News18 India World Cup 2019

ಕಾಂಗ್ರೆಸ್​-ಜೆಡಿಎಸ್​ನಲ್ಲಿ ಬಂಡಾಯ? ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಮುಖ ನಾಯಕರೇ ಗೈರು!

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಪ್ರಮುಖ ನಾಯಕರೇ ಗೈರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಜೆಡಿಎಸ್​​ ಶಾಸಕ ಹೆಚ್. ವಿಶ್ವನಾಥ್​  ಕಾರ್ಯಕ್ರಮಕ್ಕೆ ಆಗಮಿಸರಲಿಲ್ಲ

Latha CG | news18
Updated:June 14, 2019, 3:37 PM IST
ಕಾಂಗ್ರೆಸ್​-ಜೆಡಿಎಸ್​ನಲ್ಲಿ ಬಂಡಾಯ? ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಮುಖ ನಾಯಕರೇ ಗೈರು!
ಹೆಚ್.ವಿಶ್ವನಾಥ್​-ದಿನೇಶ್​ ಗುಂಡೂರಾವ್​
Latha CG | news18
Updated: June 14, 2019, 3:37 PM IST
ಬೆಂಗಳೂರು,(ಜೂ.14): ಮೈತ್ರಿ ಸರ್ಕಾರದಲ್ಲಿ ಸಂಪುಟ ಪುನರಾಚನೆಯಾಗಿದ್ದು,  ರಾಣಿಬೆನ್ನೂರು ಕ್ಷೇತ್ರದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಶಾಸಕ ಆರ್​. ಶಂಕರ್ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್​. ನಾಗೇಶ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ವಿ ಆರ್ ವಾಲಾ ಶಂಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಸಚಿವ ಆರ್.ಶಂಕರ್, "ಕ್ಷೇತ್ರದ ಜನತೆಗೆ ಹೆಚ್ವಿನ ಕೆಲಸ ಮಾಡಲು ಸರ್ಕಾರ ಶಕ್ತಿ ಕೊಟ್ಟಿದೆ. ಅದರಂತೆ ನಾನು ಕೆಲಸ‌ ಮಾಡುತ್ತೇನೆ. ಒಳ್ಳೆಯ ಖಾತೆ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ. ಅದರಂತೆಯೇ ಯಾವುದೇ ಖಾತೆ ಕೊಟ್ಟರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ" ಎಂದರು.

ಇದೇ ವೇಳೆ ನೂತನ ಸಚಿವ ಆರ್.ಶಂಕರ್ ಪತ್ನಿ ಧನಲಕ್ಷ್ಮೀ ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿದರು. ಮತ್ತೊಮ್ಮೆ ಸಚಿವರಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಯಾವ ಖಾತೆ ಸಿಕ್ಕಿದರೂ ಅವರು ಜನರ ಸೇವೆ ಮಾಡಲು ಸಿದ್ಧರಿದ್ದಾರೆ ‌ಹಾಗೂ ಉತ್ತಮ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಶಂಕರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಇದೇ ವೇಳೆ ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು (ಕೆಪಿಜೆಪಿ) ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಪತ್ರ ನೀಡಿದರು. ಸಿದ್ದರಾಮಯ್ಯ ಅವರು ಶಂಕರ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಪ್ರಮುಖ ನಾಯಕರೇ ಗೈರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಜೆಡಿಎಸ್​​ ಶಾಸಕ ಹೆಚ್. ವಿಶ್ವನಾಥ್​  ಕಾರ್ಯಕ್ರಮಕ್ಕೆ ಆಗಮಿಸರಲಿಲ್ಲ. ಇದು ಕಾಂಗ್ರೆಸ್​​-ಜೆಡಿಎಸ್​ನಲ್ಲಿ ಬಂಡಾಯ ಎದ್ದಿದೆಯೇ ಎನ್ನುವ ಪ್ರಶ್ನೆ ಮೂಡಲು ಕಾರಣವಾಗಿದೆ.  ಸಿಎಂ ಎಚ್​.ಡಿ.ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್​, ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಡಿ.ಕೆ. ಶಿವಕುಮಾರ್, ಜಮೀರ್ ಅಹ್ಮದ್ ಖಾನ್, ಕೆ.ಜೆ.ಜಾರ್ಜ್, ಸೋಮಶೇಖರ್, ಬೈರತಿ ಬಸವರಾಜ್, ಡಿಕೆ ಸುರೇಶ್ ಮೊದಲಾದವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: Cabinet Expansion; ರಾಜ್ಯ ಸಂಪುಟ ಸೇರಿದ ಆರ್. ಶಂಕರ್, ಹೆಚ್​. ನಾಗೇಶ್; ಪ್ರಮಾಣ ವಚನ ನೀಡಿದ ರಾಜ್ಯಪಾಲ ವಿ.ಆರ್. ವಾಲಾ!
Loading...

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ರಾಜ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿದರು. ಪಕ್ಷೇತರರಿಗೆ ಸ್ಥಾನ ಮಾನ ಕೊಟ್ಟರೆ ಏನು ತಪ್ಪಿದೆ. ಯಾವ ಅಸಮಾಧಾನವೂ ನಮ್ಮೊಳಗೆ ಇಲ್ಲ. ಮಂತ್ರಿ ಸ್ಥಾನ ಸಿಕ್ಕರೆ ಮಾತ್ರ ಮರ್ಯಾದೆ ಇದೆ ಎಂದು ಅರ್ಥವೇ? ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇವೆ. ರಾಹುಲ್ ಗಾಂಧಿಯವರು ಹೇಳಿದಂತೆ ನಾವು ನಡೆಯುತ್ತೇವೆ. ಪಕ್ಷ ಉಳಿಸಲು, ಸ್ಥಿರತೆ ಕಾಪಾಡಲು ಈ ನಿರ್ಧಾರ ಮಾಡಲಾಗಿದೆ. ಇದು ಏಕಮುಖ ತೀರ್ಮಾನ ಅಲ್ಲ ಎಂದು ಸುಧಾಕರ್​​ಗೆ ಟಾಂಗ್ ಕೊಟ್ಟರು.

ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಹೆಚ್.ನಾಗೇಶ್ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ನಮಗೆ ಖುಷಿ ವಿಷಯ ಎಂದರು. 14 ವರ್ಷದ ಬಳಿಕ ಕೋಲಾರ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಕ್ಕಿದೆ. ಸಚಿವರ ಸಹಕಾರದಿಂದ ಒಳ್ಳೆಯ ಕೆಲಸ ಮಾಡಲು ನೆರವಾಗುತ್ತಿದೆ ಎಂದರು. ಜಾತಿ ಪ್ರಮಾಣ ಪತ್ರ ಅನೂರ್ಜಿತಗೊಂಡ ಹಿನ್ನಲೆ, ಕೊತ್ತೂರು ಮಂಜು ಚುನಾಣೆಯಿಂದ ಹಿಂದೆ ಸರಿದಿದ್ದರು. ಬಳಿಕ ಚುನಾಬಣೆಯಲ್ಲಿ ಬಹಿರಂಗವಾಗಿ ಪಕ್ಷೇತರ ಅಭ್ಯರ್ಥಿ ನಾಗೇಶ್ ಪರ ಕೆಲಸ ಮಾಡಿದ್ದರು.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...