HOME » NEWS » State » SOMEONE MISINTERPRETED TO MP TEJASWI SURYA ON BED BLOCKING ISSUE SAYS UDAY GARUDACHAR RHHSN

ಬೆಡ್ ಬ್ಲಾಕಿಂಗ್; ಸಂಸದ ತೇಜಸ್ವಿ ಸೂರ್ಯರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ; ಶಾಸಕ ಉದಯ್ ಗರುಡಾಚಾರ್

ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್​ ವಾರ್​ ರೂಂ ಅಧಿಕಾರಿಗಳು ಪ್ರಭಾವಿಗಳು ಸೇರಿದಂತೆ ಯಾರ್ಯಾರದ್ದೋ ಹೆಸರಿನಲ್ಲಿ ಸುಮಾರು 4,000ಕ್ಕೂ ಹೆಚ್ಚು ಬೆಡ್​ಗಳನ್ನು ಬುಕ್​ ಮಾಡಿದ್ದು, ಇವುಗಳನ್ನು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇವರೆಲ್ಲಾ ಐಸಿಯು, ವೆಂಟಿಲೇಟರ್​ ಆಕ್ಸಿಜನ್​ ಬೆಡ್​ಗಳನ್ನು ಬ್ಲಾಕ್​ ಮಾಡಿಕೊಳ್ಳುತ್ತಿದ್ದರು. ವಾರ್​ ರೂಂನ ಅಧಿಕಾರಿಗಳ ನಿರ್ದೇಶನದಂತೆ ಹೊರಗಿರುವ ದಲ್ಲಾಳಿಗಳು ಈ ಕಾರ್ಯ ಮಾಡುತ್ತಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

news18-kannada
Updated:May 7, 2021, 2:49 PM IST
ಬೆಡ್ ಬ್ಲಾಕಿಂಗ್; ಸಂಸದ ತೇಜಸ್ವಿ ಸೂರ್ಯರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ; ಶಾಸಕ ಉದಯ್ ಗರುಡಾಚಾರ್
ಉದಯ್ ಗರುಡಾಚಾರ್ ಅವರ ಸಂಗ್ರಹ ಚಿತ್ರ
  • Share this:
ಬೆಂಗಳೂರು: ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಯಾವ ಹಿನ್ನೆಲೆಯಲ್ಲಿ ಒಂದು ಕೋಮಿನ ಸದಸ್ಯರ ಹೆಸರು ಹೇಳಿದರೋ ನನಗೆ‌ ಗೊತ್ತಿಲ್ಲ. ನಮ್ಮ‌‌ ಸಂಸದರು ಕರೆದಿದ್ದಕ್ಕೆ ನಾನು ಜೊತೆಲಿ ಹೋಗಿದ್ದೆ. ಚಿಕ್ಕ ವಯಸ್ಸಿನಿಂದ ನಾನು ತೇಜಸ್ವಿಯನ್ನು ನೋಡಿದ್ದೇನೆ. ಸಂಸದರಿಗೆ ತಪ್ಪು ಮಾಹಿತಿ ಬಂದಿರಬಹುದು. ಒಂದು ಸಮುದಾಯವನ್ನು ಪರಿಗಣಿಸಿ ಅವರು ಮಾತನಾಡಿಲ್ಲ. ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳುವ ಮೂಲಕ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದಾರೆ.

ಈ ವಿಷಯವಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಉದಯ್ ಗರುಡಾಚಾರ್ ಅವರು, ಚಿಕ್ಕಪೇಟೆ ಕ್ಷೇತ್ರದಲ್ಲಿ 60 ಸಾವಿರ ಮುಸ್ಲಿಮರು ಇದ್ದಾರೆ. 32 ಮಸೀದಿಗಳು ಇವೆ. ನಮ್ಮ ಕ್ಷೇತ್ರದಲ್ಲಿ ಹಿಂದು -ಮುಸ್ಲಿಂ ಎಂಬ ಭೇದ ಭಾವ ಇಲ್ಲ. ಈ ಬಗ್ಗೆ ಆನಂತರ ತೇಜಸ್ವಿ ಜೊತೆ ಮಾತಾಡಿದ್ದೇನೆ. ಒಂದು ಕೋಮಿನ ವಿರುದ್ದ ಬೇಕೆಂದು ಮಾತಾಡಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿ ಎಂದು ನಾನು ಹೇಳಿದ್ದೇನೆ ಎಂದರು.

ಬೆಡ್ ಬ್ಲಾಕಿಂಗ್ ನಲ್ಲಿ ಶಾಸಕ ಸತೀಶ್ ರೆಡ್ಡಿ ಭಾಗಿ ವಿಚಾರವಾಗಿ ಪ್ರತಿಕ್ರಿಯಿಸಿದ ಉದಯ್ ಗುರುಡಾಚಾರ್ ಅವರು, ಸತೀಶ್ ರೆಡ್ಡಿ ನನಗೆ ಉತ್ತಮ ಸ್ನೇಹಿತರು. ಅವರಿಗೆ ತುಂಬಾ ಜನ ಮುಸ್ಲಿಂ ಸ್ನೇಹಿತರಿದ್ದಾರೆ. ಐಎಎಸ್ ಅಧಿಕಾರಿಗಳನ್ನು ನಾವು ಗೌರವಿಸುತ್ತೇವೆ. ಸತೀಶ್ ರೆಡ್ಡಿ ಅವರ ಬೆಂಬಲಿಗರು ಗಲಾಟೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಇಲ್ಲ. ಅದನ್ನು ನಾನು ನೋಡಿಲ್ಲ. ಸತೀಶ್ ರೆಡ್ಡಿ ಅಂತಹವರಲ್ಲ ಎಂದು ಹೇಳಿದರು.

ಇದನ್ನು ಓದಿ: ತೇಜಸ್ವಿ ಸೂರ್ಯ ಉಲ್ಲೇಖಿಸಿರುವ 17 ಮಂದಿ ಮುಸ್ಲಿಮರಿಗೆ ನಾನು ಕೆಲಸ ಕೊಡ್ತೀನಿ: ಶಾಸಕ ಜಮೀರ್

ಕರ್ನಾಟಕದ ಕೊರೋನಾ ಹಬ್ ಆಗಿ ಬದಲಾಗುತ್ತಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದು, ಕೆಲವರು ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ಈ ನಡುವೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆ ಮಾತನಾಡಿದ್ದರು. ಈ ಪ್ರಕರಣದ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಸಿಸಿಬಿ ತನಿಖೆಗೆ ಆದೇಶಿಸಿದ್ದಾರೆ.
Youtube Video

ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್​ ವಾರ್​ ರೂಂ ಅಧಿಕಾರಿಗಳು ಪ್ರಭಾವಿಗಳು ಸೇರಿದಂತೆ ಯಾರ್ಯಾರದ್ದೋ ಹೆಸರಿನಲ್ಲಿ ಸುಮಾರು 4,000ಕ್ಕೂ ಹೆಚ್ಚು ಬೆಡ್​ಗಳನ್ನು ಬುಕ್​ ಮಾಡಿದ್ದು, ಇವುಗಳನ್ನು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇವರೆಲ್ಲಾ ಐಸಿಯು, ವೆಂಟಿಲೇಟರ್​ ಆಕ್ಸಿಜನ್​ ಬೆಡ್​ಗಳನ್ನು ಬ್ಲಾಕ್​ ಮಾಡಿಕೊಳ್ಳುತ್ತಿದ್ದರು. ವಾರ್​ ರೂಂನ ಅಧಿಕಾರಿಗಳ ನಿರ್ದೇಶನದಂತೆ ಹೊರಗಿರುವ ದಲ್ಲಾಳಿಗಳು ಈ ಕಾರ್ಯ ಮಾಡುತ್ತಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು. ಇದರ ಜೊತೆಗೆ ಬೆಡ್​​ ಬ್ಲಾಕಿಂಗ್​ ಪ್ರಕರಣದಲ್ಲಿ 17 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರನ್ನು ಮಾತ್ರ ಉಲ್ಲೇಖಿಸಿರುವುದ್ದರು. ಈ ವಿಷಯವಾಗಿ ಕಾಂಗ್ರೆಸ್ ಮುಖಂಡರು ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದಿದ್ದರು.
Published by: HR Ramesh
First published: May 7, 2021, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories