ವಿಜಯನಗರ ಆದ್ಮೇಲೆ ಆನಂದ್ ಸಿಂಗ್ ಬಳ್ಳಾರಿ ಮರ್ತೇ ಬಿಟ್ಟವ್ರೆ: ರೆಡ್ಡಿ ವ್ಯಂಗ್ಯ

Anand Singh vs Somashekhar Reddy- ವಿಜಯನಗರ ಜಿಲ್ಲೆ ರಚನೆ ಆದ ಮೇಲೆ ಆನಂದ್ ಸಿಂಗ್ ಬಳ್ಳಾರಿಯನ್ನೇ ಮರೆತಿದ್ದಾರೆ. ಹೈಪ್ರೊಫೈಲ್ ರಾಜಕಾರಣಿ ಆದ ಅವರ ಬದಲು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸೋಮಶೇಖರ್ ರೆಡ್ಡಿ ವ್ಯಂಗ್ಯ ಮಾಡಿದ್ದಾರೆ.

ಆನಂದ್ ಸಿಂಗ್

ಆನಂದ್ ಸಿಂಗ್

 • Share this:
  ಬಳ್ಳಾರಿ: ಸಚಿವ ಆನಂದ್ ಸಿಂಗ್ (Anand Singh) ಹೈ ಪ್ರೊಫೈಲ್ ರಾಜಕಾರಣಿ. ಅವರು ಕೇವಲ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ (Somashekhar Reddy) ಕಿಡಿ ಕಾರಿದ್ದಾರೆ. ವಿಜಯನಗರ ಜಿಲ್ಲೆ ಆದ ಮೇಲೆ ಆನಂದ ಸಿಂಗ್ ಅವರು ಬಳ್ಳಾರಿ ಮರಿತಿದ್ದಾರೆ‌. ಇನ್ನೊಂದು ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಶ್ರೀರಾಮುಲು (B Sriramulu) ಅವರಿಗೆ ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳೂ ನಡೆದಿದ್ದು, ಸಿಎಂ ಅವರನ್ನೂ ಸಹ ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ. ಒಂದು ವೇಳೆ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

  ಆನಂದ್‌ ಸಿಂಗ್ ಅವರು ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತ ಆಗಿದ್ದಾರೆ. ಶ್ರೀರಾಮುಲು ಲೋಫೈ ರಾಜಕಾರಣಿ, ಹೀಗಾಗಿ ಅವರಿಗೆ ಬಳ್ಳಾರಿ ಉಸ್ತುವಾರಿ ಕೊಡಬೇಕು ಎಂದು ಆನಂದ್ ಸಿಂಗ್ ಅವರನ್ನ ಕುಹಕವಾಡಿದರು.

  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗೆಯ ವಿಚಾರವೇ ನಡೆದಿಲ್ಲ. ಸಿಎಂ ಬದಲಾಗುವುದಿಲ್ಲ, ಅರಾಮಾಗಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

  ಇದನ್ನೂ ಓದಿ: ಬೆಂಗಳೂರಿನ ಜೆಸಿ ರಸ್ತೆಯಲ್ಲಿ ಕುಸಿದ ಭೂಮಿ; ನಿಗೂಢ ಗುಂಡಿ ನಿರ್ಮಾಣ; ಚಕಿತಗೊಂಡ ಜನರು

  ಮುಂದೆಯೂ ನಮ್ಮ ಸರ್ಕಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರೆಡ್ಡಿ, ನನ್ನ ಹಣೆಯಲ್ಲಿ ನಾನು ಮಂತ್ರಿ ಆಗಬೇಕು ಅಂತಾ ಬರೆದಿದ್ರೆ ಅದನ್ನು ಯಾರೂ ತಪ್ಪಿಸುವುದಕ್ಕೆ ಆಗಲ್ಲ. ನನಗೆ ಸಚಿವ ಸ್ಥಾನ ನೀಡುವುದು ದೇವರಿಗೆ ಬಿಟ್ಟ ವಿಚಾರ ಎಂದು ಮಂತ್ರಿಮಂಡಲ ವಿಸ್ತರಣೆ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದರು.

  ಮತಾಂತರ ನಿಷೇಧ ಕಾಯ್ದೆಗೆ ರೆಡ್ಡಿ ಬೆಂಬಲ: 

  ಇನ್ನು ಮತಾಂತರ ಕಾಯ್ದೆ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಬಲವಂತವಾಗಿ ಮತಾಂತರ ಮಾಡಬಾರದು. ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ ಎಂದು ಸೋಮಶೇಖರ್ ರೆಡ್ಡಿ ಸ್ಪಷ್ಟಪಡಿಸಿದರು.

  ಪ್ರೀತಿಸಿ ನಂಬಿಸಿ ಮತಾಂತರ ಮಾಡುವುದು ಸರಿಯಲ್ಲ. ಲವ್ ಜಿಹಾದ್ ತಡೆ ಕಾಯ್ದೆ ಜಾರಿ ಆಗಬೇಕು. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದಕ್ಕೆ ನನ್ನ ಬೆಂಬಲ ಇದೆ ಎಂದರು.

  ಇದನ್ನೂ ಓದಿ: Winter Session: ಬೆಳಗಾವಿ ಸದನಕ್ಕೆ ಕಾಂಗ್ರೆಸ್ ಪ್ರತಿಭಟನೆ ಕಿಚ್ಚು; ಸರ್ಕಾರದ ಧೋರಣೆಗೆ ಆಕ್ರೋಶ

  ಇದೇ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರೋಧದ ಕುರಿತು ಮಾತನಾಡಿದ ಅವರು, ವೋಟ್ ಬ್ಯಾಂಕ್ ವಿಭಜನೆ ಆಗುತ್ತೆ ಅಂತಾ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ  ಮಾಡ್ತಿದ್ದಾರೆ. ಆದ್ರೆ ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲೇಬೇಕು ಎಂದು ಸೋಮಶೇಖರ್ ರೆಡ್ಡಿ ಒತ್ತಾಯಿಸಿದರು.

  ಯಾವ ಬದಲಾವಣೆಯೂ ಇಲ್ಲ, ಬೊಮ್ಮಾಯಿಯೇ ಸಿಎಂ ಆಗಿರ್ತಾರೆ: 

  ರಾಜ್ಯ ರಾಜಕಾರಣದಲ್ಲಿ ಜನವರಿ 14 ರ ನಂತರ ಬಹಳ ದೊಡ್ಡ ಬದಲಾವಣೆ ಆಗಲಿದೆ ಎಂಬ ಗಾಳಿ ಸುದ್ದಿಗೆ ರೆಡ್ಡಿ, ಯಾವ ಬದಲಾವಣೆನು ಇಲ್ಲ‌ ಏನು ಇಲ್ಲ ಬೊಮ್ಮಯಿ ಅವರೇ ಮುಖ್ಯಮಂತ್ರಿ ಆಗಿ ಮುಂದು ವರೆಯುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಮುಂದೆಯೂ ನಮ್ಮ ಸರ್ಕಾರ ಬರುತ್ತೆ‌ ಎಂಬ ವಿಶ್ವಾಸವಿದೆ‌. ಜನ ಪರವಾಗಿ ನಾವು ಕೆಲಸ ಮಾಡುತ್ತೇವೆ. ಜನರು ನಮ್ಮ ಕೈ ಹಿಡಿತಾರೆ ಎಂದರು.

  ಇನ್ನು, ಜಿಲ್ಲೆ ವಿಭಜನೆ ಆದ ಬಳಿಕ ಆನಂದ ಸಿಂಗ್ ಕೇವಲ ಪ್ರಚಾರಕ್ಕೆ ಮಾತ್ರ ಬಳ್ಳಾರಿಗೆ ಬರುತ್ತಿದ್ದಾರೆ. ಇಲ್ಲಿನ ಜನರ ಸಮಸ್ಯೆ ಅವರಿಗೆ ಬೇಕಾಗಿಲ್ಲ. ಹೀಗಾಗಿ ಅವರು ನಮಗೆ ಉಸ್ತುವಾರಿ ಸಚಿವನಾಗಿ ಬೇಡ. ರಾಮುಲು ಉಸ್ತುವಾರಿ ಸಚಿವನಾಗಲಿ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.

  ವರದಿ: ವಿನಾಯಕ ಬಡಿಗೇರ
  Published by:Vijayasarthy SN
  First published: