• Home
  • »
  • News
  • »
  • state
  • »
  • Mining: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಗಾಮಿಲ್ಲದೇ ನಡೆಯುತ್ತಿದೆ ಮಣ್ಣು-ಕಲ್ಲು ಗಣಿಗಾರಿಕೆ!

Mining: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಗಾಮಿಲ್ಲದೇ ನಡೆಯುತ್ತಿದೆ ಮಣ್ಣು-ಕಲ್ಲು ಗಣಿಗಾರಿಕೆ!

ಮಣ್ಣು ಮತ್ತು ಕೆಂಪು ಕಲ್ಲಿನ ಗಣಿಗಾರಿಕೆ

ಮಣ್ಣು ಮತ್ತು ಕೆಂಪು ಕಲ್ಲಿನ ಗಣಿಗಾರಿಕೆ

ಬರಡು ಭೂಮಿಯನ್ನು ಕೃಷಿ ಚಟುವಟಿಕೆ ಮಾಡುವ ಉದ್ಧೇಶದಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಅತೀ ಸುಲಭವಾಗಿ ಮಣ್ಣು ಹಾಗೂ ಕಲ್ಲು ತೆಗೆಯಲು ಪರವಾನಗಿಯನ್ನು ಪಡೆಯುವ ದಂಧೆಕೋರರು, ಬಳಿಕ ಇದೇ ಪರವಾನಗಿಯ ಮೂಲಕ ಅಕ್ರಮವಾಗಿ ಮಣ್ಣನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದಾರೆ.

  • Share this:

ದಕ್ಷಿಣ ಕನ್ನಡ: ಮರಳು ಮಾಫಿಯಾಕ್ಕೆ (Sand mafia) ಹೆಸರುವಾಸಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಇತ್ತೀಚಿನ ದಿನಗಳಲ್ಲಿ  ಮಣ್ಣು (Soil) ಮತ್ತು ಕೆಂಪುಕಲ್ಲಿನ (Red stone) ದಂಧೆ ಆರಂಭಗೊಂಡಿದೆ. ಕೃಷಿಭೂಮಿ (Agriculture Land), ಕುಮ್ಕಿ ಜಮೀನು ಹೀಗೆ ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಹಲವೆಡೆ ಇಂಥ ಮಣ್ಣು ಸಾಗಾಟದ ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ (Andhra Pradesh) ಇಲ್ಲಿನ ಮಣ್ಣಿಗೆ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ. ಕೃಷಿಗಾಗಿ ಭೂಮಿಯನ್ನು (Land) ಸಮತಟ್ಟು ಮಾಡುವ ಉದ್ದೇಶಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ನಿರಂತರವಾಗಿ ದಂಧೆ ನಡೆಸುತ್ತಿರುವ ಹಲವು ನಿದರ್ಶನಗಳು ಜಿಲ್ಲೆಯಲ್ಲಿದೆ.


ದಕ್ಷಿಣ ಕನ್ನಡದಲ್ಲಿ ಮಣ್ಣು ಮಾಫಿಯಾ


ಮರಳು ಮಾಫಿಯಾದ ಬಳಿಕ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಣ್ಣಿನ ಮಾಫಿಯ ಹೆಚ್ಚಾಗುತ್ತಿದೆ. ವರ್ಗ ಭೂಮಿಯ ಜೊತೆಗೆ ಸರಕಾರಿ ಭೂಮಿಯನ್ನೂ ಸೇರಿಸಿಕೊಂಡು ಜಿಲ್ಲೆಯಲ್ಲಿ ಇದೀಗ ಮಣ್ಣಿನ ವ್ಯವಹಾರ ಆರಂಭಗೊಂಡಿದೆ. ಇವುಗಳಲ್ಲಿ ಕೆಲವು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿಯೊಂದಿಗೆ ನಡೆದರೆ, ಇನ್ನು ಹೆಚ್ಚಿನ ಕಡೆಗಳಲ್ಲಿ ಅಕ್ರಮವಾಗಿಯೇ ನಡೆಯುತ್ತಿದೆ.


ಬಂಟ್ವಾಳದಲ್ಲಿ ಹೆಚ್ಚಿನ ದಂಧೆ


ಆಂಧ್ರ ಪ್ರದೇಶ ಹಾಗೂ ಇತರ ಭಾಗದಲ್ಲಿ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲವು ಕಡೆಗಳಲ್ಲಿ ಸಿಗುವಂತಹ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ. ಬರಡು ಭೂಮಿಯನ್ನು ಕೃಷಿ ಚಟುವಟಿಕೆ ಮಾಡುವ ಉದ್ಧೇಶದಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಅತೀ ಸುಲಭವಾಗಿ ಮಣ್ಣು ಹಾಗೂ ಕಲ್ಲು ತೆಗೆಯಲು ಪರವಾನಗಿಯನ್ನು ಪಡೆಯುವ ದಂಧೆಕೋರರು, ಬಳಿಕ ಇದೇ ಪರವಾನಗಿಯ ಮೂಲಕ ಅಕ್ರಮವಾಗಿ ಮಣ್ಣನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದಾರೆ.


ಇದನ್ನೂ ಓದಿ: Hubballi: ಆಯತಪ್ಪಿ ಬೀಳ್ತಿದ್ದವನ ರಕ್ಷಿಸೋಕೆ ಹೋದವನೇ ಸತ್ತು ಹೋದ! ಇದು ಕೊಲೆಯೋ? ಆಕಸ್ಮಿಕವೋ?


ಕರಾವಳಿ ಭೌಗೋಳಿಕತೆ ಮೇಲೆ ಪರಿಣಾಮ


ಭೌಗೋಳಿಕವಾಗಿ ಕೊಂಚ ಭಿನ್ನವಾಗಿರುವ ಕರಾವಳಿಯಲ್ಲಿ ಈ ರೀತಿ ಗುಡ್ಡಗಳನ್ನು ಕೊರೆದು ಸಮತಟ್ಟು ಮಾಡುತ್ತಿರುವುದು ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ ಎನ್ನುವ ಆತಂಕವನ್ನು ಪರಿಸರಪ್ರೇಮಿಗಳು ಹೊರಹಾಕುತ್ತಿದ್ದಾರೆ.


ಸ್ಥಳೀಯ ಜನರಿಗೆ ಪ್ರಾಣ ಭೀತಿ


ದಿನಕ್ಕೂ ನೂರಾರು ಲಾರಿಗಳು ಈ ಮಣ್ಣು ಹಾಗೂ ಕೆಂಪುಕಲ್ಲಿನ ಸಾಗಾಟದಲ್ಲಿ ನಿರತವಾಗಿದ್ದು,  ಲಾರಿಗಳಿಂದಾಗಿ ಸ್ಥಳೀಯ ಜನರು ಪ್ರಾಣಭಯದಿಂದ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ಈ ಹಿಂದೆ ಮಣ್ಣು ಸಾಗಾಟದ  ಲಾರಿಯೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸವಾರನೋರ್ವ ಮೃತಪಟ್ಟಿದ್ದಾನೆ. ಈ ಕಾರಣಕ್ಕಾಗಿ ಈ ಭಾರೀ ಗಾತ್ರದ ಲಾರಿಗಳಿಗೆ ಈ ಭಾಗದಲ್ಲಿ ಓಡಾಡಲು ಅವಕಾಶ ನೀಡಬಾರದೆಂದು ಪೋಲೀಸ್ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹೀಗೆ ಎಲ್ಲಾ ಇಲಾಖೆಗಳಿಗೂ ಸ್ಥಳೀಯರು ಮನವಿ ಮಾಡಿದ್ದಾರೆ.


ಪೊಲೀಸ್ ಇಲಾಖೆ ವಿರುದ್ಧ ಆರೋಪ


ರುವಾಯಿ, ಕನ್ಯಾನ ಮೊದಲಾದ ಕಡೆಗಳಲ್ಲಿ  ಲೋಡ್ ಮಾಡಿದ ಮಣ್ಣನ್ನು ಈ ಲಾರಿಗಳು ವಿಟ್ಲ-ಕಲ್ಲಡ್ಕ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಸಾಗುತ್ತಿದ್ದು, ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಇಂಥಹ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಶೇಧವಿದೆ. ಹೀಗಿದ್ದರೂ ಈ ಲಾರಿಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಪೋಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.


ಇದನ್ನೂ ಓದಿ: Nupur Sharma: ಪ್ರವಾದಿ ಅವಹೇಳನ ಮಾಡಿದ್ದ ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು! ಹಿಂದೂ ಸಂಘಟನೆ ಆಕ್ರೋಶ


ನೈಸರ್ಗಿಕ ಲೂಟಿಗೆ ಸರ್ಕಾರ ಅವಕಾಶ?


ಈ ರೀತಿಯ ಮಣ್ಣು ಸಾಗಾಟದ ಜಮೀನುಗಳು ಬಂಟ್ವಾಳ ತಾಲೂಕಿನ ಮುಡಿಪು, ಇರಾ, ಕನ್ಯಾನ ಹೀಗೆ ಹಲವು ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ಜುಜುಬಿ ರಾಜಸ್ವವನ್ನು ಸಂಗ್ರಹಿಸಿ ಸರಕಾರ ಕೋಟಿಗಟ್ಟಲೆ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಕಾನೂನಿನ ಮೂಲಕವೇ ಅವಕಾಶ ನೀಡಿದೆ. ಇದೇ ರೀತಿಯ ಪ್ರಕ್ರಿಯೆ ನಡೆದಲ್ಲಿ ಬಳ್ಳಾರಿಯಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಮಣ್ಣಿನ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

Published by:Annappa Achari
First published: