ರಾಜ್ಯದ ಕೆಲವು ಕಮರ್ಷಿಯಲ್ ‌ಕಾಂಪ್ಲೆಕ್ಸ್​ಗಳು ನಿಯಮಬಾಹಿರ..!

news18
Updated:September 2, 2018, 11:23 PM IST
ರಾಜ್ಯದ ಕೆಲವು ಕಮರ್ಷಿಯಲ್ ‌ಕಾಂಪ್ಲೆಕ್ಸ್​ಗಳು ನಿಯಮಬಾಹಿರ..!
news18
Updated: September 2, 2018, 11:23 PM IST
- ಕಿರಣ್ ಕೆ.ಎನ್, ನ್ಯೂಸ್ 18 ಕನ್ನಡ 

ಬೆಂಗಳೂರು ( ಸೆ.02) :  ನಮ್ಮ ಫೈರ್ ಆಫೀಸರ್ಸ್ ಗಳು ಪ್ರತಿನಿತ್ಯ ಮಾಲ್ ಗಳು, ಬಹುಮಹಡಿ ಕಟ್ಟಡಗಳಲ್ಲಿ ಫೈರ್ ಸೇಫ್ಟಿ ಅಳವಡಿಸಿಕೊಳ್ಳಬೇಕು ಅಂತ ಸಾವಿರ ಸಾರಿ ಹೇಳಿದ್ರು ಮಾತ್ರ ಬುದ್ದಿ ಕಲಿಯುತ್ತಿಲ್ಲ. ಹೀಗಾಗಿ ಇಂದು ಅಗ್ನಿಶಾಮಕ ಅಧಿಕಾರಿಗಳು ಬೀದರ್ ನಿಂದ ಚಾಮರಾಜನಗರದವರೆಗೂ ರಾಜ್ಯದಾದ್ಯಂತ ಇರೋ ಮಾಲ್ ಗಳ ಮೇಲೆ ಸ್ಪೇಷಲ್ ಡ್ರೈವ್ ಮಾಡಿ ಫೈರ್ ಸೇಫ್ಟಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕಮರ್ಷಿಯಲ್  ಮಾಲ್ ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದಿದ್ರೇ,ಕ್ರಿಮಿನಲ್ ಕೇಸ್ ಬುಕ್ ಮಾಡಲು ಅಗ್ನಿಶಾಮಕ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಜೆಪಿ ಸುನೀಲ್ ಅಗರವಾಲ್ ಫೈರ್ ಸೇಫ್ಟಿ ಅಳವಡಿಸಿಕೊಳ್ಳದಿದ್ರೇ , ಸಂಬಂಧಪಟ್ಟ ಸ್ಟೇಷನ್ ವ್ಯಾಪ್ತಿಯಲ್ಲಿ ಮಾಲ್ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ಬುಕ್ ಮಾಡುವುದಾಗಿ ಹೇಳಿದರು.

ಸುರಕ್ಷತಾ ದೃಷ್ಟಿಯಿಂದ ಬೆಂಗಳೂರು, ಮೈಸೂರು  ,ಮಂಗಳೂರು ಸೇರಿದಂತೆ ರಾಜ್ಯದಾದ್ಯಂತ 44 ಮಾಲ್ ಗಳ ಮೇಲೆ ಇಂದು ಏಕಕಾಲದಲ್ಲಿ ಅಗ್ನಿಶಾಮಕ ಅಧಿಕಾರಿಗಳು ವಿಶೇಷ ಕಾರ್ಯಚರಣೆ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅದರಲ್ಲಿ ಬೆಂಗಳೂರಿನ 28 ಮಾಲ್ ಗಳಲ್ಲಿ 19 ಮಾಲ್ ಗಳಿಗೆ ನೊಟೀಸ್ ನೀಡಿದ್ದಾರೆ.

ಉಳಿದಂತೆ ಮೈಸೂರು 3 ,ಕಲ್ಬುರ್ಗಿ 4,ಹುಬ್ಬಳಿಯಲ್ಲಿ 3 ,ಮಂಗಳೂರಿನಲ್ಲಿ 4 , ದಾವಣಗೆರೆಯಲ್ಲಿ 1 ಮಾಲ್ ಗಳಿಗೆ ಮೇಲೆ ಕಾರ್ಯಾಚರಣೆ ನಡೆಸಿದರು. ನಿಯಮ ಉಲ್ಲಂಘಿಸಿರುವ ಮಾಲ್ ಗಳಿಗೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು ಮೂರು ದಿನಗಳಲ್ಲಿ ಫೈರ್ ಡ್ರೈವ್ ಕ್ಲಿಯರ್ ಮಾಡದೆ ಹೋದಲ್ಲಿ ವಿದ್ಯುತ್ ಹಾಗೂ ಜಲಮಂಡಳಿಗೆ ವಾಟರ್ ಸರಬರಾಜು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಜಪಾನ್ ನಿಂದ ಆಮದು ಮಾಡಿಕೊಂಡಿರುವ ಸಂಜೀವಿ ಅಂತ ಹೊಸ ಫೈರ್ ರೆಸ್ಕ್ಯೂ ಹಾಗೂ ಲೈಫ್ ಸೇವಿಗ್ ಬೈಕ್ ಹೊರ ತಂದಿದ್ದು, ಟ್ರಾಫಿಕ್ ಸಮಸ್ಯೆ ಇರೋ ಕಡೆ ಕೂಡಲೇ ತೆರಳಿ ಬೆಂಕಿ ನಂದಿಸಲು ಹಾಗೂ ಅಪಾಯದಲ್ಲಿರುವರನ್ನು ರಕ್ಷಿಸಲು ಬಳಸಲು ರೆಡಿ ಮಾಡಿದ್ದಾರೆ.


Loading...

ಒಟ್ಟಿನಲ್ಲಿ ಮಾಲ್ ಗಳ ತಪಾಸಣೆ ವೇಳೆ  ಹಲವು ಮಾಲ್ ಗಳು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಅಗ್ನಿಶಾಮಕ ವಾಹನ ಓಡಾಡಲು ಇರೋ ಜಾಗವನ್ನೇ ಪಾರ್ಕಿಂಗ್ ಪ್ಲೇಸ್ ಮಾಡ್ಕಂಡಿರುವುದು ಕಂಡು ಬಂದಿದೆ. ಅಲ್ಲದೇ ಕೆಲವು ಕಡೆ ಫೈರ್ ಡ್ರೈವ್  ಮುಚ್ಚಿರೋದು ಕಂಡು ಬಂದಿದೆ. ಮುಖ್ಯವಾಗಿ ಅಗ್ನಿಶಾಮಕ ವಾಹನ ಬೆಂಕಿ ಬಿದ್ದಾಗ ಸರಾಗವಾಗಿ ಹೋಗಲು ಆಗದೇ ಇರೋದು ಕಂಡು ಬಂದಿದ್ದು, ನೊಟೀಸ್ ನೀಡಿದ್ದು ಮುಂದಿನ ದಿನಗಳಲ್ಲಿ ಅಗ್ನಿಶಾಮಕ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ