ನಾಳೆ ಕಂಕಣ ಸೂರ್ಯಗ್ರಹಣ; ಉಡುಪಿ ಕೃಷ್ಣಮಠ ಹಾಗೂ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ

ಅನಾದಿಕಾಲದಿಂದಲೂ ಗ್ರಹಣ ಕಾಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಮಹಾ ಮಂಗಳಾರತಿ ಈ ಬಾರಿಯೂ ನಡೆಯಲಿದೆ. ಗ್ರಹಣವಾದ ನಂತರ ಮಧ್ಯಾಹ್ನದ ಪೂಜೆ ನಡೆಯಲಿದೆ.

ಉಡುಪಿ ಕೃಷ್ಣ ಮಠ

ಉಡುಪಿ ಕೃಷ್ಣ ಮಠ

  • Share this:
ಉಡುಪಿ(ಡಿ.25): ನಾಳೆ‌ ಕಂಕಣ ಸೂರ್ಯಗಣ ಸಂಭವಿಸುವ ಹಿನ್ನಲೆ ಜಿಲ್ಲೆಯ ಪ್ರಸಿದ್ದ ದೇವಾಲಯಗಳಲ್ಲಿ‌‌ ಸಕಲ‌ ಸಿದ್ದತೆ ಮಾಡಿಕೊಳ್ಳಲಾಗಿದೆ.‌ ಬೆಳಿಗ್ಗೆ 8ಗಂಟೆ 3ನಿಮಿಷದಿಂದ 11ಗಂಟೆ 4ನಿಮಿಷದವರೆಗೆ ನಡೆಯಲಿರುವ ಗ್ರಹಣದ ವೇಳೆ ದೇವಾಲಯದ ಬಾಗಿಲು ಎಂದಿನಂತೆ ತೆರೆದಿರುತ್ತದೆ. ‌ಬೆಳಗ್ಗೆ 4.30 ಕ್ಕೆ ಕೃಷ್ಣನಿಗೆ ನಿರ್ಮಾಲ್ಯ ಪೂಜೆ, ಎಲ್ಲಾ ಅಲಂಕಾರ ತೆಗೆದ ಬಳಿಕ‌ ಭಕ್ತರಿಗೆ ಕೃಷ್ಣ‌ದರ್ಶನಕ್ಕೆ‌ ಅವಕಾಶ ಕಲ್ಪಿಸಲಾಗಿದೆ.

ಗ್ರಹಣ‌ ಮುಗಿಯುವವರೆಗೆ ನಿರ್ಜಲ, ನಿರಾಹಾರ ಉಪವಾಸ‌ ನಡೆಯಲಿದ್ದು ಕೃಷ್ಣಮಠದಲ್ಲಿ ಗ್ರಹಣ ಮೋಕ್ಷ ನಂತರ ದೈನಂದಿನ 16 ವಿಧದ ಪೂಜೆ ನಡೆಯಲಿದೆ.‌ ವಿಷ್ಣು ಸಹಸ್ರನಾಮ ಪಾರಾಯಣ, ನವಗ್ರಹ ಜಪ ಹೋಮ ಈ‌ ವೇಳೆ ನಡೆಯುತ್ತದೆ. ಬೆಳಗ್ಗೆ 11 ರ ನಂತರ ಕೃಷ್ಣಮಠದಲ್ಲಿ ಅಡುಗೆ ಮಾಡಿ ಭಕ್ತರಿಗೆ ಅನ್ನ ಪ್ರಸಾದ ವಿತರಣೆ‌ ನಡೆಯಲಿದೆ.‌

ನಾನು ತಪ್ಪು ಮಾಡಿದ್ದರೆ ಈಗಲೂ ಜೈಲಿಗೆ ಹಾಕಲಿ, ಆದ್ರೆ ಕಾಂಪ್ರಮೈಸ್​ ಆಗಲ್ಲ; ಗುಡುಗಿದ ಡಿಕೆ ಶಿವಕುಮಾರ್​​​

ಇನ್ನು, ಜಿಲ್ಲೆಯ ಮತ್ತೊಂದು ಪ್ರಸಿದ್ದ ಕಾರಣಿಕ‌ ದೇವಾಲಯ ಕೊಲ್ಲೂರಿನಲ್ಲೂ ಗ್ರಹಣದ ವೇಳೆ ದೇವಸ್ಥಾನ ತೆರೆದಿರುತ್ತದೆ.‌ ಗ್ರಹಣ ಆರಂಭ ಮೊದಲು ಮೂಕಾಂಬಿಕೆಗೆ ಬೆಳಗ್ಗಿನ ಪೂಜೆಯನ್ನು ಮುಗಿಸಲಾಗುತ್ತದೆ. ಅನಾದಿಕಾಲದಿಂದಲೂ ಗ್ರಹಣ ಕಾಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಮಹಾ ಮಂಗಳಾರತಿ ಈ ಬಾರಿಯೂ ನಡೆಯಲಿದೆ. ಗ್ರಹಣವಾದ ನಂತರ ಮಧ್ಯಾಹ್ನದ ಪೂಜೆ ನಡೆಯಲಿದೆ. ಮಧ್ಯಾಹ್ನ ಊಟದ‌ ಬದಲು ಫಲಾಹಾರ ವ್ಯವಸ್ಥೆ ಇದ್ದು ರಾತ್ರಿ ಎಂದಿನಂತೆ ಊಟವಿದೆ.

ಕೊಲ್ಲೂರು ಮೂಕಾಂಬಿಕೆ


ಗ್ರಹಣದ ಕೌತುಕವನ್ನ ಕಣ್ತುಂಬಿಕೊಳ್ಳಲು ಪೂರ್ಣಪ್ರಜ್ಞ ಕಾಲೇಜಿನ‌ ಅಸ್ಟ್ರೋನಾಮರ್ಸ್ ಕ್ಲಬ್ ಗ್ರಹಣ ವೀಕ್ಷಣೆ ವ್ಯವಸ್ಥೆ ಮಾಡಿದೆ.‌ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಗ್ರಹಣ ದರ್ಶನ ಮಾಡಲಾಗಿದ್ದು ಕಾಲೇಜಿಗೆ ಗ್ರಹಣದ ಮಾಹಿತಿ‌ ನೀಡಲು ಇಬ್ಬರು ಇಸ್ರೋ ವಿಜ್ಞಾನಿಗಳು ಆಗಮಿಸಲಿದ್ದಾರೆ.

ಅಟಲ್ ಭೂಜಲ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಉಪಯೋಗ

 
Published by:Latha CG
First published: