Bengaluru: ಕದ್ದ ವಾಹನಕ್ಕೆ MLC ಭೋಜೆಗೌಡರ ಕಾರ್ ನಂಬರ್ ಹಾಕಿ ಮಾರಾಟಕ್ಕೆ ಯತ್ನ

ಕದ್ದ ಕಾರ್ ಮಾರಾಟಕ್ಕೆ ಯತ್ನ

ಕದ್ದ ಕಾರ್ ಮಾರಾಟಕ್ಕೆ ಯತ್ನ

ಭೋಜೆಗೌಡರಿಗೆ ಕರೆ ಮಾಡಿದ ಮಾದೇಶ್, ಕಾರ್ ಎಲ್ಲಿದೆ ಎಂದು ಕೇಳಿದ್ದಾರೆ. ಕಾರ್ ಮನೆ ಮುಂದೆ ಪಾರ್ಕ್ ಮಾಡಲಾಗಿದೆ ಎಂದು ಭೋಜೆಗೌಡರು ಹೇಳಿದ್ದಾರೆ. ಕೂಡಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.

  • Share this:

ಬೆಂಗಳೂರು: ರಾಜಧಾನಿಯಲ್ಲಿ ಕಳ್ಳರು (Thieves) ಯಾವಾಗ ಕೈ ಚಳಕ ತೋರಿಸುತ್ತಾರೆ ಅನ್ನೋದು ಗೊತ್ತಿರಲ್ಲ. ಹಾಗಾಗಿ ನಮ್ಮ ಭದ್ರತೆಯಲ್ಲಿ ನಾವಿರಬೇಕು. ಕೆಲವೊಮ್ಮೆ ಮನೆ, ಹೋಟೆಲ್, ಕಚೇರಿ ಮುಂದೆ ನಿಲ್ಲಿಸಿದ್ದ ವಾಹನಗಳು (Vehicles Theft) ದಿಢೀರ್ ಅಂತ ನಾಪತ್ತೆಯಾಗುತ್ತವೆ. ಕ್ಷಣಾರ್ಧದಲ್ಲಿ ಬಿಡಿ ಭಾಗಗಳಾಗಿ (Vehicle Parts Sale) ಮಾರಾಟ ಸಹ ಆಗಿರುತ್ತವೆ. ಎಂಎಲ್​ಸಿ ಭೋಜೆಗೌಡರ (MLC Bhojegowda) ವಾಹನ ಸಂಖ್ಯೆಯನ್ನು ಮತ್ತೊಂದು ಕಾರ್​ಗೆ ಹಾಕಿ ಮಾರಾಟಕ್ಕೆ ಮುಂದಾಗಿದ್ದ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಮಾರಾಟಕ್ಕೆ ವಾಹನಗಳನ್ನಿರಿಸುವ ಶೋರೂಮ್ ನಲ್ಲಿ ಶಾಸಕರ ಕಾರ್ ಸಂಖ್ಯೆ ನೋಡಿ ಅವರ ಆಪ್ತ ಸಹಾಯಕ ಆಶ್ಚರ್ಯಚಕಿತಗೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಶಾಸಕರ ಆಪ್ತ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.


ಎಂಎಲ್​ಸಿ ಭೋಜೆಗೌಡರ ಪಿಎ ಮಾದೇಶ್​ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಶೋರೂಂನಲ್ಲಿ KA18 Z-5977 ಸಂಖ್ಯೆಯ ಇನ್ನೋವಾ ಕ್ರಿಸ್ಟಾ ಕಾರ್ ಕಾಣಿಸಿದೆ. ಸಮೀಪಕ್ಕೆ ತೆರಳಿ ನೋಡಿದಾಗ ಶಾಸಕರ ಕಾರ್ ಸಂಖ್ಯೆ ಎಂಬುವುದು ಗೊತ್ತಾಗಿದೆ. ಆರಂಭದಲ್ಲಿ ಭೋಜೆಗೌಡರ ಕಾರ್ ಅಂತ ಸಮೀಪಕ್ಕೆ ತೆರಳಿ ವಿಚಾರಿಸಿದಾಗ ಇದು ನಕಲಿ ನಂಬರ್ ಅನ್ನೋ ವಿಷಯ ಗೊತ್ತಾಗಿದೆ.


ನಂಬರ್ ಚೇಂಜ್ ಮಾಡಿ ಕಾರ್ ಮಾರಾಟಕ್ಕೆ ಯತ್ನ


ಭೋಜೆಗೌಡರಿಗೆ ಕರೆ ಮಾಡಿದ ಮಾದೇಶ್, ಕಾರ್ ಎಲ್ಲಿದೆ ಎಂದು ಕೇಳಿದ್ದಾರೆ. ಕಾರ್ ಮನೆ ಮುಂದೆ ಪಾರ್ಕ್ ಮಾಡಲಾಗಿದೆ ಎಂದು ಭೋಜೆಗೌಡರು ಹೇಳಿದ್ದಾರೆ. ಕೂಡಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.


ಇದೀಗ ಬೇರೆ ಕಾರುಗಳಿಗೆ ನಂಬರ್ ಚೇಂಜ್ ಮಾಡಿ ಮಾರಾಟ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿರಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ


ಮೊಬೈಲ್ ಟವರ್ ಗೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಲಿಗೆ, ಮೆಣಸಿನಹಾಡ್ಯದ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ಸುಮಾರು 70 ಕ್ಕೂ ಅಧಿಕ ಮನೆಗಳಿದ್ದು, ದಶಕಗಳಿಂದ ಮೊಬೈಲ್ ನೆಟ್ ವರ್ಕ್ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಈ ಗ್ರಾಮದ ಜನರು ನೆಟ್​ವರ್ಕ್​ಗಾಗಿ ಪರದಾಟ ನಡೆಸುತ್ತಿದ್ದಾರೆ.


ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಓಟಿಪಿ ಬರದೇ ವೋಟಿಲ್ಲ ಎಂಬ ಅಭಿಯಾನವನ್ನು ಗ್ರಾಮಸ್ಥರು ಆರಂಭಿಸಿದ್ದಾರೆ. ಭರವಸೆ ಬೇಕಿಲ್ಲ, ಮೊಬೈಲ್ ಟವರ್ ಬೇಕು ಎಂದು ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.


ಇದನ್ನೂ ಓದಿ: BS Yediyurappa: 'ಬದುಕಿನ ಕೊನೆಯುಸಿರು ಇರುವವರೆಗೂ'; ನನ್ನ ಕೊನೆಯ ಸದನ ಎಂದು ಭಾವುಕರಾದ ಮಾಜಿ ಸಿಎಂ ಬಿಎಸ್​ವೈ


ಇಂದು ದೆಹಲಿಗೆ ಸಿಎಂ


ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ (Amrith Mahotsava) ಪ್ರಯುಕ್ತ ಇಂದು ದೆಹಲಿಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai)ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಿಎಂ ಹೆಚ್ಎಎಲ್ ವಿಮಾನ ನಿಲ್ದಾಣದಿಂದ (HAL Airport) ದೆಹಲಿಗೆ ತೆರಳಲಿದ್ದಾರೆ. ಇನ್ನು ಬಾರಿಸು ಕನ್ನಡ ಡಿಂಡಿಮವ ಮಹೋತ್ಸವವನ್ನ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ.




ಅಮೃತ ಮಹೋತ್ಸವ ಕಾರ್ಯಕ್ರಮ ಬಳಿಕ ಸಿಎಂ ರಾತ್ರಿ 7 ಗಂಟೆಗೆ ಹೊರಟು ರಾತ್ರಿ 9.30ಕ್ಕೆ ಹುಬ್ಬಳ್ಳಿ ಆಗಮಿಸಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.


ಯಾದಗಿರಿ: 5 ಲಕ್ಷ ರೂ. ಪರಿಹಾರ


ಯಾದಗಿರಿಯ ಅನಪುರದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣಕ್ಕೆ ಸಂಬಂಧ ಮೃತರ ಕುಟಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.


ಕಲುಷಿತ ನೀರು ಸೇವಿಸಿ ಸಾವಿತ್ರಮ್ಮ, ಸಾಯಮ್ಮ, ನರಸಮ್ಮ ಎಂಬವರು ಮೃತಪಟ್ಟಿದ್ರು.. ಈ ಹಿನ್ನೆಲೆ ಸರ್ಕಾರಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಶಾಸಕ ನಾಗನಗೌಡ ಕಂದಕೂರು ಅಧಿವೇಶನದಲ್ಲಿ ಆಗ್ರಹಿಸಿದ್ದರು. ಆದ್ರೆ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿದೆ.

Published by:Mahmadrafik K
First published: