ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಕಂಗಾಲು...!

news18
Updated:July 12, 2018, 6:55 PM IST
ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಕಂಗಾಲು...!
news18
Updated: July 12, 2018, 6:55 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ (ಜುಲೈ 12) :  ಯೋಧರ ಬದುಕೆ ಹಾಗೇ.. ಹೆತ್ತವರು, ಮಡದಿ, ಮಕ್ಕಳನ್ನು ಬಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಈ ವೇಳೆಯಲ್ಲಿ ಯೋಧರು ತಮ್ಮ ಪ್ರಾಣವನ್ನೆ ಬಲಿ ಕೊಡುವ ಸ್ಥಿತಿ ನಿರ್ಮಾಣವಾಗಿ ಬಿಡುತ್ತೆ. ಹೀಗೆ ದೇಶಕ್ಕಾಗಿ ವೀರಮರಣವನ್ನು ಅಪ್ಪಿದ ಯೋಧನ ಕುಟುಂಬದ ಸ್ಥಿತಿ ಹೇಗಿದೆ ಗೊತ್ತಾ.. ಇಲ್ಲಿದೇ ನೋಡಿ ನ್ಯೂಸ್ 18 ಕನ್ನಡದ ಸ್ಪೇಷಲ್ ರಿಪೋರ್ಟ್......

ಇದೇ ಜುಲೈ 9ರಂದು ಛತ್ತಿಸಗಢದಲ್ಲಿ ನಡೆದ ಸುಧಾರಿತ ಬಾಂಬ್ ಸ್ಟೋಟಕ್ಕೆ ಬಲಿಯಾದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ವೀರಯೋಧ ಸಂತೋಷ ಗುರವ್  ಕುಟುಂಬದ ಇಂದಿನ ಸ್ಥೀತಿ. ನಿನ್ನೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತಂದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಗನ ಅಗಲಿಕೆಯ ನಂಬುವ ಸ್ಥಿತಿಯಲ್ಲಿ ಇನ್ನೂ ಪೋಷಕರು ಇಲ್ಲ. ಪೋಷಕರಿಗೆ ಮುಂದೆ ಏನು ಎಂಬ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಕಾಡುತ್ತಿದೆ. ಮನೆಗೆ ಮಗನೇ ಆಧಾರಸ್ಥಂಭವಾಗಿದ್ದನು. ಹೀಗೆ ಜೀವನ ನಡೆಸೋದು ಹೇಗೆ ಬಂದು ವೃದ್ಧ, ತಂದೆ ತಾಯಿಯನ್ನು ಚಿಂತೆಗೆ ಇಡುಮಾಡಿದೆ.

ವೀರಯೋಧ ಸಂತೋಷ ತಂದೆ ಲಕ್ಷ್ಮಣ ಸಹ ಅತ್ಯಂತ ಬಡ ಕುಟುಂಬದ ವ್ಯಕ್ತಿಯಾಗಿದ್ದಾನೆ. ಇವರ ಬಳಿ ಕೇವಲ 1.5 ಎಕರೆ ಜಮೀನು ಇದ್ದು ಇದರಲ್ಲಿ5 ಜನ ಲಕ್ಷ್ಮಣ ಸಹೋದರರು ಹಂಚಿಕೊಂಡಿದ್ದಾರೆ. ಕೇವಲ 20 ಗುಂಟೆಯಷ್ಟು ಇರೋ ಜಮೀನಿನಲ್ಲಿ ವರ್ಷಕ್ಕೆ 4 ರಿಂದ 5 ಚೀಲ ಭತ್ತ ಬೆಳೆದ್ರೆ ಹೆಚ್ಚು. ಭತ್ತ ಬಿಟ್ಟು ಬೇರೆ ಬೆಳೆ ಹಾಕಿದ್ರೆ ಕಾಡು ಪ್ರಾಣಿಗಳು ತಿಂದು ಬಿಡುತ್ತದೆ. ಈ ಪರಿಸ್ಥಿತಿಯಲ್ಲಿಯೂ ಲಕ್ಷ್ಮಣ ತನ್ನ ಮೂರು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದಾರೆ.

ಇನ್ನೂ ಸಂತೋಷ ಗುರುವ ಕೇವಲ 1 ವರ್ಷದ ಹಿಂದೆ ಮದುವೆಯಾಗಿದ್ದರು. ಇದೀಗ ಪತ್ನಿಗೆ ಸಹ ಅನಾಥ ಭಾವ ಎದುರಾಗಿದೆ. ಯೋಧನ ಕುಟುಂಬಕ್ಕೆ ಇದೀಗ ಸರ್ಕಾರ ನೆರವಿಗೆ ಧಾವಿಸ ಬೇಕಿದೆ. ಇಲ್ಲಾವಾದಲ್ಲಿ ಮುಪ್ಪಾವಸ್ಥೆಯಲ್ಲಿ ವೀರಯೋಧನ ಸ್ಥಿತಿ ಗಂಭೀರವಾಗಲಿದೆ.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...