ವಿದೇಶದಲ್ಲಿ ಉದ್ಯೋಗ ಭದ್ರತೆಯಿಲ್ಲದೇ ಖಿನ್ನತೆಗೆ ಒಳಗಾಗಿ ಭಾರತೀಯ ಇಂಜಿನಿಯರ್ ಆತ್ಮಹತ್ಯೆ..!
news18
Updated:September 4, 2018, 7:21 PM IST
news18
Updated: September 4, 2018, 7:21 PM IST
ನ್ಯೂಸ್ 18 ಕನ್ನಡ
ರಾಮನಗರ(ಸೆ. 04) : ಉದ್ಯೋಗ ಭದ್ರತೆ ಇಲ್ಲದೆ ಖಿನ್ನತೆಗೆ ಒಳಗಾಗಿದ್ದ ಭಾರತ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆದರ್ಲೆಡ್ ದೇಶದಲ್ಲಿ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡವನನ್ನು ಶಿವಪ್ರಸಾದ್ ಎಂದು ಗುರುತಿಸಲಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಗ್ರಾಮದವನಾದ ಶಿವಪ್ರಸಾದ್ ನೆದರ್ಲೆಡ್ ದೇಶದ ಲಿಬರ್ಟಿ ಗ್ಲೋಬಲ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸವನ್ನು ಮಾಡುತ್ತಿದ್ದ. ಶಿವಪ್ರಸಾದ್ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಎಂಜಿನಿಯರ್ ಶಿವಪ್ರಸಾದ ಇನ್ನೊಂದು ತಿಂಗಳಲ್ಲಿ ಕೆಲಸದ ಅವಧಿ ಮುಗಿಯಲಿದ್ದು, ಮುಂದೆ ಉದ್ಯೋಗ ಭದ್ರತೆ ಇರುವುದಿಲ್ಲ ಎಂದು ಖಿನ್ನತೆ ಹಿನ್ನಲೆ ಆತ್ಮಹತ್ಯೆ ಮಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಶಿವಪ್ರಸಾದ್ನ ಕುಟುಂಬಸ್ಥರು ಬೆಂಗಳೂರಿನ ರಾಜತಾಂತ್ರಿಕ ಕಚೇರಿಗೆ ಭೇಟಿ ನೀಡಿ ಸಾವಿನ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

Loading...