• Home
  • »
  • News
  • »
  • state
  • »
  • ಯತ್ನಾಳ್​ ನಮ್ಮ ನಾಯಕರು, ದೊರೆಸ್ವಾಮಿ ಬಗ್ಗೆ ಅವರ ಹೇಳಿಕೆ ಸರಿಯಾಗಿದೆ; ಸೋಮಶೇಖರ್​ ರೆಡ್ಡಿ

ಯತ್ನಾಳ್​ ನಮ್ಮ ನಾಯಕರು, ದೊರೆಸ್ವಾಮಿ ಬಗ್ಗೆ ಅವರ ಹೇಳಿಕೆ ಸರಿಯಾಗಿದೆ; ಸೋಮಶೇಖರ್​ ರೆಡ್ಡಿ

ಸೋಮಶೇಖರ್​ ರೆಡ್ಡಿ

ಸೋಮಶೇಖರ್​ ರೆಡ್ಡಿ

ದೊರೆಸ್ವಾಮಿ ಅವರು ಸಿಎಎ, ಎನ್​ಸಿಆರ್ ವಿರೋಧ ಮಾಡುತ್ತಾರೆ. ಹಿರಿಯರಾದ ಅವರು ಹೀಗೆ ಮಾಡೋದು ತಪ್ಪು. ಅವರು ಏಕ ರೀತಿ ಯೋಚನೆ ಮಾಡಬಾರದು.ಇಂಥದ್ದಕ್ಕೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ.

  • Share this:

ಬಳ್ಳಾರಿ (ಫೆ.29): ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ನಮ್ಮ ನಾಯಕರು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅವರು ನೀಡಿರುವ  ಹೇಳಿಕೆ ಸರಿಯಾಗಿದೆ ಎಂದು ತಮ್ಮ ಪಕ್ಷದ ನಾಯಕನ​​ ಹೇಳಿಕೆಯನ್ನು ಶಾಸಕ ಸೋಮಶೇಖರ್​ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್​ ಅವರು ಹೇಳಿದ್ದು ಸರಿಯಾಗಿದೆ, ತಪ್ಪೇನಿಲ್ಲ ಎಂದ್ರು. ಸ್ವಾತಂತ್ರ್ಯ ಹೋರಾಟಗಾರರು ಎಂದೇಳ್ತಾರೆ..ಅದರ ಜೊತೆಗೆ ದೇಶಭಕ್ತಿಯೂ ಇರಬೇಕಲ್ಲ. ದೇಶದ ಏಕತೆ, ಐಕ್ಯತೆ ಕಾಪಾಡಬೇಕಲ್ಲವೇ? ಎಂದು ಸೋಮಶೇಖರ್​ ರೆಡ್ಡಿ ಹೇಳಿಕೆ ನೀಡಿದರು.

ದೊರೆಸ್ವಾಮಿ ಅವರು ಸಿಎಎ, ಎನ್​ಸಿಆರ್ ವಿರೋಧ ಮಾಡುತ್ತಾರೆ. ಹಿರಿಯರಾದ ಅವರು ಹೀಗೆ ಮಾಡೋದು ತಪ್ಪು. ಅವರು ಏಕ ರೀತಿ ಯೋಚನೆ ಮಾಡಬಾರದು.ಇಂಥದ್ದಕ್ಕೆ ಕಾಂಗ್ರೆಸ್ ಬೆಂಬಲ ಕೊಡುತ್ತದೆ. ನಮ್ಮವರನ್ನು ಪ್ರಚೋದಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಸ್ವಾತಂತ್ರ್ಯ ಹೋರಾಟಗಾರ ಎಂಬ ನೆಪದಲ್ಲಿ ದೊರೆಸ್ವಾಮಿ ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡಬಾರದು; ರೇಣುಕಾಚಾರ್ಯ

ಇನ್ನು ಯತ್ನಾಳ್​ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ.  ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಹಾಗಂತ ಪ್ರಪಂಚ ಮೆಚ್ಚಿದ ಮೋದಿ ಒಬ್ಬ ಕೊಲೆಗಡುಗ ಎಂದೇಳುವುದು ಸರಿಯಲ್ಲ. ಯತ್ನಾಳ್, ಹೆಚ್ ಡಿ ಕೆ, ಸಿದ್ದರಾಮಯ್ಯ ಯಾರೇ ಆಗಲಿ ವೈಯಕ್ತಿಕವಾಗಿ ತಗೆದುಕೊಳ್ಳಬಾರದು. ಆ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

First published: