಿದೆ. ಈ ವೇಳೆ ಮಹೇಶ್ವರಿ ಹೊರಗೆ ಆಟವಾಡುತ್ತಿದ್ದಳು. ಆದರೆ ಕೆಲ ಸಮಯದ ಬಂದು ನೋಡಿದಾಗ ಮಗು ಕಾಣಲಿಲ್ಲ. ಕೂಡಲೇ ಸುತ್ತಾಮುತ್ತಾ ಹುಡುಕಾಟ ನಡೆಸಿದ ವೇಳೆ ಮಗುವಿನ ತಲೆ ನಾಲ್ಕು ಅಡಿ ಅಳದ ಹಳ್ಳದಲ್ಲಿ ಕಂಡು ಬಂತು. ಕೂಡಲೇ ಮಗುವನ್ನು ಮೇಲಕೆತ್ತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದೇವು. ಆದರೆ ಆ ವೇಳೆ ಮಗು ಸಾವನ್ನಪ್ಪಿತ್ತು ಎಂದಿದ್ದಾರೆ.
ಇನ್ನು, ಘಟನೆ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಸ್ಥಳದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ಲಿಫ್ಟ್ ಮಾಡಲು ಗುಂಡಿ ತೆಗೆಯಲಾಗಿದೆ. ಪ್ರಕರಣದಲ್ಲಿ ಗುತ್ತಿಗೆದಾರ, ಇಂಜಿನಿಯರ್ ಮತ್ತು ಮಾಲೀಕರ ಮೇಲೆ ದೂರು ನೀಡಿದ್ದಾರೆ. ಮಗು ಆಟವಾಡುತ್ತಾ ಹೋಗಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ