ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತನೆ ತೋರಿದ ಪುಂಡರಿಗೆ ಸಾರ್ವಜನಿಕರಿಂದ ಧರ್ಮದೇಟು

ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ  ಕೆಲ ಯುವಕರು ಕುಡಿದ ಮತ್ತಿನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಕಾರಿನ್ನು ಜಖಂಗೊಳಿಸಿ ಯುವಕರಿಗೆ ಧರ್ಮದೇಟು ಕೊಟ್ಟಿದ್ದಾರೆ.

ಕಾರು ಜಖಂಗೊಳಿಸಿರುವ ಸಾರ್ವಜನಿಕರು

ಕಾರು ಜಖಂಗೊಳಿಸಿರುವ ಸಾರ್ವಜನಿಕರು

  • News18
  • Last Updated :
  • Share this:
ಮೈಸೂರು,(ಮೇ 15): ದೇವಸ್ಥಾನಕ್ಕೆ ಬಂದಿದ್ದ ಮಹಿಳಾ ಭಕ್ತರ ಜೊತೆ ಯುವಕರು ಅಸಭ್ಯ ವರ್ತನೆ ತೋರಿದ್ದು, ಇದರಿಂದ ಆಕ್ರೋಶಗೊಂಡ ಭಕ್ತರ ಗುಂಪು ಪುಂಡರಿಗೆ ಧರ್ಮದೇಟು ಕೊಟ್ಟಿದ್ದಾರೆ. ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆಯ ಹೆಚ್​.ಡಿ.ಕೋಟೆಯ ಚಿಕ್ಕದೇವಿ ಬೆಟ್ಟದಲ್ಲಿ.

ನಿನ್ನೆ  ಚಿಕ್ಕದೇವಿ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಸುತ್ತಮುತ್ತಲ ಊರುಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು. ದೇವಿಯ ದರ್ಶನ ಪಡೆದು ಜಾತ್ರಾ ಮಹೋತ್ಸವ ಕಣ್ತುಂಬಿಕೊಳ್ಳುವ ಕಾತುರದಲ್ಲಿ ಹೆಚ್ಚಾಗಿ ಮಹಿಳಾ ಭಕ್ತರು ಇದ್ದರು. ಈ ವೇಳೆ ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ  ಕೆಲ ಯುವಕರು ಕುಡಿದ ಮತ್ತಿನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಲ್ಲೇ ಇದ್ದ ಸಾರ್ವಜನಿಕರು ಕಾರನ್ನು ಜಖಂಗೊಳಿಸಿ ಯುವಕರಿಗೆ ಧರ್ಮದೇಟು ಕೊಟ್ಟಿದ್ದಾರೆ. ಜೊತೆಗೆ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಇನ್ನು ವಿಷಯ ತಿಳಿದ ಪೊಲೀಸರು ದೇವಸ್ಥಾನಕ್ಕೆ  ಆಗಮಿಸುತ್ತಿದ್ದಂತೆ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಈ ಸಂಬಂಧ ಹೆಚ್​​.ಡಿ.ಕೋಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇಂತಹ ಘಟನೆಗಳು ಇಲ್ಲಿ ಪದೇ ಪದೇ ನಡೆಯುತ್ತಿರುತ್ತವೆ. ಆಗಾಗ್ಗೆ ಇಲ್ಲಿಗೆ ಬರುವ ಕೆಲ ಯುವಕರು ಕುಡಿದು ಅಸಭ್ಯ ವರ್ತನೆ ತೋರುತ್ತಾರೆ ಎಂದು ಭಕ್ತರು ಆರೋಪ ಮಾಡಿದ್ದಾರೆ. ಹೀಗಾಗಿ ದೇವಸ್ಥಾನದ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಮಾಡುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
Published by:Latha CG
First published: