ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಕೊಲೆಗೆ ಸಂಚು

ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಕೊಲೆಗೆ ಸಂಚು ರೂಪಿಸುತ್ತಿರುವ ಬಗ್ಗೆ ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದು ಎಚ್ಚರಿಕೆಯಿಂದ ಇರುವುಂತೆ ಸೂಚನೆ ನೀಡಿದೆ

Seema.R | news18
Updated:January 10, 2019, 5:35 PM IST
ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಕೊಲೆಗೆ ಸಂಚು
ಕಲ್ಲಡ್ಕ ಪ್ರಭಾಕರ್ ಭಟ್
Seema.R | news18
Updated: January 10, 2019, 5:35 PM IST
ಪುತ್ತೂರು (ಜ.10):  ಆರ್​ ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಕೊಲೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಸ್ಪೋಟಕ ಮಾಹಿತಿ ಮಂಗಳೂರು ಗುಪ್ತಚರ ಇಲಾಖೆಗೆ ಸಿಕ್ಕಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

ಹಿಂದೂ ಪರ ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಕಲ್ಲಡ್ಕ ಪ್ರಭಾಕರ್​ ಕೊಲ್ಲಲು ಸಂಚು ರೂಪಿಸುತ್ತಿರುವ ಹಿನ್ನಲೆ ಇಂದು ಅವರು ಬೆಂಗಳೂರಿಗೆ ಬರುವ ಮಾರ್ಗವನ್ನು ಬದಲಾಯಿಸಲಾಗಿದೆ. ರಸ್ತೆ ಮಾರ್ಗದಲ್ಲಿ ಯಾವುದೇ ಕಾರಣಕ್ಕೂ ತೆರಳಬೇಡಿ ಎಂದು ಅವರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಇಂದು ವಿಮಾನದ ಮೂಲಕ ಪ್ರಯಾಣ ಕೈಗೊಂಡಿದ್ದಾರೆ.

ಯಾವ ಸಂಘಟನೆ ಈ ಕೊಲೆಯ ಸಂಚನ್ನು ರೂಪಿಸಿದೆ ಎನ್ನುವ ಶಂಕೆ ಪೊಲೀಸರು ಸ್ಪಷ್ಟಪಡಿಸಿಲ್ಲ. ಆದರೆ, ಈ ಪ್ರಕರಣ ಸಂಬಂಧ ಈಗಾಗಲೇ ಕೆಲವರನ್ನು ವಶಕ್ಕೆ ಪಡೆಯಲಿದೆ.

ಇದನ್ನು ಓದಿ: ಗೋಮಾಂಸಕ್ಕಾಗಿ ಹಸು ಕಳವು; ಚರ್ಮ ಬಿಟ್ಟು ಮಾಂಸ ಕೊಂಡೊಯ್ದ ದುಷ್ಕರ್ಮಿಗಳು

ಕಲ್ಲಡ್ಕ ಪ್ರಭಾಕರ್​ ಸೇರಿದಂತೆ ದಕ್ಷಿಣ ಕನ್ನಡದ ಭಜರಂಗದಳದ ಜಿಲ್ಲಾ ಸಂಚಾಲಕ ಶರಣ್​ ಪಂಪ್​ವೆಲ್​ಗೂ ಜೀವ ಬೆದರಿಕೆ ಇದೆ ಎಂದು ತಿಳಿದು ಬಂದಿದ್ದು, ಸಂಘ ಪರಿವಾರದ ಮುಖಂಡರಿಗೆ ಹೈ ಆಲರ್ಟ್​ ಆಗಿರುವಂತೆ ಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡದಲ್ಲಿ ಹಿಂದು ಸಂಘಟನೆ ಅತ್ಯಂತ ಪ್ರಭಾವಶಾಲಿಯಾಗುವುದರಲ್ಲಿ ಹಿಂದೂ ಸಂಘಟನೆಗಳ ಪಾತ್ರ ಕೂಡ ಪ್ರಮುಖವಾಗಿದೆ. ಇನ್ನು ಕಲ್ಲಡ್ಕ ಪ್ರಭಾಕರ್​ ಭಟ್​ ಶಾಲೆಯನ್ನು ನಡೆಸುವ ಬಡ ಮಕ್ಕಳಿಗೆ ಅನ್ನದಾಸೋಹ ಕೂಡ ನಡೆಸುತ್ತಿದ್ದಾರೆ. ಸದಾ ಹಿಂದೂ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಸದ್ದು ಮಾಡುತ್ತಿರುವ ಹಿನ್ನಲೆ ಈ ಬೆದರಿಕೆ ಬಂದಿದೆ ಎನ್ನಲಾಗಿದೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ