ಬಳ್ಳಾರಿ: ರಾಜಕೀಯದ ಮುಂದೆ ಬಂಧು-ಬಳಗ, ಗೆಳೆತನ, ಸಂಬಂಧಗಳಿಗೆ ಬೆಲೆ ಇರಲ್ಲ. ಈ ಮಾತು ಹೇಳೋಕೆ ಕಾರಣ ರೆಡ್ಡಿ ಬ್ರದರ್ಸ್ ಪಾಲಿಟಿಕ್ಸ್ ಹೇಳಿಕೆಗಳು. ಹೌದು, ಜನಾರ್ದನ ರೆಡ್ಡಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಈಗಾಗ್ಲೇ ಪ್ರಚಾರ ಶುರುಮಾಡಿದ್ದಾರೆ. ಪಕ್ಷದ ಲೋಗೋ ಕೂಡ ಲಾಂಚ್ ಆಗಿದೆ. ರೆಡ್ಡಿ ಹೊಸ ಪಕ್ಷಕ್ಕೆ ಸ್ವಂತ ಸಹೋದರ ಸೋಮಶೇಖರ್ ರೆಡ್ಡಿ ಹೋಗ್ತಾರೆ ಅನ್ನೋ ಮಾತುಗಳಿತ್ತು. ಆದರೆ ಹೊಸ ಪಕ್ಷಕ್ಕೆ ಹೋಗಲ್ಲ ಎಂದ ಸೋಮಶೇಖರ ರೆಡ್ಡಿ, ಶ್ರೀರಾಮುಲು ನನಗೆ ಅಣ್ಣ, ಅವರಿಂದ ರಾಜಕೀಯ ಜನ್ಮ ಅಂತ ಹೇಳಿಕೆ ಕೊಟ್ಟಿರೋದು ಚರ್ಚೆಗೆ ಗ್ರಾಸವಾಗಿದೆ.
ಶ್ರೀರಾಮುಲು ರಾಷ್ಟ್ರ ನಾಯಕ, ಸಾಯೋವರೆಗೂ ಬಿಜೆಪಿಯಲ್ಲೇ
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಸೋಮಶೇಖರ್ ರೆಡ್ಡಿ, ನನ್ನ ಜೀವನ ಇರುವವರೆಗೂ ಬಿಜೆಪಿ ಪಕ್ಷದಲ್ಲಿ ಇರುತ್ತೇನೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಗೊಂದಲ ಆಗಬಾರದು. ಶ್ರೀರಾಮುಲು ಬಿಜೆಪಿ ಪಕ್ಷವನ್ನು ಫಾಲೋ ಮಾಡುತ್ತಿದ್ದಾರೆ. ನಾನು ಶ್ರೀರಾಮುಲು ಅವರನ್ನ ಫಾಲೋ ಮಾಡುತ್ತೇನೆ.
ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ತಿದ್ದಂತೆ ಸ್ವಂತ ಸಹೋದರನೇ ಕೊಟ್ಟ ಈ ಹೇಳಿಕೆ ಜನಾರ್ದನ ರೆಡ್ಡಿಯ ನಿದ್ದೆಗೆಡಿಸಿದೆ. ಹೊಸ ಪಕ್ಷಕ್ಕೆ ಬರದಿದ್ರೂ ಪರವಾಗಿಲ್ಲ. ಆದರೆ ಅಣ್ಣನಿಗೆ ಟಾಂಗ್ ಕೊಟ್ಟಿದ್ದು, ಸರಿನಾ ಅಂತ ಜನ ಮಾತಾಡಿಕೊಳ್ತಿದ್ದಾರೆ. ಇನ್ನೊಂದ್ಕಡೆ ಹೊಸ ಪಕ್ಷದಿಂದ ನಮಗೇನೂ ನಷ್ಟವಿಲ್ಲ ಅಂತ ರಾಮುಲು. ಜನರ ಆಶೀರ್ವಾದ ಸಿಗುತ್ತೆ ಅನ್ನೋದು ರೆಡ್ಡಿ ಹೇಳಿಕೆ.
ಹೊಸ ಪಕ್ಷಗಳಿಂದ ಏನೂ ಆಗಲ್ಲ, ಬಿಜೆಪಿ ಮೇಲೆ ಪರಿಣಾಮ ಬೀರಲ್ಲ
ಸ್ನೇಹ ಯಾವತ್ತೂ ಶಾಶ್ವತ. ಬಿಜೆಪಿ ನನಗೆ ರಾಜಕೀಯ ಸ್ಥಾನಮಾನ ಕೊಟ್ಟಿದೆ. ಸ್ನೇಹವನ್ನೂ ಬಿಡಲ್ಲ, ರಾಜಕಾರಣವನ್ನೂ ಬಿಡಲ್ಲ. ಕೇಂದ್ರದ ನಾಯಕರ ಜತೆ ಈ ಬಗ್ಗೆ ಮಾತನಾಡಿದ್ದೇನೆ. ನಮಗೆ ಬಿಜೆಪಿಯಲ್ಲಿ ಗೌರವ, ಸ್ಥಾನಮಾನ ಸಿಕ್ಕಿದೆ.
ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ. ಬಿಜೆಪಿ ಪಕ್ಷಕ್ಕೆ ಅದರದ್ದೇ ಆದ ಹಿನ್ನಲೆ ಮತ್ತು ಸಿದ್ಧಾಂತ ಇದೆ. ಅಷ್ಟೇ ಅಲ್ಲದೇ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ, ಇದರಲ್ಲಿ ಯಾವುದೇ ಗೊಂದಲ ಆಗುವುದಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ನಾನು, ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಹೇಳಿದ್ದರು.
ಜನ ಆಶೀರ್ವಾದ ಮಾಡ್ತಾರೆ, ಗಂಗಾವತಿ ಜನ ನನ್ನ ಬಿಡಲ್ಲ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬರುವುದಲ್ಲಿ ಸಂದೇಹವಿಲ್ಲ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ರಾಜ್ಯದಲ್ಲಿರುವ ರಾಷ್ಟ್ರೀಯ ಪಕ್ಷಗಳು ತಲೆ ಭಾಗುವಂತೆ ಮಾಡುತ್ತೇನೆ. ನಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರೆಗೆ ನಾನು ನಿದ್ದೆ ಮಾಡೋದಿಲ್ಲ. ಈಗಾಗಲೇ ಗಂಗಾವತಿಯಲ್ಲಿ ನನ್ನ ಪತ್ನಿ ಮನೆ ಗೃಹಪ್ರವೇಶ ಮಾಡಿದ್ದಾಳೆ. ನಾನು ಜನರನ್ನ ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ಗಂಗಾವತಿ ಜನ ನನ್ನ ಕೈ ಬಿಡೋದಿಲ್ಲ ಎಂದು ಹೇಳಿದ್ದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದ್ಮೇಲೆ ಸಿಬಿಐ ಆಸ್ತಿ ಮುಟ್ಟುಗೋಲಿಗೆ ಮುಂದಾಗಿದೆ. ಇನ್ನೊಂದ್ಕಡೆ ಬೆನ್ನಿಗೆ ನಿಲ್ತಾರೆ ಅಂದ್ಕೊಂಡಿದ್ದ ಸಹೋದರರೂ ರೆಡ್ಡಿಯಿಂದ ದೂರ ಆಗ್ತಿದ್ದು, ರಾಜಕೀಯದಲ್ಲಿ ಶತ್ರುಗಳು ಮಿತ್ರರಾಗ್ತಾರೆ. ಸಹೋದರರು ಸವಾಲ್ ಹಾಕ್ತಾರೆ ಅನ್ನೋದಕ್ಕೆ ಇದು ನೈಜ ನಿದರ್ಶನ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ