ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಕಂಕಣ ಸೂರ್ಯಗ್ರಹಣ; ಬೆಂಗಳೂರಿನಲ್ಲಿ ಗೋಚರವಾಗೋದು ಡೌಟ್​

ಇಂದು ಬೆಳಗ್ಗೆ ಸಂಭವಿಸುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂದು ಪ್ರಮೋದ್​ ಗಲಗಲಿ ಎಚ್ಚರಿಕೆ ನೀಡಿದ್ದಾರೆ.  ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು. ಸುರಕ್ಷಿತಾ ವಿಧಾನವಾದ ಸೋಲಾರ್ ಗಾಗಲ್ಸ್, ವೆಲ್ಡರ್ಸ್ ಗ್ಲಾಸ್, ಅಲ್ಟ್ರಾ ವೈಲೆಟ್ ರೇಸ್ ಮೂಲಕ ಗ್ರಹಣ ವೀಕ್ಷಿಸಬಹುದು.  2010 ರಲ್ಲಿ ಈ ಕಂಕಣ ಗ್ರಹಣ ಗೋಚರವಾಗಿತ್ತು. ಅದಾದ ಬಳಿಕ ಈ ವರ್ಷ ಬರುತ್ತಿದೆ ಎಂದರು.

ಕಂಕಣ ಸೂರ್ಯಗ್ರಹಣ

ಕಂಕಣ ಸೂರ್ಯಗ್ರಹಣ

  • Share this:
ಬೆಂಗಳೂರು(ಡಿ.26): ಇಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಿವೆ. ಯಾವುದೇ ಪೂಜೆ-ಪುನಸ್ಕಾರ ಇರುವುದಿಲ್ಲ.  ನಾಳೆ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ಬಗ್ಗೆ ಬೆಂಗಳೂರು ನೆಹರೂ ತಾರಾಯಲದ ನಿರ್ದೇಶಕ ಪ್ರಮೋದ್​ ಗಲಗಲಿ ಮಾಹಿತಿ ನೀಡಿದ್ದಾರೆ. 

ಕಂಕಣ ಸೂರ್ಯಗ್ರಹಣ ಇಂದು ಬೆಳಗ್ಗೆ 8.05.ಕ್ಕೆ ಆರಂಭವಾಗುತ್ತದೆ. 9 ಗಂಟೆಯಷ್ಟರಲ್ಲಿ ಸಂಪೂರ್ಣ ಗೋಚರವಾಗುತ್ತದೆ. 11 ಗಂಟೆಯಷ್ಟರಲ್ಲಿ ಸಂಪೂರ್ಣವಾಗಿ ಗ್ರಹಣ ಮುಗಿದುಹೋಗುತ್ತದೆ. ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ ಇದೆ. ಈ ಹಿನ್ನೆಲೆ ಸೂರ್ಯ ದೊಡ್ಡದಾಗಿರುತ್ತಾನೆ. ಚಂದ್ರ ಅಡ್ಡ ಬಂದರೂ ಕೂಡ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬಳೆಯ ಆಕಾರದಲ್ಲಿ ಸೂರ್ಯ ಗೋಚರ ಆಗುತ್ತಾನೆ ಎಂದು ಪ್ರಮೋದ್​ ತಿಳಿಸಿದ್ದಾರೆ.

ಆದರೆ ಮೋಡಗಳು ದಟ್ಟವಾಗಿ ಆವರಿಸಿಕೊಂಡರೆ, ಮೋಡ ಮುಸುಕಿದ ವಾತಾವರಣವಿದ್ದರೆ ಸೂರ್ಯಗ್ರಹಣ ಗೋಚರವಾಗುವುದಿಲ್ಲ ಎಂದು ಸಹ ಹೇಳಿದ್ದಾರೆ.

ಬಾಗಲಕೋಟೆಗೆ ತಡರಾತ್ರಿ ಬಂದು ಬೆಳ್ಳಂಬೆಳಗ್ಗೆ ನಿರ್ಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ;ಯಾಕೆ ಗೊತ್ತಾ?

ಇಂದು ಬೆಂಗಳೂರಿನಲ್ಲಿ ಪಾರ್ಶ್ವಗ್ರಹಣ ಗೋಚರವಾಗುತ್ತದೆ. ಹೆಚ್ಚು ಮೋಡ ಇರುವುದರಿಂದ ಕಂಕಣ ಸೂರ್ಯ ಗ್ರಹಣ ಗೋಚರವಾಗುವುದಿಲ್ಲ. ನಗರದಲ್ಲಿ ಶೇ. 90ರಷ್ಟು ಸೂರ್ಯಗ್ರಹಣ ಗೋಚರವಾಗುತ್ತದೆ. ಮಡಿಕೇರಿ, ಚಾಮರಾಜನಗರ, ಊಟಿ, ಕಣ್ಣೂರು, ಕೊಯಮತ್ತೂರು, ಮಧುರೈನಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗುತ್ತದೆ ಎಂದು ಹೇಳಿದರು.

ಬರಿಗಣ್ಣಿನಿಂದ ನೋಡಲೇಬಾರದು

ಇಂದು ಬೆಳಗ್ಗೆ ಸಂಭವಿಸುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂದು ಪ್ರಮೋದ್​ ಗಲಗಲಿ ಎಚ್ಚರಿಕೆ ನೀಡಿದ್ದಾರೆ.  ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು. ಸುರಕ್ಷಿತಾ ವಿಧಾನವಾದ ಸೋಲಾರ್ ಗಾಗಲ್ಸ್, ವೆಲ್ಡರ್ಸ್ ಗ್ಲಾಸ್, ಅಲ್ಟ್ರಾ ವೈಲೆಟ್ ರೇಸ್ ಮೂಲಕ ಗ್ರಹಣ ವೀಕ್ಷಿಸಬಹುದು.  2010 ರಲ್ಲಿ ಈ ಕಂಕಣ ಗ್ರಹಣ ಗೋಚರವಾಗಿತ್ತು. ಅದಾದ ಬಳಿಕ ಈ ವರ್ಷ ಬರುತ್ತಿದೆ ಎಂದರು.

 ಬೆಂಗಳೂರಿನಲ್ಲಿ ಸೂರ್ಯಗ್ರಹಣ ಗೋಚರ ಅನುಮಾನ

ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರುವ ಹಿನ್ನೆಲೆ, ಇಂದು ಬೆಂಗಳೂರಿನಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಹೆಚ್ಚು ಮೋಡಗಳನ್ನು ಸೂರ್ಯನನ್ನು ಸುತ್ತುವರೆದರೆ, ಅಷ್ಟಾಗಿ ಗ್ರಹಣ ಗೋಚರವಾಗಲ್ಲ.ಇಂದು ಸಹ ಸಿಲಿಕಾನ್​ ಸಿಟಿಯಲ್ಲಿ ಮೋಡ ಮುಸುಕಿದ ವಾತಾವರಣ ಇದೆ. ಈ ವಾತಾವರಣ ಇನ್ನೂ ನಗರದಲ್ಲಿ ಎರಡು ದಿನಗಳ ಕಾಲ ಮುಂದುವರೆಯಲಿದೆ.  ಹೀಗಾಗಿ‌ ನಾಳೆ ಗ್ರಹಣ ಗೋಚರವಾಗೋದು ಅನುಮಾನ ಎನ್ನಲಾಗುತ್ತಿದೆ.

ಅಟಲ್ ಭೂಜಲ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಉಪಯೋಗ

 

9 ವರ್ಷಗಳ ಬಳಿಕ ಕಂಕಣ ಸೂರ್ಯಗ್ರಹಣ

9 ವರ್ಷಗಳ ಬಳಿಕ ಸಂಭವಿಸುತ್ತಿರುವ ಕಂಕಣ ಸೂರ್ಯ ಗ್ರಹಣ ಇದಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳು ಹಾಗೂ ಜನರು ಕಾತರರಾಗಿದ್ದಾರೆ. ಬೆಂಗಳೂರು  ನೆಹರೂ ಪ್ಲಾನಿಟೋರಿಯಂನಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ಟೆಲಿಸ್ಕೋಪ್ ಇರಿಸಲಾಗಿದೆ. ಸಿಲೋಸ್ಟಾಟ್ ನ ಮೂಲಕ ಗ್ರಹಣ ವೀಕ್ಷಣೆ ಮಾಡಲಾಗುತ್ತದೆ. ಸಿಲೋಸ್ಟಾಟ್ ಮೂಲಕ ಸೂರ್ಯನ ಚಲನೆ ನೋಡಬಹುದಾಗಿದೆ. ಸೋಲಾರ್ ಗಾಗಲ್ಸ್​​​ ಗಳನ್ನು ನೀಡಲಾಗುತ್ತದೆ. ಸೋಲಾರ್ ಗಾಗಲ್ಸ್ ನಿಂದ ಸೂರ್ಯನನ್ನು ನೋಡಬಹುದು. ಯಾವುದೇ ಬೈನಾಕ್ಯುಲರ್ ಬಳಕೆ ಮಾಡುವಂತಿಲ್ಲ. ಬೆಳಕಿನ ತೀಕ್ಷ್ಣ ತೆ ಹೆಚ್ಚಿರುವ ಹಿನ್ನೆಲೆ ಬೈನಾಕ್ಯುಲರ್ ವ್ಯವಸ್ಥೆ ಕಲ್ಪಿಸಿಲ್ಲ.

 
Published by:Latha CG
First published: