ಯಲಹಂಕ(ನ.07): ಕೊರೋನಾದಿಂದಾಗಿ ಇಡೀ ಜಗತ್ತು ತತ್ತರಿಸಿದೆ, ವೈದ್ಯರು, ಪೊಲೀಸರು, ಡಿ.ಸಿ, ಎ.ಸಿಗಳನ್ನೂ ಬಿಟ್ಟಿಲ್ಲ. ಹಾಗೆ ದೇಶ ಕಾಯೋ ಸೈನಿಕರನ್ನೂ ಬಿಟ್ಟಿಲ್ಲ, ಅಂತಹ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ಯಲಹಂಕ ಬಿ.ಎಸ್.ಎಫ್ ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್ ನಲ್ಲಿ ಸೈನಿಕರಿಗಾಗಿ ವಾರ್ಷಿಕ ಕ್ರೀಡಾ ಕೂಟ ಆಯೋಜನೆ ಮಾಡಲಾಗಿತ್ತು. ಸೈನಿಕರಿಗೆ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸಲು ಆಯೋಜನೆ ಮಾಡಿದ್ದ ಕ್ರೀಡೆಯಲ್ಲಿ ಸೈನಿಕರು ಉತ್ಸಾಹದಿಂದ ಭಾಗವಹಿಸಿದ್ರು. ಚಂಗನೆ ನೆಗೆದು ಚಿರತೆಯಂತೆ ಗುರಿಯತ್ತ ಮುನ್ನುಗ್ಗಿದ ಕ್ರೀಡಾಪಟುಗಳಿಗೆ ಗ್ಯಾಲರಿಯಲ್ಲಿ ಕೂತು ಪ್ರೇಕ್ಷಕರು ಹುರಿದುಂಬಿಸಿದರು. ಹಗ್ಗ ಹಿಡಿದು ಬಲ ಭೀಮರಂತೆ ಜಗ್ಗುತ್ತಿರುವ ಹುರಿಯಾಳುಗಳು ಸೆಣಸಾಡುತ್ತಿದ್ದರು.
ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕಿನ ಬಿ.ಎಸ್.ಎಫ್ ಕ್ಯಾಂಪ್ ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್ ನ ಸೈನಿಕರ ನಡುವೆ ನಡೆದ ವಾರ್ಷಿಕ ಕ್ರೀಡಾ ಕೂಟ ನೆರೆದಿದ್ದವರ ಮೈ ನವಿರೇಳಿಸಿತ್ತು, ಕೊರೋನಾ ಮಹಾಮಾರಿ ಇಡೀ ಜಗತ್ತನ್ನು ಕಿತ್ತು ತಿನ್ನುತ್ತಿರುವ ಸಮಯದಲ್ಲಿ ಜಗತ್ತಿನಾದ್ಯಂತ ವೈದ್ಯರು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.
108 ಆರೋಗ್ಯ ಸೇವೆಗೆ ಮೇಜರ್ ಸರ್ಜರಿ ಮಾಡಲು ಸಚಿವ ಡಾ.ಕೆ.ಸುಧಾಕರ್ ನಿರ್ಧಾರ
ನಮ್ಮ ಪ್ರಧಾನಿಗಳು ನೀಡಿದ ಸೂಚನೆಯಂತೆ ನಾವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಡಿದ್ದೇವೆ, ಸೈನಿಕರ ದೈಹಿಕ ಚಟುವಟಿಕೆಯಿಂದ ಫಿಟ್ನೆಸ್ಗೆ ತೊಂದರೆ ಆಗದ ಹಾಗೆ ತರಬೇತಿ ಮುಂದುವರೆಸಿ ದೇಶದ ಭದ್ರತೆಗೆ ನಮ್ಮ ಕರ್ತವ್ಯ ಮುಂದುವರೆಸುತ್ತಿದ್ದೇವೆ. ಎದೆಗುಂದದ ಸೈನಿಕರ ಸ್ಥೈರ್ಯಕ್ಕಾಗಿ ಇಂತಹಾ ಕ್ರೀಡಾ ಕೂಟಗಳು ಸಹಕಾರಿ ಆಗಲಿವೆ ಎಂದು ಬಿ.ಎಸ್.ಎಫ್ ಐಜಿಪಿ ಡಾ.ಸಾಬು ಎ ಜೋಸೆಫ್ ಸಂತಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ