• Home
 • »
 • News
 • »
 • state
 • »
 • Chandrashekar Death: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಕೊಲೆಯೋ? ಅಪಘಾತವೋ?

Chandrashekar Death: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಕೊಲೆಯೋ? ಅಪಘಾತವೋ?

ಚಂದ್ರಶೇಖರ್​ ಸಾವಿನ ಸುತ್ತ ಅನುಮಾನ!?

ಚಂದ್ರಶೇಖರ್​ ಸಾವಿನ ಸುತ್ತ ಅನುಮಾನ!?

ತುಂಗಾ ಕಾಲುವೆಯಲ್ಲಿ ಕಾರಿನಲ್ಲಿ s ಚಂದ್ರಶೇಖರ್ ಶವ ಸಿಕ್ಕಿದೆ. ಇನ್ನು ಚಂದ್ರಶೇಖರ್ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. 

 • News18 Kannada
 • Last Updated :
 • Karnataka, India
 • Share this:

  ದಾವಣಗೆರೆ (ಅ.03): ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ (BJP MLA MP Renukacharya) ಸಹೋದರನ ಪುತ್ರ ಚಂದ್ರಶೇಖರ್ ಐದು ದಿನಗಳ ಬಳಿಕ ಇಂದು ಶವವಾಗಿ ಪತ್ತೆಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಕಾರಿನಲ್ಲಿ ಚಂದ್ರಶೇಖರ್ ಶವ ಸಿಕ್ಕಿದೆ. ಇನ್ನು ಚಂದ್ರಶೇಖರ್ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. 

  ಚಂದ್ರಶೇಖರ್​ ಸಾವಿನ ಹಿಂದಿರುವ ಪ್ರಶ್ನೆ!


  ಅಪಘಾತ ಆದ ಕಾರಿನಲ್ಲಿ ಶವ ಹಿಂದಕ್ಕೆ ಹೋಗಿದ್ಯಾಕೆ..?
  ಮುಂಭಾಗದಲ್ಲಿ ಕಾರ್​ನ ಏರ್​ಬ್ಯಾಗ್​ ಓಪನ್​ ಆಗಿದ್ಹೇಗೆ..?
  ಬಾನೆಟ್​​ ಚೆನ್ನಾಗಿದೆ, ಆದರೂ ಗ್ಲಾಸ್​ ಒಡೆದಿದ್ದು ಹೇಗೆ..?
  ಮುಂಭಾಗದ ಗ್ಲಾಸ್​ ಒಡೆದು ಯಾರಾದ್ರೂ ಹೊರಬಂದ್ರಾ..?
  ಒಬ್ಬರೇ ಇದ್ದಾಗ ಎರಡು ಏರ್​ಬ್ಯಾಗ್​ ಓಪನ್​ ಆಗಿದ್ಹೇಗೆ..?
  ಏರ್​​ಬ್ಯಾಗ್ ಓಪನ್ ಆಗಿದೆ ಅಂದ್ರೆ ಗುದ್ದಿದೆ ಅಲ್ವಾ?
  ಗುದ್ದಿ ಡ್ಯಾಮೇಜ್ ಆಗಿರೋ ಜಾಗ ಕೂಡ ಪತ್ತೆಯಾಗಬೇಕಲ್ವಾ?
  ಇದುವರೆಗೂ ಡ್ಯಾಮೇಜ್ ಆಗಿರುವ ಜಾಗ ಯಾಕೆ ಕಾಣಿಸ್ತಿಲ್ಲ?
  ಇದನ್ನೂ ಓದಿ: Renukacharya: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್​ ಶವ ಪತ್ತೆ, ಕಾಲುವೆಯಲ್ಲಿ ಬಿದ್ದಿದ್ದ ಕಾರು


  ಅಪಘಾತ ಕೇಸ್ ತನಿಖೆ ಹೇಗಿರುತ್ತೆ?


  ಚಂದ್ರಶೇಖರ್ ಕಾರು ಅಪಘಾತ ಕೇಸ್ ತನಿಖೆ ಹೇಗಿರುತ್ತೆ?
  ವಿವಿಧ ಅನುಮಾನಗಳ ಆಧಾರದ ಮೇಲೆ ಈಗಾಗಲೇ ತನಿಖೆ
  ಸಾವಿನ ಕಾರಣ, ಸಾಕ್ಷಿಗಳ ಆಧಾರದ ಮೇಲೆ ಅಂತಿಮ ತೀರ್ಮಾನ
  4 ದಿನಗಳ ನಂತರ ಶವ ಪತ್ತೆಯೇ ದೊಡ್ಡ ಅನುಮಾನ..!
  ಕೊನೆಯದಾಗಿ ಫೋನ್​ ಸ್ವಿಚ್ ಆಫ್ ಆಗಿದ್ದೆಲ್ಲಿ ಎಂದು ತನಿಖೆ
  ಸೋಮವಾರ ಬೆಳಿಗ್ಗೆ 6:40ರ ಸುಮಾರಿಗೆ ಮೊಬೈಲ್ ಸ್ವಿಚ್ ಆಫ್
  ಸೋಮವಾರ ರಾತ್ರಿ 11:40ಕ್ಕೆ ಹೊನ್ನಾಳಿಯ ಸುರವನ್ನೆ ಬಳಿ ಕಾರು ಹೋಗಿತ್ತು.
  ಇಲ್ಲ ಪೋನ್ ಬೇರೆ ಕಡೆ ಸ್ವಿಚ್ ಆಫ್ ಆಗಿದ್ರೆ ಮತ್ತೊಂದು ಡೌಟ್
  ಸ್ವಿಚ್ ಆಫ್​​ ಆದ ಲೊಕೇಷನ್​​ಗೆ ಹೋಗಿ ಪೊಲೀಸರು ತನಿಖೆ ಮಾಡಿದ್ರಾ?
  ಟಾಪ್ ಎಂಡ್ ಕಾರಿನ ಜಿಪಿಎಸ್ ವರ್ಕ್ ಆಗಿಲ್ವಾ.?
  ಕಾರಿನ ಭಾಗಗಳ ಡ್ಯಾಮೇಜ್ ಮೇಲೆ ಅನುಮಾನ ವ್ಯಕ್ತವಾಗಿದೆ.


  ಗೌರಿಗದ್ದೆಗೆ ತೆರಳಿದ್ದ ಚಂದ್ರಶೇಖರ್​

   ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.


  ಮುಗಿಲು ಮುಟ್ಟಿದೆ ಕುಟುಂಬಸ್ಥರ ಆಕ್ರಂದನ 


  ತಮ್ಮ ಸ್ನೇಹಿತ ಕಿರಣ್ ಎಂಬುವರ ಜೊತೆ ತೆರಳಿದ್ದ ಚಂದ್ರು ಶಿವಮೊಗ್ಗದಿಂದ ವಾಪಸ್ ಆಗಿ ನ್ಯಾಮತಿ ವರೆಗೂ ಬಂದಿದ್ದಾರೆ. ಆನಂತರ ನಾಪತ್ತೆಯಾಗಿದ್ದಾರೆ. ಚಂದ್ರು ಪ್ರಯಾಣಿಸುತ್ತಿದ್ದ ಕಾರು ಶಿವಮೊಗ್ಗದ ಮೂಲಕ ಹಾದು ಹೋಗುವ ದೃಶ್ಯಗಳು ಪತ್ತೆಯಾಗಿ, ಭಾನುವಾರ ರಾತ್ರಿ 11.56 ರ ಸುಮಾರಿಗೆ  ಚಂದ್ರಶೇಖರ್ ಮೊಬೈಲ್ ಆನ್ ನಲ್ಲಿತ್ತು, ಆದರೆ ಬೆಳದ್ದೆ 6.48 ಕ್ಕೆ ಸ್ವಿಚ್ ಆಫ್ ಆಗಿದೆ, ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರು ಕೂಡ ನಾಪತ್ತೆಯಾಗಿದ್ದು, ಕಿಡ್ನಾಪ್ ಆಗಿರುವ ಅನುಮಾನ ಮೂಡಿತ್ತು. ಇದೀಗ ಕಾರಿನಲ್ಲಿ ಚಂದ್ರಶೇಖರ್​ ಶವ ಪತ್ತೆಯಾಗಿದ್ದು,  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


  ಇದನ್ನೂ ಓದಿ: Rain Update: ರಾಜ್ಯದಲ್ಲಿ ನಿಲ್ಲದ ವರುಣನ ಆರ್ಭಟ, ಇನ್ನೂ 4 ದಿನ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆ


  ಎಲ್ಲಾ ಆಯಾಮಗಳಲ್ಲೂ ತನಿಖೆ


  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಕಾಲುವೆಯಲ್ಲಿ ಪಲ್ಟಿಯಾಗಿದ್ದ ಕಾರಿನಲ್ಲಿ ಮೃತದೇಹ ಪತ್ತೆ ಆಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತದೆ ಎಂದು ಹೇಳಿದ್ರು.


  ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ


  ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವ ಪತ್ತೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯಿಸಿದ್ದಾರೆ.  ಕುಟುಂಬಸ್ಥರು ನೀಡುವ ದೂರಿನಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಶಾಸಕ ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಈ ವೇಳೆ ಚಂದ್ರಶೇಖರ್‌ ತಂದೆಯ ಅಭಿಪ್ರಾಯ ಪಡೆಯುತ್ತೇವೆ ಎಂದರು

  Published by:ಪಾವನ ಎಚ್ ಎಸ್
  First published: