• Home
  • »
  • News
  • »
  • state
  • »
  • Suicide: ನಿನ್ನೆ 2ನೇ ಮದುವೆ ಗಲಾಟೆ, ಇಂದು ಮೊದಲನೇ ಹೆಂಡತಿ ಜೊತೆ ಆತ್ಮಹತ್ಯೆ! ಯೋಧನ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

Suicide: ನಿನ್ನೆ 2ನೇ ಮದುವೆ ಗಲಾಟೆ, ಇಂದು ಮೊದಲನೇ ಹೆಂಡತಿ ಜೊತೆ ಆತ್ಮಹತ್ಯೆ! ಯೋಧನ ಬಾಳಲ್ಲಿ ಅಸಲಿಗೆ ನಡೆದಿದ್ದೇನು?

ಕಿರಣ್ ಮತ್ತು ಆಶಾ

ಕಿರಣ್ ಮತ್ತು ಆಶಾ

2ನೇ ಮದುವೆ ಗಲಾಟೆ ಬಳಿಕ ಕಿರಣ್ ಕುಮಾರ್​ ಮತ್ತು ಆಶಾ ಕಾಡಿನತ್ತ ತೆರಳಿದ್ರು. ಬಳಿಕ ತನ್ನ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹಾಸನ (ನ.11) : ವಿಧವೆಯ ಜೊತೆ ಮದುವೆಯಾಗಿರೊ‌ ವಿಚಾರ ಮುಚ್ಚಿಟ್ಟು 2ನೇ ಮದುವೆ (Marriage) ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಮಂಟಪಕ್ಕೆ ಬಂದು ಮಹಿಳೆ ಮದುವೆ ನಿಲ್ಲಿಸಿದ್ರು.  ಇದರಿಂದ ಮನನೊಂದ ಯೋಧ (Soldier) ಕಿರಣ್ ಕುಮಾರ್ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರಣ್ ಹಾಗೂ ಆಶಾ ಮೃತ ದುರ್ದೈವಿಗಳಾಗಿದ್ದಾರೆ.  ಇಂದು (ನ. 11) ಯೋಧ ಕಿರಣ್ ಕುಮಾರ್ ಮತ್ತು ಆಶಾ ಹಾಸನ (Hassan) ತಾಲೂಕಿನ ಹೊಂಗೆರೆ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಶರಣಾಗಿದ್ದಾರೆ. 


ಕಲ್ಯಾಣ ಮಂಟಪದಲ್ಲಿ ಮೊದಲ ಪತ್ನಿ ಗಲಾಟೆ


ಯೋಧ ಕಿರಣ್ ಕುಮಾರ್ ವಿಧವೆ ಆಶಾ ಎಂಬುವರನ್ನು ಮದುವೆಯಾಗಿದ್ದರು. ಬಳಿಕ 2ನೇ ಮದುವೆ ವಿಷಯ ಬಚ್ಚಿಟ್ಟು ಯೋಧ ಕಿರಣ ಕುಮಾರ್​ 2ನೇ ಮದುವೆಯಾಗಲು ತಯಾರಿ ನಡೆಸಿದ್ದನು. ಹಾಸನ ನಗರದ ಹೊರ ವಲಯದ ಬೂವನಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಕಲ ಸಿದ್ಧತೆಯಾಗಿತ್ತು. ವಧು-ವರ ಸಪ್ತಪದಿ ತುಳಿಯುವುದೊಂದೆ ಬಾಕಿ ಇತ್ತು. ಆದ್ರೆ ಈ ವೇಳೆ ಕಿರಣ್​ ಕುಮಾರನ ಮೊದಲನೇ ಹೆಂಡತಿ ಆಶಾ ಕಲ್ಯಾಣ ಮಂಟಪಕ್ಕೆ ಬಂದು ರಾದ್ಧಾಂತ ಮಾಡಿ ಮದುವೆ ನಿಲ್ಲಿಸಿದ್ದಾರೆ.




ವಿಧವೆ ಮಹಿಳೆ ಜೊತೆ ಗುಟ್ಟಾಗಿ ವಿವಾಹ


ವಿಧವೆ ಮಹಿಳೆ ಆಶಾ ಎಂಬಾಕೆಯನ್ನು ಕಿರಣ್​ ಕುಮಾರ್​ ಅವರು 6 ತಿಂಗಳ ಹಿಂದೆ ಮನೆಯೊಳಗೆ ದೇವರ ಮುಂದೆ ತಾಳಿ ಕಟ್ಟಿ ಮದುವೆಯಾಗಿದ್ದರು. ಈಗ ಮತ್ತೊಂದು ಮದುವೆ ಆಗುತ್ತಿದ್ದಾರೆಂಬುದು ಆಶಾ ಆರೋಪ ಮಾಡಿದ್ದಾರೆ. ಮಹಿಳೆ ಬಂದು, ವರ (ಯೋಧ) ಕಿರಣ್ ಕುಮಾರ್ ವಿಚಾರ ಬಹಿರಂಗ ಮಾಡುತ್ತಲೇ ಹುಡುಗಿ ಮನೆಯವರು ಮದುವೆ ನಿಲ್ಲಿಸಿದರು.


ಕಿರಣ್ , ಆಶಾ ಗಲಾಟೆ


ಯೋಧ ಕಿರಣ್​ ಕುಮಾರ್​ನಿಂದ ತನಗಾದ ವಂಚನೆ ಬಗ್ಗೆ ಮಹಿಳೆ ಮದುವೆ ಮಂಟಪದಲ್ಲಿ ಹೇಳಿದ್ದಾಳೆ. ಬಳಿಕ ಹುಡುಗಿ ಮನೆಯವರು ಯೋಧನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಟದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಶಾ ಜೊತೆ ಮಂಟಪದಲ್ಲೇ ಕಿರಣ್​ ಗಲಾಟೆ ಕೂಡ ಮಾಡಿದ್ದ


ಸ್ಥಳಕ್ಕೆ ಪೊಲೀಸರ ಭೇಟಿ, ಸಂಧಾನ


ಮಹಿಳೆಯ ಹೇಳಿಕೆ ಮದುವೆ ಸಂಭ್ರಮದಲ್ಲಿದ್ದವರಿಗೆ ಶಾಕ್ ನೀಡಿತು. ವಿಷಯ ತಿಳಿದು ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದರು.


ಇದನ್ನೂ ಓದಿ:  Tumakuru: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಅವಳಿ ಶಿಶು, ಬಾಣಂತಿ ಸಾವು; ಡಾಕ್ಟರ್​, ನರ್ಸ್​ ಸಸ್ಪೆಂಡ್​


ಕಾಡಿನ ಬಳಿ ಮರಕ್ಕೆ ಆತ್ಮಹತ್ಯೆ


ನಂತರ ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನವಾದ ಬಳಿಕ ಯೋಧ ಕಿರಣ್ ಕುಮಾರ್​ ಮತ್ತು ಆಶಾ ಹೊಂಗೆರೆ ಅರಣ್ಯದ ಬಳಿ ತೆರಳಿದ್ದಾರೆ. ಅಲ್ಲಿ ತನ್ನ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಂಟಪದಲ್ಲೇ ಬಿತ್ತು ಧರ್ಮದೇಟು


ಮತ್ತೊಂದು ಪ್ರತ್ಯೇಕ ಪ್ರಕಣ; ಬೆಂಗಳೂರಿನಲ್ಲಿ ತನ್ನ ಸಂಬಂಧಿಯೊಬ್ಬರನ್ನೇ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಪಾಪಿ ಆಕೆಯಿಂದ ದೂರವಾಗಿದ್ದ. ತನ್ನ ಹಳೆ ಮದುವೆ ವಿಚಾರ ಮುಚ್ಚಿಟ್ಟು ಹಾಸನದಲ್ಲಿ ಹುಡುಗಿ ನೋಡಿ ಮದುವೆ ತಯಾರಿ ಮಾಡಿಕೊಂಡಿದ್ದ. ಮದುವೆ ವಿಚಾರ ತಿಳಿದ ಈತನ ಮೊದಲ ಪತ್ನಿ ಹೇಗೋ ಕೊನೆ ಗಳಿಗೆಯಲ್ಲಿ ಹುಡುಗಿ ಮನೆಯವರನ್ನು ಸಂಪರ್ಕ ಮಾಡಿ ತನ್ನ ಮದುವೆ ಫೋಟೋ ಕಳಿಸಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಮದುವೆ ನಿಲ್ಲಿಸಿದ್ದಾರೆ. ಬಳಿಕ ಮಧುಸೂದನಿಗೆ ಧರ್ಮದೇಟು ಕೊಟ್ಟಿದ್ದಾರೆ.

Published by:ಪಾವನ ಎಚ್ ಎಸ್
First published: