HOME » NEWS » State » SOLAR FENCING SYSTEM TO PROTECT CROPS FROM ELEPHANT ATTACKS IN KOLAR RRK SESR

Elephant Attack: ಆನೆ ದಾಳಿಯಿಂದ ಬೆಳೆ ರಕ್ಷಿಸಲು ಸೋಲಾರ್ ಫೆನ್ಸಿಂಗ್ ವ್ಯವಸ್ಥೆ: ಅರಣ್ಯ ಇಲಾಖೆ ಹಾಗೂ ಐಐಎಸ್​ಸಿ ಜಂಟಿ ಕಾರ್ಯ

ರೈತರ ಬೆಳೆಗಳನ್ನ ರಕ್ಷಿಸಲು ಸೋಲಾರ್ ಫೆನ್ಸಿಂಗ್  ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್​​ ಸೈನ್ಸ್ ಸಂಸ್ಥೆಯು ಕೈ ಜೋಡಿಸಿದೆ.

news18-kannada
Updated:March 18, 2021, 5:22 PM IST
Elephant Attack: ಆನೆ ದಾಳಿಯಿಂದ ಬೆಳೆ ರಕ್ಷಿಸಲು ಸೋಲಾರ್ ಫೆನ್ಸಿಂಗ್ ವ್ಯವಸ್ಥೆ: ಅರಣ್ಯ ಇಲಾಖೆ ಹಾಗೂ ಐಐಎಸ್​ಸಿ ಜಂಟಿ ಕಾರ್ಯ
ರೈತರ ಬೆಳೆಗಳನ್ನ ರಕ್ಷಿಸಲು ಸೋಲಾರ್ ಫೆನ್ಸಿಂಗ್  ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್​​ ಸೈನ್ಸ್ ಸಂಸ್ಥೆಯು ಕೈ ಜೋಡಿಸಿದೆ.
  • Share this:
ಕೋಲಾರ (ಮಾ. 18): ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಯಲ್ಲಿ ಆನೆ ದಾಳಿಗೆ ರೈತರು ತತ್ತರಿಸಿ ಹೊಗಿದ್ದಾರೆ.  ದೊಣಿಮಡುಗು ಗ್ರಾಮ ಪಂಚಾಯ್ತಿಗೆ ಸೇರುವ ಅರಣ್ಯ ಪ್ರದೇಶದ ಅಂಚಿನಲ್ಲಿರುವ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ, ವಾರಕ್ಕೆ ಎರಡು-ಮೂರು ಬಾರಿ ಆನೆಗಳ  ದಾಳಿ ಮಾಡುತ್ತಲೇ ಇದೆ. ಇದರಿಂದ  ಟೊಮೆಟೊ, ಕೋಸು, ತೆಂಗು , ಭತ್ತ, ಬದನೆ ಬೆಳೆಗಳು ರೈತರ ಕೈ ಸೇರುತ್ತಿಲ್ಲ. ಈ ಆನೆ ಹಾವಳಿಯಿಂದ ಬೆಳೆದ ಬೆಳೆ ಕೈಗೆ ಬಾರದಂತೆ ಆಗಿದ್ದು, ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಆನೆ ಹಾವಳಿ ತಡೆಗಟ್ಟುವುದು ಅರಣ್ಯ ಇಲಾಖೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ರೈತರ ಬೆಳೆಗಳನ್ನ ರಕ್ಷಿಸಲು ಸೋಲಾರ್ ಫೆನ್ಸಿಂಗ್  ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್​​ ಸೈನ್ಸ್ ಸಂಸ್ಥೆಯು ಕೈ ಜೋಡಿಸಿದೆ.  ಆನೆಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಮುಂದುವರೆದಿದ್ದು, ಇದೇ ವಿಚಾರದ ಮೇಲೆ ಸಂಸ್ಥೆಯು ಒಂದು ವರದಿಯನ್ನು ತಯಾರಿಸುತ್ತಿದೆ.  ಕೋಲಾರ ಗಡಿಯಲ್ಲೂ ಆನೆಗಳ ಮಾರಕ ದಾಳಿಯಿಂದ ಅಮಾಯಕ ರೈತರು ಸಾವನ್ನಪ್ಪಿದ್ದಾರೆ. ಹೀಗಾಗಿಯೇ ಚಾಮರಾಜನಗರ, ರಾಮನಗರ,  ಕೋಲಾರದಲ್ಲೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್  ಸಂಸ್ಥೆ, ಸೋಲಾರ್  ಫೆನ್ಸಿಂಗ್ ನಿರ್ಮಿಸಿ ರೈತರಿಗೆ ಕೈಲಾದ ಸಹಾಯ ಮಾಡುತ್ತಿದೆ.

ಬಂಗಾರಪೇಟೆ ತಾಲೂಕಿನಲ್ಲಿ  ತಳೂರು, ಬತ್ತಲಹಳ್ಳಿ  ಗ್ರಾಮಗಳು ಅರಣ್ಯ ಪ್ರದೇಶದ ಪಕ್ಕದಲ್ಲಿಯೇ ಇದ್ದು, ಇಲ್ಲಿ ಆನೆ ಹಾವಳಿ ಹೆಚ್ಚಿದೆ. ತಳೂರು ಗ್ರಾಮದ ರೈತ ಸಂಪಂಗಿಗೌಡ ಎನ್ನುವರ 4 ಎಕರೆಯ ಸುತ್ತಮುತ್ತ ಸೋಲಾರ್ ಫೆನ್ಸಿಂಗ್ ವ್ಯವಸ್ತೆಯನ್ನ ಉಚಿತವಾಗಿ ನಿರ್ಮಿಸಲಾಗಿದೆ. ಇದರಿಂದಾಗಿ ಆನೆಗಳು ಫೆನ್ಸಿಂಗ್‍ಗೆ ತಾಕಿದಲ್ಲಿ ಒಂದು ಕ್ಷಣ ಶಾಕ್ ಹೊಡೆಯುವ ಅನುಭವ ಉಂಟಾಗಿ ಆನೆಗಳು ಒಳ ಪ್ರವೇಶಿಸುವ ಸಾಧ್ಯತೆಗಳು ಕಡಿಮೆಯಾಗಿವೆ. ಫೆನ್ಸಿಂಗ್ ಹಾಕಿರುವ ಹಿನ್ನಲೆ  ಕಳೆದ ಒಂದು ವಾರದಿಂದ ಸಂಪಂಗಿಗೌಡ ಅವರ ತೋಟ ಸೇರಿದಂತೆ,  ಅಕ್ಕ ಪಕ್ಕದಲ್ಲೆ ಇರುವ 15 ರೈತರ ತೋಟಗಳಿಗೆ ಆನೆಗಳು ಲಗ್ಗೆಯಿಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾತನಾಡಿರುವ ರೈತ ಸಂಪಂಗಿಗೌಡ ಅರಣ್ಯ ಇಲಾಖೆಯವರು ಈ ಹಿಂದೆ ಸೈರನ್ ಅಳವಡಿಸಿ ಆನೆಗಳಿಗೆ ಭೀತಿ ಹುಟ್ಟುವಂತೆ ಮಾಡಿದ್ದರು. ಕಳೆದ 6 ತಿಂಗಳಿಂದ ಆನೆ ಹಾವಳಿ ತಪ್ಪಿಸಲು ಮನವಿ ಮಾಡಿದ್ದಕ್ಕೆ ಉಚಿತವಾಗಿಯೇ ಸೋಲಾರ್ ಫೆನ್ಸಿಂಗ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.  ಪ್ರತಿದಿನ ಸಂಜೆ 5 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೂ ಸೋಲಾರ್ ಫೆನ್ಸಿಂಗ್ ಭದ್ರತೆ ಇರುವ ಕಾರಣ ಆನೆಗಳು ಈ ಕಡೆ ಸುಳಿಯುತ್ತಿಲ್ಲ. ಅಧಿಕಾರಿಗಳಿಗೆ ಧನ್ಯವಾದಗಳು ಎಂದರು.

ಸೋಲಾರ್ ಫೆನ್ಸಿಂಗ್ ತಪ್ಪಿಸಿಕೊಂಡೆ ಲಗ್ಗೆ ಇಡುತ್ತಿರುವ ಆನೆಹಿಂಡು.

ತಳೂರು ಗ್ರಾಮದಲ್ಲಿ ಎರಡು ಕಡೆ  ಸೋಲಾರ್ ಫೇನ್ಸಿಂಗ್ ಹಾಕಲಾಗಿದ್ದು, ಎಲ್ಲೆಡೆ ಆರಂಭಿಕವಾಗಿ ಯೋಜನೆ ಯಶಸ್ವಿಯಾಗಿದೆ. ಆದರೆ, ಆನೆ ಹಾವಳಿ ಮಾತ್ರ ಮತ್ತೆ ಕಂಡು ಬಂದಿದೆಯೆಂದು ರೈತರು ಹೇಳುತ್ತಿದ್ದಾರೆ. ರೈತರು ಹಾಕಿರುವ ಸೋಲಾರ್ ಫೆನ್ಸಿಂಗ್  ಕಡೆಯಿಂದ  ಅಲ್ಲದೆ,  ಇದೀಗ ಬೇರೆ ದಾರಿಯಿಂದ ಆನೆಗಳು ಗ್ರಾಮಗಳಿಗೆ ಲಗ್ಗೆಯಿಡುತ್ತಿದ್ದು ಮತ್ತೊಮ್ಮೆ ರೈತರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವಾಗಿದೆ.

ಈ ಬಗ್ಗೆ ಮಾತನಾಡಿರುವ ರೈತ ಸಂಪಂಗಿಗೌಡ, ನಮ್ಮ ತೋಟಕ್ಕೆ ಸೋಲಾರ್ ಫೆನ್ಸಿಂಗ್ ವ್ಯವಸ್ಥೆ ಮಾಡಿರುವ ಕಾರಣ ಆನೆಗಳು ಲಗ್ಗೆಯಿಡಲು ಸಾಧ್ಯವಾಗುತ್ತಿಲ್ಲ,  ಆದ್ರೆ ಸುತ್ತಮುತ್ತಲ ಪ್ರದೇಶದಲ್ಲಿ ಆನೆಗಳು ನುಗ್ಗಲು ಆರಂಭಿಸಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನು ಓದಿ: ಮೈಸೂರಿನಲ್ಲಿ ಕೊರೋನಾ ಎರಡನೇ ಅಲೆ ಆತಂಕ: ಗಡಿಗಳಲ್ಲಿ ಕಟ್ಟೆಚ್ಚರ, ನಂಜನಗೂಡು ರಥೋತ್ಸವ ರದ್ದು

ಸೋಲಾರ್ ಫೆನ್ಸಿಂಗ್ ಕುರಿತು ಮಾತನಾಡಿರುವ ಜಿಲ್ಲಾ ಅರಣ್ಯಾಧಿಕಾರಿ ಈ ಶಿವಶಂಕರ ಅವರು, ಸೋಲಾರ್ ಫೆನ್ಸಿಂಗ್ ಹಾಕಿರುವ ಕಡೆ ಬಿಟ್ಟು ಆನೆಗಳು ಬೇರೆಡೆಯಿಂದ ಪ್ರವೇಶಿಸಿ ಬೆಳೆನಾಶ ಮಾಡುತ್ತಿರುವ ಮಾಹಿತಿ ಬಂದಿದೆ. ಆನೆ ಹಾವಳಿಯಿರುವ ಅರಣ್ಯ ಪ್ರದೇಶದಲ್ಲಿ, 5 ಕಿಲೋ ಮೀಟರ್ ಉದ್ದ ಸೋಲಾರ್ ಫೆನ್ಸಿಂಗ್ ಅಳವಡಿಸಲು ಅನುದಾನ ಬಂದಿದ್ದು, ಈಗಾಗಲೇ ಖಾಸಗಿಯವರಿಗೆ ಗುತ್ತಿಗೆಯನ್ನ ನೀಡಲಾಗಿದೆ. ಒಂದು ತಿಂಗಳೊಳಗೆ ಕಾಮಗಾರಿಯು ಆರಂಭವಾಗಲಿದೆ ಎಂನ ಭರವಸೆ ನೀಡಿದ್ದಾರೆ.ಸಬ್ಸಿಡಿ ದರದಲ್ಲು ರೈತರಿಗೆ ಸಿಗಲಿದೆ ಸೋಲಾರ್ ಫೆನ್ಸಿಂಗ್

ರೈತರು ಸ್ವಂತವಾಗಿ ತಾವೇ ಸೋಲಾರ್ ಫೆನ್ಸಿಂಗ್ ಹಾಕಿಸಿಕೊಂಡರು. ಅರಣ್ಯ ಇಲಾಖೆ ಸಬ್ಸಿಡಿ ಹಣವನ್ನ ನೀಡುವುದಾಗಿ, ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ ಅವರು ತಿಳಿಸಿದ್ದಾರೆ. 2016 ರಿಂದಲೂ ಈ ಯೋಜನೆ ಜಾರಿಯಲ್ಲಿದ್ದು ರೈತರು ಸೋಲಾರ್ ಫೆನ್ಸಿಂಗ್ ಹಾಕಿಸಿಕೊಳ್ಳಲು ನಿಗದಿ ಸಂಸ್ಥೆಯೆಂದು ಗುರುತು ಮಾಡಿಲ್ಲ, ತಮಗಿಷ್ಟ ಬಂದ ಕಡೆಯಲ್ಲಿ ವಸ್ತುಗಳನ್ನು ಖರೀದಿಸಿ ಸೋಲಾರ್ ಭದ್ರತೆ ಒದಗಿಸಿಕೊಂಡರೆ, ಸಬ್ಸಿಡಿ ಹಣವನ್ನ ನೀಡುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಆದರೆ, ಸೋಲಾರ್ ಫೆನ್ಸಿಂಗ್ ನಿರ್ಮಿಸಲು ರೈತರು 2 ಲಕ್ಷ 30 ಸಾವಿರ ಹಣ ಗರಿಷ್ಟ ಮಿತಿಯನ್ನು ಮಾತ್ರ ಹೊಂದಿದ್ದು, ಇದರಲ್ಲಿ ಶೇಖಡಾ 50 ರಷ್ಟು ಅಂದರೆ 1 ಲಕ್ಷ 15 ಸಾವಿರ ಹಣವು  ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ. ಹೀಗಾಗಿ ಕಾಡಂಚಿತ 5 ಕಿಲೋ  ಮೀಟರ್ ದೂರದಲ್ಲಿರುವ  ರೈತರು ಮಾತ್ರ ಈ ಯೋಜನೆಗೆ ಒಳಪಡಲಿದ್ದು, ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾ  ಅರಣ್ಯಾಧಿಕಾರಿ ಶಿವಶಂಕರ ಅವರ ಮನವಿ ಮಾಡಿಕೊಂಡಿದ್ದಾರೆ.
Published by: Seema R
First published: March 18, 2021, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories